ಹೈದರಾಬಾದ್ ಕರ್ನಾಟಕ

ಕಲಬುರಗಿ: ಪರಿಹಾರ ನೀಡುವಂತೆ ಪಾಲಿಕೆ ಸಭೆಯಲ್ಲಿ ಸಾಜೀದ್ ಕಲ್ಯಾಣಿ ಏಕಾಂಗಿ ಧರಣಿ

ಕಲಬುರಗಿ: ಇತ್ತೀಚಿಗೆ ಮಿಜ್ಬಾ ನಗರದಲ್ಲಿ ಬಾಲಕಿಗೆ ನಾಯಿ ಕಚ್ಚಿ ಗಂಭೀರ ಗಾಯಗಳಾಗಿ ಇದೀಗ ಆಸ್ಪತ್ರೆಯಲ್ಲಿ ಜೀವನಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಬಾಲಕಿಯ ಕುಟುಂಬಕ್ಕೆ ಪರಿಹಾರ ಧನ ನೀಡುವುದಾಗಿ ಮಾತು ಕೊಟ್ಟು ಮರೆತ ಪಾಲಿಕೆ ನಡೆಯನ್ನು ಖಂಡಿಸಿದ ಮಹಾನಗರ ಪಾಲಿಕೆ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜೀದ್ ಕಲ್ಯಾಣಿ ಏಕಾಂಗಿಯಾಗಿ ನೆಲದ ಮೇಲೆ ಕುಳಿತು ಧರಣಿ ನಡೆಸಿದ ಘಟನೆ ನಡೆಯಿತು.

ನಗರದ ಇಂದಿರಾ ಸ್ಮಾರಕ ಭವನ (ಟೌನ್ ಹಾಲ್ ) ದಲ್ಲಿ ಇಂದು ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ್ ದರ್ಗಿ ಅವರು ಅಧ್ಯಕ್ಷತೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಮುಂದುವರೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕಳೆದ ಸಾಮಾನ್ಯ ಸಭೆಯಲ್ಲಿ ಬಾಲಕಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಪಾಲಿಕೆಯ ವತಿಯಿಂದ ಭರವಸೆ ನೀಡಲಾಗಿತ್ತು.

ಆದರೇ ಇಲ್ಲಿಯವರೆಗೂ ಬಾಲಕಿಯವರ ಕುಟುಂಬಕ್ಕೆ ಧನ ಸಹಾಯಮಾಡದೆ ಇರುವುದರಿಂದ ಇಂದು ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಾಗ ಪಾಲಿಕೆಯ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷ ಇದಕ್ಕೆ ಧ್ವನಿ ಎತ್ತಿದ್ದರಿಂದ ಸಾಜೀದ್ ಕಲ್ಯಾಣಿ ಅವರು ಬಾಲಕಿ ಕುಟುಂಬಕ್ಕೆ ಸಹಾಯ ಹಸ್ತ್ ನೀಡಬೇಕೆಂದು ಒತ್ತಾಯಿಸಿದ್ದರು. ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ ದರ್ಗಿ ಹಾಗೂ ಪಾಲಿಕೆ ಆಯುಕ್ತ ಪಾಟೀಲ ದೇವಿದಾಸ ಭುವನೇಶ ಅವರು ಒಂದುವರದೊಳಗೆ 5 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

2014-15 ನೇ ಸಾಲಿನ ಲೆಕ್ಕ ಪತ್ರ ವಿಚಾರ ಜನರಿಗೆ ಮೋಸ ಮಾಡುವ ಬದಲು ಅವರಿಗೆ ಇರಲು ಮನೆಗಳನ್ನು ನಿರ್ಮಾಣ ಮಾಡಿ ಎಂದು ಮಹಾನಗರ ಪಾಲಿಕೆ ಸದಸ್ಯರು ಸಭೆಯ ಗಮನಕ್ಕೆ ತಂದರು ಅಕೌಂಟ್ ವಿಭಾಗದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಅದರ ಬಗ್ಗೆ ಒಂದು ಸರಕಾರಕ್ಕೆ ಒಂದು ಪತ್ರ ಬರೆಯರಿ ಎಂದು ಪಾಲಿಕೆಯ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ಶಾಂತಾಬಾಯಿ ಚಂದ್ರಶೇಖರ ಮಾತನಾಡಿ,ವಾರ್ಡ ನಂಬರ 31 ರಲ್ಲಿ ಅಂಬೇಡ್ಕರ್ ವಾರ್ಡನಲ್ಲಿ ನೀರಿನ ಟ್ಯಾಂಕ್ ಕಟ್ಟಲು ಒಂದು ವರ್ಷ ಆದರು ಕೂಡ ಇನ್ನು ಕಾಮಗಾರಿ ಪರಿಪೂರ್ಣಗೊಂಡಿಲ್ಲ ಎಂದು ಹೇಳಿದ್ದಾಗ ಎಲ್ ಆ್ಯಂಡ್ ಟಿ. ಏಜೆನ್ಸಿಯ ಪ್ರೋಜೆಕ್ಟ್ ಮಾನ್ಯೇಜರ್ ಮಾತನಾಡಿ, ಈಗಾಗಲೆ ಒಂದು ಟ್ಯಾಂಕ್ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದರು ಆದರೆ ಈ ಕಾಮಗಾರಿಯನ್ನು ಮೂರು ನಾಲ್ಕು ತಿಂಗಳಲ್ಲಿ ಸಂಪೂರ್ಣವಾಗುತ್ತದೆ ಎಂದು ಮಹಾನಗರ ಪಾಲಿಕೆ ಆಯಕ್ತರಾದ ಪಾಟೀಲ ಭುವನೇಶ್ವ ದೇವಿದಾಸ ಅವರು ಭರವಸೆ ನೀಡಿದ್ದರು.

ಹೌಸಿಂಗ ಬೋರ್ಡನಲ್ಲಿ ನೀರಿನ ಸಮಸ್ಯೆಯಿದೆ ಹಳೆಯ ಟ್ಯಾಂಕ್ ಹಾಳಾಗಿದ್ದು ಪಾಲಿಕೆಯ ಸದಸ್ಯರು ಕೇಳಿದರು ಹಳೆಯ ಟ್ಯಾಂಕಿನ ಎಲ್ಲಾ ಕನೆಕ್ಷನ್‍ಗಳು ಹೊಸ ಟ್ಯಾಂಕ್ ನೀಡಿ ಅದನ್ನ ಪರಿಹಾರ ಮಾಡಿಕೊಡುವುದಾಗಿ ಅಧಿಕಾರಿಗಳು ಹೇಳಿದರು.

ಎಲ್ಲಾ ವಾರ್ಡಗಳಿಗೆ ನೀರಿನ ಬೋರವೆಲ್ ಹಾಕಿದರೆ ಕೆಲವೊಂದು ಏರಿಯಾದಲ್ಲಿ ನೀರು ಬಿಳುವುದಿಲ್ಲಾ ಅದಕ್ಕೆ ಸರಿಯಾದ ಪ್ಲ್ಯಾನ್ ಮಾಡಿ ಎಂದು ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

139 ನಾನ್ ವರ್ಕಿಂಗ್ ಬೂರವೇಲ ಬಂದಾಗಿವೆ ಬೂರವೆಲ್ ನಲ್ಲಿ ಸುಮಾರು ನೀರು ಇರುವುದರಿಂದ ಬೂರವೆಲ್‍ಗಳು ಪ್ಲಾಶಿಂಗ್ ಮಾಡುವುದಾಗಿ ಮಹಾನಗರ ಪಾಲಿಕೆಯ ಆಯುಕ್ತರು ಮನವಿ ಮಾಡಿದ್ದರು.

55 ವಾರ್ಡಗಳಿಗೆ ಕೇವಲ 3 ವಾಟರ್ ಟ್ಯಾಂಕರ ಸರಿ ಹೋಗುತ್ತಾ ಎಂದು ಸದಸ್ಯರು ಪ್ರಶ್ನೆ ಕೇಳಿದರು ಮುಂದೆ ಸರಿಯಾದ ಕ್ರಮ ತೆಗೆದುಕೊಂಡು ಚನ್ನಾಗಿ ನೀರು ಸರಬಾರಜು ಮಾಡುತ್ತವೆ ನೀರಿನ ವಾಟರ್ ಟ್ಯಾಂಕ್‍ಗಳನ್ನ ಹೆಚ್ಚಿಸುತ್ತವೆ ಎಂದು ಅಧಿಕಾರಿಗಳು ಸಭೆಯಲ್ಲಿ ಭರವಸೆ ನೀಡಿದರು.

ಬೋಸ್ಕಾ ಕೆರೆಗೆ ಎಷ್ಟು ವಾರ್ಡಗಳು ಬರುತ್ತವೆ 55 ವಾರ್ಡಗಳು ಬರುತ್ತವೆ 55 ವಾರ್ಡಗಳಿಗ ಹೇಗೆ ನೀರು ಸರಬರಾಜು ಮಾಡುತ್ತೀರಿ ಎಂದು ಸದಸ್ಯರು ಕೇಳಿದರು ಭೀಮಾನದಿಯಿಂದ, ಬೆಣ್ಣೆತೊರಾ ನದಿಯಿಂದ ನಗರಕ್ಕೆ ನೀರು ಸರಬರಾಜು ಮಾಡಲಾಗುವುದು ಮುಂದಿನ ಬೇಸಿಗೆ ಸಮೀಸುತ್ತಿರುವ ಹಿನ್ನಲೆಯಲ್ಲಿ ಕ್ರೀಯಾ ಯೋಜನೆ ಸಿದ್ದಪಡಿಸಲಾಗಿದೆ ಇನ್ನೂ ಎರಡು ತಿಂಗಳ ಅವಧಿಯಲ್ಲಿ ನೀರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ ಪಾಲಿಕೆ ಆಯುಕ್ತರು ಎಂದರು.

ನಿಮ್ಮಲ್ಲಿ ಒಬ್ಬ ಬೋರೆವೆಲ್ ಅಪರೇಟರ್ ಇಲ್ಲ ಕೆಲವು ಕಡೆ ಬೋರೆವೆಲ್ ಬಂದಾಗಿವೆ ನಿಮ್ಮಲ್ಲಿ ಸರಿಯಾದ ಟೆಕ್ನಿಶನ್ ಇಲ್ಲ ಬೋರೆವೆಲ್ ಅಪರೇಟರ್ ಲೀಸ್ಟ್ ಏಕೆ ಕೊಡುತ್ತಿಲ್ಲ. ನೀರಿನ ಟ್ಯಾಂಕರ್ ಕೇವಲ 3-4 ಇವೆ. 7 ಲಕ್ಷ ಜನರಿಗೆ ಅದು ಹೇಗೆ ಸರಿ ಹೋಗುತ್ತದೆ ಎಂದು ಪ್ರಶ್ನೆ ಮಾಡಲಾಯಿತು. ಬೋರವೆಲ್ ಡ್ರಿಲ್ ಮಾಡುವುದಾಗಿ ಜನವರಿಯಲ್ಲಿ ಮಾಡಬೇಕು ಸದಸ್ಯರು ಸೂಚಿಸಿದರು.

ಅದೇ ರೀತಿಯಾಗಿ ಪ್ರತಿಯೊಂದು ವಾರ್ಡ್‍ಗಳಿಗೆ ಆರ್.ಒ. ಪ್ಲಾಂಟ್‍ಗಳನ್ನು ನಿರ್ಮಾಣ ಮಾಡಲು ಕ್ರಮಕೈಗೊಳ್ಳಲು ಹಾಗೂ ಜಿಲ್ಲೆಯ ಗ್ರಂಥಾಲಯಗಳು ಪ್ರತಿಯೊಂದು ವಾರ್ಡ್‍ನಲ್ಲಿ ಸ್ಥಾಪಿಸಬೇಕೆಂದು ಉಪ ಮಹಾಪೌರರಾದ ಶಿವನಾಂದ ಡಿ ಪಿಸ್ತಿ ಪ್ರಸ್ತಾವನೆ ಸಲ್ಲಿಸಿದರು.

ಅದಕ್ಕೆ ಮಹಾನಗರ ಪಾಲಿಕೆ ಆಯುಕ್ತರ ಎಲ್ಲಿ ಎಲ್ಲಿ ಗ್ರಂಥಾಲಯಗಳಿಗೆ ಎಲ್ಲಿ ಖಾಲಿ ಕಟ್ಟಡಗಳಿವೆ ಎಲ್ಲಿ ಸಮುದಾಯ ಭವನಗಳನ್ನು ಉಪಯೋಗಿಸಿಕೊಂಡು ಗ್ರಂಥಾಲಯಗಳ ಮಾಹಿತಿ ಪಡೆದು ಎಲ್ಲರ ಒಪ್ಪಿಗೆ ಮೇರೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಪಾಲಿಕೆ ಸದಸ್ಯರುಗಳಾದ ಮಾಜಿ ಮಹಾಪೌರ ಸೈಯದ್ ಅಹ್ಮದ್, ಮಹಾನಗರ ಪಾಲಿಕೆ ಆರೋಗ್ಯ ಸಮಿತಿ ಅಧ್ಯಕ್ಷ ವಿಶಾಲ ಕುಮಾರ ಎಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರಗಳು ಹಾಗೂ ಅಧಿಕಾರಿಗಳಾಧ ಉಪ ಆಯುಕ್ತರಾದ ಮಾಧವ ಗಿತ್ತೆ, ಉಪ ಆಯುಕ್ತರು ಕಂದಾಯ ಮಮತಾ ಕುಮಾರಿ, ಇ.ಇ. ಕೆ.ಎಚ್.ಪಾಟೀಲ, ಇಇ.. ಶಿವಾನಗೌಡ ಇ.ಇ. ಆಸ್ತಿ ಅಧಿಕಾರಿ ಸವಿತ್ರಿ ಸಲಗರ. ಕೆ.ಯು.ಐ.ಡಿ.ಎಫ್.ಸಿ. ಅಧೀಕ್ಷ ಅಭಿಯಂತ ಕಾಂತ ರಾಜ ಪಾಲಿಕೆ ಅಭಿವೃದ್ಧಿ ಅಧಿಕಾರಿ ಆರ್.ಪಿ.ಜಾಧವ ಮಹಾಪೌರರ ಆಪ್ತ ಸಹಾಯಕಿ ವೈಶಾಲಿ ಹಾಗೂ ವಾರ್ಡಿನ ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago