ಬಿಸಿ ಬಿಸಿ ಸುದ್ದಿ

ಜನರ ಸೇವೆ ಮಾಡುವುದು ಜನಪ್ರತಿನಿಧಿಗಳ ಜವಾಬ್ದಾರಿ

ಶಹಾಬಾದ:ಜನಪ್ರತಿನಿಧಿಗಳಾದ ಮೇಲೆ ಜನರ ಸೇವೆ ಮಾಡುವುದು ಅವರ ಜವಾಬ್ದಾರಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಹೇಳಿದರು.

ಅವರು ಸೋಮವಾರ ನಗರಸಭೆಯ ವ್ಯಾಪ್ತಿಯ ವಾರ್ಡ ನಂ.25 ರಲ್ಲಿ ಆಯೋಜಿಸಲಾದ ಮಣಿರಾಜ ಚಿನ್ನಸ್ವಾಮಿ ಅವರಿಗೆ ನಗರಸಭೆಯ ನೂತನ ಸದಸ್ಯೆ ಪುತಲಾ ಕಾಶೀನಾಥ ಜೋಗಿ ಅವರು ಅಟ್ಲಾಸ್ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೌರವಿಸಿದರು.

ಇತ್ತಿಚ್ಚಿಗೆ ನಡೆದ ನಗರಸಭೆಯ ವಾರ್ಡ ನಂ.25ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುತಲಾ ಕಾಶಿನಾಥ ಜೋಗಿ ಅವರು ಮತಯಾಚನೆ ಮಾಡುವ ಸಂದರ್ಭದಲ್ಲಿ ಬಡ ಕುಟುಂಬದ ಮಣಿರಾಜ ಚಿನ್ನಸ್ವಾಮಿ ಅವರು ನನಗೆ ಓಡಾಡಲು ಏನು ಇಲ್ಲ.ಇದರಿಂದ ಬಹಳ ತೊಂದರೆಯಾಗುತ್ತಿದೆ.ನೀವು ಗೆಲುವು ಸಾಧಿಸಿದ ನಂತರ ನನಗೆ ಒಂದು ಸೈಕಲ್ ನೀಡಿದರೆ ಅನುಕೂಲವಾಗುತ್ತದೆ ಎಂದು ಹೇಳಿದ್ದರು.

ಅದರಂತೆ ಗೆಲುವು ಸಾಧಿಸಿದ ನಂತರ ಮಣಿರಾಜ ಚಿನ್ನಸ್ವಾಮಿ ಅವರಿಗೆ ನಗರಸಭೆಯ ನೂತನ ಸದಸ್ಯೆ ಪುತಲಾ ಕಾಶೀನಾಥ ಜೋಗಿ ಅವರು ಅಟ್ಲಾಸ್ ಸೈಕಲ್ ನೀಡಿ ಗೌರವಿಸಿದ್ದಾರೆ.ಇದೊಂದು ಉತ್ತಮ ಕಾರ್ಯ.ಬಡವರಿಗೆ ಮಾಡಿದ ಕಾರ್ಯ ದೇವರಿಗೆ ಸಲ್ಲುತ್ತದೆ.ಇದರಂತೆ ಗೆಲುವಿಗೆ ಕಾರಣರಾದ ವಾರ್ಡನ ಎಲ್ಲಾ ಮತದಾರರ ಸೇವೆ ಮಾಡುವುದು ಸದಸ್ಯರ ಕೆಲಸ.ಅದನ್ನು ಉತ್ತಮ ರೀತಿಯಲ್ಲಿ ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕುಮಾರ ಚವ್ಹಾಣ, ಹಾಷಮ್ ಖಾನ, ಮಹ್ಮದ್ ಜಾವೀದ್,ರಾಜು ಮೇಸ್ತ್ರಿ, ಮೀರಾಜ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಸಮಸ್ತ ಲಿಂಗಾಯತರ ಪ್ರಗತಿಗೆ ಲಿಂಗಾಯತ ಸ್ವತಂತ್ರ ಧರ್ಮ ಅಗತ್ಯ: ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲಂ 371ಜೆ ಯಂತೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲು ಸರಕಾರದ…

19 mins ago

ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನದಲ್ಲಿ ವೈದ್ಯ ಶ್ರೀ ಪುರಸ್ಕೃತ ಡಾ. ಶರಣಬಸಪ್ಪ ಕ್ಯಾತನಾಳ ಪುರಸ್ಕಾರ

ಕಲಬುರಗಿ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ವಿಭಾಗ ಮಟ್ಟದ 2ನೇ ದಾಸ ಸಾಹಿತ್ಯ ಸಮ್ಮೇಳನ…

59 mins ago

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

3 hours ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

3 hours ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

5 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

5 hours ago