ಸಂಭ್ರಮದಿಂದ ಆಚರಿಸಿದ ಎಳ್ಳು ಅಮವ್ಯಾಸೆ ಹಬ್ಬ

ಶಹಾಬಾದ: ಎಳ್ಳು ಅಮಾವಾಸ್ಯೆ ಅಪ್ಪಟ ರೈತರ ಹಬ್ಬ. ಹೊಲದಲ್ಲಿ ಬೆಳೆದು ನಿಂತಿರುವ ಹಿಂಗಾರು ಪೈರುಗಳ ನಡುವೆ ಬನ್ನಿ ಮರ ಇಲ್ಲವೆ ಬನ್ನಿಕಂಟಿಯನ್ನು ಹುಡುಕಿ ಅದಕ್ಕೆ ಪೂಜೆ ಸಲ್ಲಿಸುವುದರೊಂದರಿಗೆ ಭೂಮಿತಾಯಿಗೆ ಚೆರಗ ಚೆಲ್ಲುವ ಮೂಲಕ ಎಳ್ಳು ಅಮವ್ಯಾಸೆ ಹಬ್ಬವನ್ನು ಗುರುವಾರ ರೈತರು ಆಚರಿಸಿದರು.

ಎಳ್ಳು ಅಮವಾಸ್ಯೆ 3-4ದಿನ ಇರುವಾಗಲೇ ರೆತರ ಮನೆಗಳಲ್ಲಿ ಹಬ್ಬದ ತಯಾರಿ ನಡೆಯುತ್ತದೆ. ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ ತಯಾರಿಸುವುದು, ನಾನಾ ಬಗೆಯ ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಹಾಗೂ ಸೇಂಗಾ ಹೋಳಿಗೆ ತಯಾರಿಸಲಾಗುತ್ತದೆ. ಅಮಾವಾಸ್ಯೆ ದಿನ ದೊಡ್ಡ ಬುತ್ತಿಯ ಗಂಟು ಕಟ್ಟಿಕೊಂಡು ಕುಟುಂಬದವರೆಲ್ಲರೂ ಎತ್ತಿನ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗುವ ದೃಶ್ಯ ಮಾತ್ರ ದೊಡ್ಡ ಸಡಗರದಂತೆ ಕಾಣುತ್ತಿತ್ತು. ಜತೆಗೆ ತಮ್ಮ ಸಂಬಂಧಿಗಳು, ಊರಿನ ಇತರರು ಮತ್ತು ಹಿತೆಷಿಗಳನ್ನು ಹೊಲಕ್ಕೆ ಕರೆದೊಯ್ದು, ಚೆರಗ ಚೆಲ್ಲಿದ ನಂತರ ಸಾಮೂಹಿಕ ಊಟ ಸವಿದು ಆತ್ಮೀಯತೆಯನ್ನು ಮೆರೆದರು.

ಎತ್ತುಗಳಿಗೆ ಝೂಲ ಹಾಕಿ ಕೋಡಣಸು, ಗೊಂಡೆ, ಹಣೆಕಟ್ಟುಗಳಿಂದ ಶೃಂಗರಿಸಲಾಗಿತ್ತು. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಎತ್ತುಗಳು ಕೊರಳ ಮತ್ತು ಹಣೆಗೆಜ್ಜೆಯನ್ನು ನುಡಿಸುತ್ತ ಹೊಲಗಳ ಕಡೆಗೆ ಬಂಡಿ ಎಳೆದುಕೊಂಡು ಸಾಗುವುದು ಗ್ರಾಮೀಣ ಸೊಗಡನ್ನು ಎತ್ತಿ ತೋರಿಸುತ್ತಿತ್ತು.
ಎಳ್ಳು ಅಮಾವಾಸ್ಯೆ ಹಬ್ಬ ರೈತರ ಹಬ್ಬವಾಗಿದ್ದು, ಜಾತಿ, ಮತ ಭೇದವಿಲ್ಲ. ಒಕ್ಕಲುತನ ಅವಲಂಬಿಸಿರುವ ಮುಸ್ಲಿಂ ಕುಟುಂಬಗಳೂ ಎಳ್ಳು ಅಮಾವಾಸ್ಯೆಯಂದು ಹೊಲಕ್ಕೆ ಹೋಗಿ ಚೆರಗ ಚೆಲ್ಲಿದರು.

ಋತುಮಾನಕ್ಕೆ ತಕ್ಕಂತೆ ಸಜ್ಜಿರೊಟ್ಟಿ, ಶೇಂಗಾಹೋಳಿಗೆ, ಹೂರಣ ಹೋಳಿಗೆ-ತುಪ್ಪ, ಹಪ್ಪಳ -ಸಂಡಿಗೆ, ಪುಂಡಿಪಲ್ಲೆ, ಹಿಂಡಿಪಲ್ಲೆ, ಜೋಳ ಇಲ್ಲವೆ ಸಜ್ಜೆ ಕಡಬು, ಬರ್ತ್ ಹೀಗೆ ಹಲವಾರು ಬಗೆಯ ಅಡುಗೆ ತಯಾರಿಸಿ, ಹೊಲ-ಗದ್ದೆ ಇಲ್ಲವೆ ಸಮೀಪದ ಉದ್ಯಾನಗಳಿಗೆ ತೆರಳಿ ಊಟ ಮಾಡಿದರು.

emedialine

Recent Posts

ಶರಣಬಸವ ವಿಶ್ವವಿದ್ಯಾಲಯದಲ್ಲಿ 14ರಂದು ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ, ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ…

45 mins ago

ಕಾ.ಸೀತಾರಾಮ ಯೇಚೂರಿಗೆ ಸಿಪಿಐಎಂ ಕಚೇರಿಯಲ್ಲಿ ಶೃದ್ಧಾಂಜಲಿ

ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು,…

51 mins ago

ಕ್ರೀಡೆಗಳು ವಿದ್ಯಾರ್ಥಿಗಳನ್ನು ಸಧೃಡ ಆರೋಗ್ಯವಾಗಿ ಇಡುತ್ತವೆ

ಕಲಬುರಗಿ: ಕ್ರೀಡೆಗಳು ವಿದ್ಯಾರ್ಥಿಗಳು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅವರು ದೈನಂದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅನಿರೀಕ್ಷಿತ ರೋಗಗಳು…

1 hour ago

PDA ಕಾಲೇಜಿನಲ್ಲಿ ಸೆ. 13,14 ರಂದು ವಿಚಾರ ಸಂಕಿರಣ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ನಾಳೆಯಿಂದ ಎರಡುದಿನಗಳ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ…

1 hour ago

ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತ ನೂತನ ಸಮಿತಿ ರಚನೆ

ಕಲಬುರಗಿ: ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತಿನ ಸಭೆಯಲ್ಲಿ ಜಿಲ್ಲಾ ಸಮಿತಿ ರಚಿಸಲಾಯಿತು. ಈ ವೇಳೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ರವೀಂದ್ರ…

1 hour ago

ಕಲಬುರಗಿ: ಸೆ. 13 ರಿಂದ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ”ರು ಅಭಿಯಾನ

ಕಲಬುರಗಿ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ "ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ" ಎಂಬ ಧ್ಯೇಯವಾಕ್ಯದಡಿ ರಾಜ್ಯವ್ಯಾಪಿ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420