ಬಿಸಿ ಬಿಸಿ ಸುದ್ದಿ

ಅಕ್ಕಲಕೋಟ ರೇವಣ್ಣಸಿದ್ದ ಶಿವಶರಣರ 162 ನೇ ಜಯಂತಿ ಆಚರಣೆ

ಕಲಬುರಗಿ: ನಗರದ ಸದ್ಗುರು ಶ್ರೀ. ದಾಸಿಮಯ್ಯ ಲಾ ಛೇಂಬರ್ ನಲ್ಲಿ ರೇವಣ್ಣಸಿದ್ದ ಶಿವಶರಣರು ಅಕ್ಕಲಕೋಟ ಅವರ 162 ನೇ ಜಯಂತಿ ಆಚರಣೆ ಮಾಡಲಾಯಿತು.

ಶರಣರ ಅನುಯಾಯಿಗಳ ಬಳಗದ ವತಿಯಿಂದ ಹಮ್ಮಿಕೊಂಡ 162 ನೇ ಜಯಂತಿ ಆಚರಿಸಲಾಯಿತು, 2023 ರಲ್ಲಿ ಜಿಡಗಾ ಗ್ರಾಮದಲ್ಲಿ ಜರುಗಿದ 19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯದಂತೆ ಆಳಂದ ನಿಂದ ಸೋಲಾಪುರ ಮಾರ್ಗದಲ್ಲಿರುವ ಶಾಕಾಪೂರ್ ಗ್ರಾಮದ ಹತ್ತಿರ ವಿರುವ ಶ್ರೀ ಗುರುನಾಥಾರೂಢರ ಪಾವನ ಸ್ಥಳ ಅಭಿವೃದ್ಧಿಗೆ ಉದ್ದೇಶಿಸಿ ನೀಡಲಾದ ಮನವಿಯನ್ನು ಪರಿಗಣಿಸಲು ಸರಕಾರಕ್ಕೆ ಕೊರಲಾಯಿತು.

ಮುಖ್ಯಮಂತ್ರಿಗಳ ಸಲಹೆಗಾರರಾಗಿ ಆಯ್ಕೆ ಗೊಂಡಿರುವ ಆಳಂದ ಶಾಸಕರಾದ ಬಿ.ಆರ್. ಪಾಟೀಲರು ಈಗ ಉನ್ನತ ಸ್ಥಾನದಲ್ಲಿ ಇರುವ ಕಾರಣ ನಮ್ಮ ಸಮಾಜದ ಬೇಡಿಕೆಯನ್ನು ಆದ್ಯತೆ ಮೇರೆಗೆ ಈಡೇರಿಸುವ ನಿಟ್ಟಿನಲ್ಲಿ, ಶರಣರ ಕ್ಷೇತ್ರ ಪ್ರವರ್ಧಮಾನಕ್ಕೆ ತರಲು ಈಗಾಗಲೇ ಕೋರಲಾಗಿದೆ. ಅಲ್ಲದೆ ಲಿಖಿತವಾಗಿ ಅಧಿಕೃತವಾಗಿ ಇನ್ನೊಮ್ಮೆ ಮನವಿ ನೀಡಿ ಅವರಲ್ಲಿ ವಿಶೇಷವಾಗಿ ಕೊರಲಾಗುವುದು.

ವಚನ ತತ್ವಗಳು, ಶರಣರ ವಿಚಾರಗಳು ಮುಟ್ಟಿಸುವ ನಿಟ್ಟಿನಲ್ಲಿ ಜ. 19ರಂದು ಜಿಲ್ಲಾ ಕಸಾಪ ಹಮ್ಮಿಕೊಂಡಿರುವ ಪ್ರಥಮ ಕನ್ನಡ ವಚನ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ತೆಗೆದುಕೊಳ್ಳುವ ಮುಖಾಂತರ ಕಲಬುರಗಿ ಶರಣರ ಅನುಯಾಯಿಗಳ ಬಳಗ ಸಹಕಾರ ನೀಡುವುದಾಗಿ ಹೇಳಿದರು.

ಜಯಂತಿ ಉದ್ದೇಶಿಸಿ ಮಾತನಾಡಿದ ಶಿವಲಿಂಗಪ್ಪ ಅಷ್ಟಗಿ ಯವರು ಶರಣ ತತ್ವ , ಸಿದ್ಧಾಂತ ಪ್ರತಿಯೊಬ್ಬರೂ ಅಪ್ಪಿಕೊಂಡರೆ ಮಾತ್ರ ವೈಚಾರಿಕ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಕಾರ್ಯಕ್ರಮದ ಸಂಚಾಲಕರು ಹಾಗೂ ತೊಗಟವೀರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ ಬಲಪೂರ್ ಮಾತನಾಡಿ, ಜನಸಾಮಾನ್ಯರಿಗೆ ಧ್ವನಿ ನೀಡಿದ ವಚನಗಳನ್ನು ಸಮಾಜಕ್ಕೆ ಮುಟ್ಟಿಸುವ ಪ್ರಯತ್ನ ಮಾಡೋಣವೆಂದು ತಿಳಿಸಿದರು, ಸಮಾಜದ ಪ್ರಮುಖರಾದ ವೆಂಕಟೇಶ್ ಬಲಪೂರ್, ನ್ಯಾಯವಾದಿ ವಿನೋದಕುಮಾರ ಜೇನವೆರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

9 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

9 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

11 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

11 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

11 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

11 hours ago