ಚರಗ ಚೆಲ್ಲಿ ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸಿದ ರೈತರು

ಶಹಾಬಾದ: ಎಳ್ಳ ಅಮವಾಸ್ಯೆ ನಿಮಿತ್ಯ ಗುರುವಾರ ತಾಲೂಕಿನಾದ್ಯಂತ ರೈತಾಪಿ ವರ್ಗದವರು ಹೊಲದಲ್ಲಿ ಬೆಳೆದು ನಿಂತ ಪೈರಿಗೆ ಸಂಭ್ರಮದಿಂದ ಚರಗ ಚೆಲ್ಲಿ ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸಿದರು.

ನಗರದ ಸುತ್ತಮುತ್ತಲಿನ ಗ್ರಾಮಗಳಾದ ಭಂಕೂರ, ಮುತ್ತಿಗಿ, ನಗರದ ಸುತ್ತಮುತ್ತಲಿನ ಗ್ರಾಮಗಳಾದ ಭಂಕೂರ, ಮುತ್ತಿಗಿ, ರಾವೂರ, ಮಾಲಗತ್ತಿ, ತೊನಸಿನ ಹಳ್ಳಿ, ಮರತೂರ, ತೆಗನೂರ, ಕಿರಣಗಿ, ಗೋಳಾದಲ್ಲಿ ರೈತರು ಭೂತಾಯಿಗೆ ಚರಗ ಚೆಲ್ಲಿ ಎಳ್ಳ ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿದರು.

ರೈತಾಪಿ ಜನರು ತಮ್ಮ ಹೊಲಗಳಿಗೆ ತೆರಳಿ ಜೋಳದ ದಂಟಿನ ಮಂಟಪವನ್ನು ಕಟ್ಟಿ ಪಂಚ ಪಾಂಡವರಿಗೆ ಕೂಡಿಸಿ ಪೂಜೆ ಮಾಡಿದರು. ಬೆಳೆದ ಬೇಳೆಗಳಾದ ಜೋಳ, ಕಡಲೆ, ಬೆಳೆಗಳಿಗೆ ಪೂಜೆ ಸಲ್ಲಿಸಿ ಚರಗ ಚೆಲ್ಲುವ ಮೂಲಕ ಬೆಳೆ ಸಮೃದ್ಧಿಯಾಗಲಿ ಎಂದು ಭೂತಾಯಿಗೆ ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್, ಮೋಟಾರ ಸೈಕಲ್‍ಗಳಲ್ಲಿ ಹೊಲಗಳಿಗೆ ತೆರಳಿದ ರೈತರು ತಮ್ಮ ಸ್ನೇಹಿತರನ್ನು ಕರೆದುಕೊಂಡು ಚರಗಕ್ಕೆ ಮೆರಗು ತಂದರು. ಹಬ್ಬದ ವಿಶೇಷವಾಗಿ ಹೊಲದಲ್ಲಿ ಮೊದಲು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಮೊದಲ ನೈವೈಧ್ಯವನ್ನು ಹುಲ್ಲುಲ್ಲಿಗೋ ಚಳ್ಳಂಬಚರಿಗೋ ಎಂದು ಕೂಗುತ್ತಾ ಹೊಲದ ತುಂಬೆಲ್ಲ ಚರಗ ಚೆಲ್ಲಿದರು.

ಬಳಿಕ ಹಬ್ಬದ ಊಟಕ್ಕೆಂದು ತಯಾರಿಸಿದ್ದ ಶೆಂಗಾ ಹೋಳಿಗೆ, ಮೊಸರು,ಚಟ್ನಿ, ಎಳ್ಳಿನ ಸಜ್ಜೆ ರೊಟ್ಟಿ, ಅನ್ನದ ಬಾನ, ಕಡಬು, ಹೋಳಿಗೆ,ಕರಿಗಡಬು ನಾನಾತರಹದ ಪಲ್ಯೆ ಸೇರಿದಂತೆ ಬಗೆಬಗೆಯ ಭೋಜನವನ್ನು ಹೊಲದಲ್ಲಿ ಕುಳಿತು ಕುಟುಂಬ ವರ್ಗದವರು, ಸ್ನೇಹಿತರು ಹಾಗೂ ಬಂದು ಭಾಂದವರು ಸವಿದರು.

ಈ ಹಬ್ಬದ ನಿಮಿತ್ತ ನಗರದ ಅಂಗವಿಕಲರ ಸಂಘದ ಚಂದ್ರಕಾಂತ ಪಾಟೀಲ ಅವರ ಹೊಲದಲ್ಲಿ ತಹಸೀಲ್ದಾರ ಜಗದೀಶ.ಎಸ್.ಚೌರ್,ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ, ಉಪ ತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ, ಸಿಬ್ಬಂದಿಗಳಾದ ಸಿರಸ್ತೇದಾರ ರವಿಕುಮಾರ ಗಾಜರೆ, ಕಂದಾಯ ಅಧಿಕಾರಿ ಹಣಮಂತರಾವ ಪಾಟೀಲ,ಮೊಹ್ಮದ್ ಮುನೀರ್,ಸಯ್ಯದ್ ಮಜರೋದ್ದಿನ್ ಖಾದ್ರಿ, ಶ್ರೀಮಂತ.ಎಚ್,ಆರ್, ಗಂಗಾಧರ ವಾಗ್ಮೋಡೆ, ರೇವಣಸಿದ್ದಪ್ಪ ಪಾಟೀಲ, ಜಾನ್ ಜಾರ್ಜ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಸವಿಯಾದ ಭೋಜನ ಸವಿದರು.

emedialine

Recent Posts

ಸ್ಲಂ ಜನರಿಗೆ ಹಕ್ಕು ಪತ್ರ ನೀಡುವಂತೆ ರೇಣುಕಾ ಸರಡಗಿ ಸಿಎಂಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…

2 hours ago

ಶರಣಬಸವ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…

2 hours ago

ವಕ್ಫ್ ಬೋರ್ಡ್ ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು: ಸಚಿವ ಜಮೀರ್ ಅಹಮದ್ ಖಾನ್

ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…

4 hours ago

ಸೆ.22 ರಂದು ತುಂಗಭದ್ರೆಗೆ ಬಾಗಿನ ಅರ್ಪಣೆ: ಡಿ.ಕೆ ಶಿವಕುಮಾರ್

ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…

4 hours ago

ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ: ಡಿಕೆ ಶಿವುಕುಮಾರ್

ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…

4 hours ago

ನಾಗಮಂಗಲ ಘಟನೆ: ತನಿಖೆ ನಂತರ ಇನ್ನಷ್ಟು ಕ್ರಮ: ಗೃಹ ಸಚಿವ ಪರಮೇಶ್ವರ

ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420