ಸುರಪುರ: ತಾಲ್ಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಮನೆಗಳಲ್ಲಿ ಸಾಕಿದ ನಾಯಿಗಳಿಗೆ ವಿಷವಿಕ್ಕಿ ಸಾಯಿಸಿದ ಧಾರುಣ ಘಟನೆ ನಡೆದಿದೆ.ಗ್ರಾಮದ ಜನತೆ ತಮ್ಮ ಮನೆಗಳಲ್ಲಿ ಸಾಕಿದ ಒಳ್ಳೆ ತಳಿಯ ನಾಯಿಗಳಿಗೆ ಯಾರೋ ಕಿಡಿಗೇಡಿಗಳು ಮಾಂಸದಲ್ಲಿ ಬೆಳೆಗಳಿಗೆ ಸಿಂಪಡಿಸುವ ಕೀಟ ನಾಶಕವನ್ನು ಬೆರೆಸಿ ಇಟ್ಟಿದ್ದರಿಂದ.ಮಾಂಸ ಸೇವಿಸಿದ ಸುಮಾರು ಹದಿನೈದಕ್ಕು ಹೆಚ್ಚು ನಾಯಿಗಳು ಸಾವಿಗೀಡಾಗಿವೆ.
ಈ ಹಿಂದೆಯುಕೂಡ ಇಪ್ಪತ್ತಕ್ಕು ಹೆಚ್ಚು ನಾಯಿಗಳಿಗೆ ಇದೇ ರೀತಿ ಮಾಡಿ ಸಾಯಿಸಲಾಗಿತ್ತು.ಈಗ ನಮ್ಮ ಮನೆಯಲ್ಲಿ ಸಾಕಿದ ನಾಯಿಯೂ ಸೇರಿದಂತೆ ಅನೇಕ ನಾಯಿಗಳನ್ನು ಕಿಡಿಗೇಡಿಗಳು ಸಾಯಿಸಿದ್ದು,ಇವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ನಾಯಿ ಮಾಲೀಕ ಭಿಮನಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ನಾಯಿಗಳ ಸಾವಿನ ಸುದ್ದಿ ತಿಳಿದು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದ ನಂತರ ನಾಯಿಗಳಿಗೆ ಆಹಾರದಲ್ಲಿ ವಿಷ ಬೆರೆಸಿ ಸಾಯಿಸಿದ ಸಂಗತಿ ಗೊತ್ತಾಗಿದ್ದು.ಗ್ರಾ.ಪಂ ಅಧ್ಯಕ್ಷ ಭೀರಪ್ಪ ಮಂಗಳೂರು,ಉಪಾಧ್ಯಕ್ಷ ಹಣಮಂತ್ರಾಯ ಟಣಕೇದಾರ,ಕಾರ್ಯದರ್ಶಿ ಮನೂರ ಬಾಷಾ,ರಾಜೇಸಾಬ ಚೌದ್ರಿ,ಬಸವರಾಜ ಟಣಕೇದಾರ ಇತರರು ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…