ಬಿಸಿ ಬಿಸಿ ಸುದ್ದಿ

ಅದೂರಿಯಾಗಿ ಜರುಗಿದ ಕರ್ನಾಟಕ ಸಂಭ್ರಮ-50 ರಥ ಯಾತ್ರೆ

ಶಹಾಬಾದ: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-50 ರಥ ಯಾತ್ರೆ ಗುರುವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ತಾಲೂಕಾಡಳಿತ ವತಿಯಿಂದ ತಹಸೀಲ್ದಾರ ಜಗದೀಶ.ಎಸ್.ಚೌರ್ ,ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಹಾಗೂ ಕನ್ನಡ ಪರ ಸಂಘಟನೆಗಳು ಅದ್ಧೂರಿಯಾಗಿ ಸ್ವಾಗತಿಸಿದರು.

ಭಂಕೂರ ಗ್ರಾಮದ ವೃತ್ತದಲ್ಲಿ ಭುವನೇಶ್ವರಿ ದೇವಿ ಹಾಗೂ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ನಗರದ ವಾಡಿ ವೃತ್ತ, ಬಸವೇಶ್ವರ ವೃತ್ತ, ಶಾಸ್ತ್ರಿ ವೃತ್ತ, ನೆಹರು ವೃತ್ತ, ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ನಂತರ ನಗರದಿಂದ ತೊನಸನಹಳ್ಳಿ ಮೂಲಕ ರಥ ಯಾತ್ರೆ ಜೇವರ್ಗಿ ತಾಲೂಕಿಗೆ ತೆರಳಿತು.

ಶಾಲಾ ಮಕ್ಕಳು, ಶಿಕ್ಷಕರು, ವಿವಿಧ ಇಲಾಖೆಯ ಸಿಬ್ಬಂದಿಗಳು ರಥಯಾತ್ರೆಯಲ್ಲಿ ಪಾಲ್ಗೊಂಡು ಕನ್ನಡ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದರು. ಹಾಗೆ ಕನ್ನಡ ಅಭಿಮಾನಿಗಳು ಕನ್ನಡ ಪರ ಸಂಘಟನೆಗಳು ಸಂಘ ಸಂಸ್ಥೆಯ ಮುಖಂಡರು ಮೆರವಣಿಗೆಯಲ್ಲಿ ಕನ್ನಡ ಹಾಡಿಗೆ ಕುಣಿದು ಸಂಭ್ರಮಿಸಿದರು.

ಯಾತ್ರೆಯಲ್ಲಿ ಡೊಳ್ಳು ಕುಣಿತ, ಹಲಗೆ ಮೇಳ ಸೇರಿದಂತೆ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು. ಶಾಲಾ ಮಕ್ಕಳು ವಿಶೇಷ ನೃತ್ಯದ ಮೂಲಕ ಮೆರವಣಿಗೆಗೆ ಮೆರಗು ತಂದಿದ್ದರು. ಕನ್ನಡ ಪರ ಘೋಷಣೆಗಳನ್ನು ಕೂಗುವ ಮೂಲಕ ಸಂಭ್ರಮಿಸಲಾಯಿತು.

ಕರ್ನಾಟಕ ರಾಜ್ಯ ನಾಮಕರಣಗೊಂಡು 50 ವರ್ಷ ಪೂರೈಸಿದೆ ಈ ಸ್ಮರಣಾರ್ಥವಾಗಿ, ಘನ ಸರ್ಕಾರ ಕರ್ನಾಟಕದ ಇತಿಹಾಸ ಕಲೆ, ಸಾಹಿತ್ಯ, ನಾಡು, ನುಡಿ ಸಂಸ್ಕøತಿಯ ಪ್ರತಿಯೊಬ್ಬರು ತಿಳಿಯಲೆಂದು ರಾಜ್ಯದಾದ್ಯಂತ ಕನ್ನಡದ ಜ್ಯೋತಿ ರಥಯಾತ್ರೆ ಕೈಗೊಂಡಿದೆ.ಇದು ನಮ್ಮ ಕನ್ನಡ ನಾಡಿನ ರಥೋತ್ಸವ,ಸಂಭ್ರಮದಿಂದ ಈ ರಥಯಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ತಹಶಿಲ್ದಾರ ಜಗದೀಶ.ಎಸ್.ಚೌರ್ ಹೇಳಿದರು.

ತಾಪಂ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿನಾಥ ರಾವೂರ ಮಾತನಾಡಿ, ನಮ್ಮ ಕನ್ನಡ ಭಾμÉಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ, ಕನ್ನಡದ ಇತಿಹಾಸದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ತಿಳಿದಿರಬೇಕು. ಹಾಗೆ ಕರ್ನಾಟಕ ಏಕೀಕರಣ ಮತ್ತು ನಾಡು ನುಡಿಗಾಗಿ ದುಡಿದ ಮಹನೀಯರನ್ನು ನಾವುಗಳು ಆಗಾಗ ಸ್ಮರಿಸಬೇಕು ಎಂದರು.

ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ್,ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ,ಸಿಡಿಪಿಓ ವಿಜಯಲಕ್ಷ್ಮಿ ಹೇರೂರ್, ಪಿಎಸ್‍ಐ ಚಂದ್ರಕಾಂತ ಮಕಾಲೆ, ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ಕಸಾಪ ಗೌರವಕಾರ್ಯದರ್ಶಿಗಳಾದ ಶರಣು ವಸ್ತ್ರದ್ ಹಾಗೂ ಬಸವರಾಜ ಮದ್ರಕಿ,ಕರವೇ ತಾಲೂಕಾಧ್ಯಕ್ಷ ಯಲ್ಲಾಲಿಂಗ ಹೈಯ್ಯಳಕರ್, ಗೌರವಾಧ್ಯಕ್ಷ ಬಸವರಾಜ ಮಯೂರ, ಕಸಾಪ ಭಂಕೂರ ಘಟಕದ ಅಧ್ಯಕ್ಷ ಪ್ರಕಾಶ ಪಾಟೀಲ,ಗಣ್ಯರಾದ ನರೇಂದ್ರ ವರ್ಮಾ, ವಸತಿ ನಿಲಯ ಮೇಲ್ವಿಚಾರಕ ರವಿ ಮುತ್ತಗಿ, ಮಹೇಶ ಧರಿ,ಭರತ್ ಧನ್ನಾ,ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್,ಅಮೃತ ಮಾನಕರ್,ರಾಜು ನಾಟೇಕಾರ, ಮಹೇಶ ಕಾಂಬ್ಳೆ, ನಾಗರಾಜ ಅಲ್ದಿಹಾಳ, ಪರಶುರಾಮ ಮುತ್ತಗಿಕರ್ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಇತರರು ಇದ್ದರು.

emedialine

Recent Posts

ಜಿಲ್ಲಾಧ್ಯಕ್ಷ-ತಾಲೂಕು ಅಧ್ಯಕ್ಷರಾಗಿ ಬಳಿರಾಮ ರಾಮಜಿ, ಶಿವರಾಜ ದೇಶಮುಖಪ್ಪಾ ನೇಮಕ

ಕಲಬುರಗಿ: ಕಲ್ಯಾಣ ಕರ್ನಾಟಕ ರೈತಾಪಿ ಸಂಘದ ಜಿಲ್ಲಾ ಅಧ್ಯಕ್ಷರನ್ನಾಗಿ ಬಳಿರಾಮ ರಾಮಜಿ ಚೌವ್ಹಾಣ, ಹಾಗೂ ತಾಲೂಕು ಅಧ್ಯಕ್ಷರನ್ನಾಗಿ ಶಿವರಾಜ ದೇಶಮುಖಪ್ಪಾ…

34 mins ago

ಪುರಾತನ ಕಾಲದಲ್ಲಿ ನಾಗಾವಿ ನಾಡು ಸಾಂಸ್ಕøತಿಕವಾಗಿ ಪ್ರಸಿದ್ಧ: ತಹಸಿಲ್ದಾರ್ ಹಿರೇಮಠ್

ಕಲಬುರಗಿ: ಪುರಾತನ ಕಾಲದಲ್ಲಿ ನಾಗಾವಿ ಪ್ರದೇಶವು ದಕ್ಷಿಣ ಭಾರತದಲ್ಲಿ ನಾಗಾವಿ ಪ್ರಸಿದ್ದಿ ಪಡೆದ ವಿಶ್ವ ವಿದ್ಯಾಲಯವಾಗಿತ್ತು ಎಂದು ತಹಸಿಲ್ದಾರ್ ನಾಗಯ್ಯ…

11 hours ago

ಮತದಾರರ ನೋಂದಣಿಗೆ ನವೆಂಬರ್ 23 ಮತ್ತು‌ 24 ರಂದು ವಿಶೇಷ ಅಭಿಯಾನಬಿ:.ಫೌಜಿಯಾ ತರನ್ನುಮ್

ಕಲಬುರಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿ.1-1-2025 ಅರ್ಹತಾ ದಿನವನ್ನಾಗಿ ಪರಿಗಣಿಸಿಕೊಂಡು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಲಾಗುತ್ತಿದ್ದು,…

11 hours ago

ವಿಕಲಚೇತನರು ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಜಯಸಾಧಿಸಬೇಕು: ರಾಯಪ್ಪ ಹುಣಸಗಿ

ಕಲಬುರಗಿ: ವಿದ್ಯಾರ್ಥಿಗಳು ಜಿಲ್ಲೆಯ ಎಲ್ಲಾ ವಿಕಲಚೇತನರಿಗೆ ಹೆಚ್ಚಿನ ಸ್ಥಾನಮಾನಗಳನ್ನು ಸಿಗಬೇಕು ಹಾಗೂ ಎಲ್ಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಜಯಸಾಧಿಸಬೇಕು ಎಂದು ಅಪರ…

11 hours ago

ಕಲಬುರಗಿ: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನಾಲ್ವರು ಭಾರತೀಯರು

ಪ್ರಜ್ವಲ್,ಧೀರಜ್ ಸೋಲಿಸಿ ಗೆದ್ದು ಬೀಗಿದ ಬೊಬ್ರೋಬ್ ಹಾಗೂ ಸುಲ್ತಾನೋವ್ ಕಲಬುರಗಿ, ನವೆಂಬರ್ ೨೧ : ಐಟಿಎಫ್ ಕಲಬುರಗಿ ಓಪನ್ ಟೆನಿಸ್…

11 hours ago

ಜಾನಪದ ಉಳಿಸಿ ಬೇಳೆಸ ಬೇಕಾದರೆ ಯುವಕರು ಮುಂದಾಳತ್ವ ಬಹಳ ಮುಖ್ಯ: ಪ್ರೊ. ಶೊಭಾದೇವಿ ಚೆಕ್ಕಿ

ಕಲಬುರಗಿ: ವೀರಭದ್ರೇಶ್ವರ ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಿ ಆಳಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು…

12 hours ago