ಕಲಬುರಗಿ: ಕುಟುಂಬ ಜವಾಬ್ದಾರಿ ಜೊತೆ ಸಾಮಾಜಿಕ ಹಾಗೂ ಪುಸ್ತಕ ಸಂಸ್ಕøತಿಯ ಕಳಕಳಿ ವಾತಾವರಣ ಕಾರ್ಯ ಶ್ಲಾಘನೀಯ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಅಭಿಪ್ರಾಯಪಟ್ಟರು.
ನಗರದ ಎನ್‍ಜಿಓ ಕಾಲೋನಿಯ ಮಾರುತಿ ಪ್ರೆಸ್ಟೀಜ್ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಂಗಮನಾಥ ರೇವತಗಾಂವ ರಚನೆಯ `ಕೊರೊನಾ ಕನವರಿಸುವ ವಚನಗಳು’ (ಗುಲಬರ್ಗಾ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೃತಿ) ಪುಸ್ತಕ ಬಿಡುಗಡೆ ಹಾಗೂ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನೆ, ಮಕ್ಕಳು ಸಂಗಡ ಶಿಕ್ಷಣ ಕೊಡುವ ಪದ್ಧತಿಗೆ ಸೀಮಿತವಾಗದೆ ಲೇಖಕ- ಪತ್ರಕರ್ತ ರೇವತಗಾಂವ ಅವರು, ಗೃಹಪ್ರವೇಶದಂದು ಕೃತಿ ಬಿಡುಗಡೆ ಮಾಡುವ ಮೂಲಕ ವಿನೂತನ ನಿತ್ಯ ನೂತನಕ್ಕೆ ಕಾರಣವಾಗಿದ್ದಾರೆ ಎಂದು ಅವರು ಹೇಳಿದರು.
ಕೊರೊನಾ ಹೊತ್ತಿನಲ್ಲಿ ಆತಂಕದ ನಡುವೆ ವಚನಗಳನ್ನು ಸೃಷ್ಟಿಸಿ ಕೃತಿ ಮೂಲಕ ಜಾಗೃತಿಯನ್ನು ತಂದಿದ್ದಾರೆ. ಬಸವಣ್ಣ ಸಾಂಸ್ಕøತಿಕ ನಾಯಕ ಎಂದು ಸರಕಾರ ಗುರುತಿಸುವುದಕ್ಕಿಂತ ಮುಂದೆ ಎಲ್ಲೆಡೆ ಪ್ರಸರವಾಗಿದೆ. ಸತ್ಯ ಸಂಘರ್ಷ ಮಾಡುತ್ತದೆ. ಸುಳ್ಳಿಗೆ ಸಂಘರ್ಷ ಬೇಕಿಲ್ಲ ಎಂದ ಅವರು, ಸಮಾಜದಲ್ಲಿ ಸಾಹಿತ್ಯ ಸಮಹಿತವಾಗಿದೆ. ಅಕ್ಷರ ಬೆರಗಿನಿಂದ ಬದಲಾಗುವ ಸನ್ನಿವೇಶ ಕಾಣುತ್ತಿದ್ದೇವೆ ಎಂದು ಅವರು ವಿವರಿಸಿದರು.
ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಕೃತಿ ಪರಿಚಯ ಮಾಡಿದರು. ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಲಿಂಗರಾಜಪ್ಪ ಅಪ್ಪ, ಪ್ರಕಾಶಕ ಅಪ್ಪಾರಾವ ಅಕ್ಕೋಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸಿದ್ದರು.
ಆರಂಭದಲ್ಲಿ ಕು.ಸೃಜನಾ, ಕು.ಸಂಪದಾ ಪ್ರಾರ್ಥನೆ ಹಾಡಿದರು. ರಶ್ಮಿ ಸಂಗಮನಾಥ-ಜ್ಯೋತಿ ಗಲಗಿನ್ ಸ್ವಾಗತಗೀತೆ ಹಾಡಿದರು. ಲೇಖಕ-ಪತ್ರಕರ್ತ ಸಂಗಮನಾಥ ರೇವತಗಾಂವ ಸ್ವಾಗತಿಸಿದರು. ಸಿ.ಎಸ್.ಮಾಲೀಪಾಟೀಲ ನಿರೂಪಿಸಿದರು. ಹಿರಿಯ ಲೇಖಕ ಮಹಿಪಾಲರಡ್ಡಿ ಮುನ್ನೂರ ವಂದಿಸಿದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…