ಬಿಸಿ ಬಿಸಿ ಸುದ್ದಿ

ಅಂಬೇಡ್ಕರ್ ಅರಿವು ಪುಸ್ತಕ ಮಕ್ಕಳ ಮನ ಮುಟ್ಟುವುದಕ್ಕೆ ಸಹಕಾರಿ

ರಾಯಚೂರು; ಅಂಬೇಡ್ಕರ್ ಅರಿವು ಪುಸ್ತಕ ಮನೆ ಮನಗಳಿಗೆ ಮುಟ್ಟಿಸುವ ಮೂಲಕ ಮಕ್ಕಳ ಮನಸ್ಸನ್ನು ಮುಟ್ಟುವುದಕ್ಕೆ ಸಹಕಾರಿಯಾಗಿದೆ ಎಂದು ದಲಿತ ಮುಖಂಡ ಎಂ.ಆರ್ ಬೇರಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಲ್ಕುಂಡಿ ಮಹದೇವಸ್ವಾಮಿರವರ ಅಂಬೇಡ್ಕರ್ ಅರಿವು ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಅಂಬೇಡ್ಕರ್ ಅವರ ಚಿಂಚನೆಗಳು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅರಿವು ಕುರಿತು ಪುಸ್ತಕ ರಚನೆ ಮಾಡಿದ್ದಾರೆ, ಅಂಬೇಡ್ಕರ್ ಅವರ ಕನಸುನ್ನು ಬಿತ್ತರಿಸಲು ಭರವಸೆ ಮೂಡಿಸಲು ಈ ಪುಸ್ತಕವಾಗಿದ್ದು, ದೇಶವೇ ಸಂವಿಧಾನದ ಮೇಲೆ ಆಧಾರವಾಗಿದ್ದು ಸಂವಿಧಾನದ ರಚನೆ ಕಾರಣರಾದ ಅಂಬೇಡ್ಕರ್ ಅವರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ, ಮೊದಲು ಮಕ್ಕಳಿಗೆ ಅಂಬೇಡ್ಕರ್ ಅವರ ಚಿಂತನೆಗಳು, ಅವರ ಆಶಯಗಳ ಕುರಿತು ಮನ ಮುಟ್ಟುವಂತಹ ಕೆಲಸ ನಡೆಬೇಕಿದೆ, ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಸುತ್ತಿದ್ದು, ಅಂಬೇಡ್ಕರ್ ಅರಿವು ಪುಸ್ತಕ ಇದರ ಭಾಗವಾಗಿದೆ ಎಂದರು.

ಸಾಕಷ್ಟು ಜನರಿಗೆ ಸಂವಿಧಾನದ ಬಗ್ಗ ಅರಿವು ಇಲ್ಲ ಕೆಲವರು ನೊಡಿದರೂ ನೊಡದಂತೆ ಇದ್ದಾರೆ, ಇದರಿಂದ ಅಂಬೇಡ್ಕರ್ ಅವರ ಆಶಯಗಳು ಸಾಕಾರಗೊಳಿಸುವಲು ಆಗುತ್ತಿಲ್ಲವೆಂದು ವಿಶಾಸ ವ್ಯಕ್ತಪಡಿಸಿದರು.

ಅಂಬೇಡ್ಕರ್ ಎನ್ನುವುದು ಸಮುದ್ರವಿದ್ದಂತೆ ಸಾಕಷ್ಟು ಕಲಿಯಬೇಕಿದೆ, ಎಷ್ಟು ಕಲಿತರೂ ಕಡೆಮೆ, ಮನೆ ಮನೆಗೆ ಅಂಬೇಡ್ಕರ್ ಅರಿವು ಕುರಿತು ಮಕ್ಕಳಿಗೆ ಮನದಟ್ಟಾಗುವಂತೆ ಕೆಲಸಗಳು ನಿರಂತರವಾಗಿ ನಡೆಯಬೇಕಿದೆ ಎಂದು ತಿಳಿಸಿದರು.

ಸಾಮಾಜಿಕ ಚಿಂತನೆ ಹೋರಾಟಗಾರ ಆರ್ ಮಾನಸಯ್ಯ ಮಾತನಾಡಿ, ಮೈಸೂರು ಸಾಂಸ್ಕೃತಿಕ ನಗರಿಯಾಗಿದ್ದು, ಅಲ್ಲಿಂದ ಬಂದು ಇಲ್ಲಿ ಅಂಬೇಡ್ಕರ್ ಅರಿವು ಪುಸ್ತಕ ಬಿಡುಗಡೆ ಗೊಳಿಸುತ್ತಿದ್ದು, ಇಲ್ಲಿನ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದಾರೆ, ಈ ಹಿಂದೆ ಶಾಲೆಯ ಗೊಡೆಗಳ ಮೇಲೆ ಬರಹಗಳಿದ್ದವು, ಇಂದಿನ ಬಾಲಕರು ಮುಂದಿನ ನಾಗರೀಕರು, ಬೆಳೆಯುವ ಸಿರಿ ಮೊಳಕೆಯಲ್ಲಿ ಈ ಬರಹಗಳು ಇಂದು ಮರೆಯಾಗಿವೆ, ಈ ಗಾದೆಗಳು ಸಾಕಷ್ಟು ಪ್ರಭಾವ ಬೀರುತ್ತಿದ್ದವು, ಮಕ್ಕಳಿಗೆ ದೇಶದ ಚರಿತ್ರೆ, ಅದ್ಯಯನ ಅರಿವಿಲ್ಲ, ಸಾಂಸ್ಕೃತಿಕ ಪರಂಪರೆ, ಅದ್ಯಯನದ ಕೊರತೆ ಇದೆ ಎಂದರು.

ಮಕ್ಕಳಿಗೆ ವಿಷ ಬೀಜದ ಬಿತುತ್ತಿದ್ದಾರೆ, ಮಕ್ಕಳಲ್ಲಿ ದ್ವೇಶ, ಅಸೂಯೆ, ಜಾತಿವಾದ, ತಾರತಮ್ಯ ಬೆಳೆಸುತ್ತಿದ್ದಾರೆ, ಮನುವಾದದತ್ತ ಕೊಡ್ಯೊಯ್ಯುತ್ತಿದ್ದಾರೆ, ಇದು ದೇಶಕ್ಕೆ ಮಾರಕ ವಾಗಿದೆ, ಮನುವಾದ ಒಂದು ಸಾಂಕ್ರಾಮಿಕ ರೋಗವಾಗಿದ್ದು ಇದಕ್ಕೆ ಅಂಬೇಡ್ಕ ರ್ ಅರಿವಿನ ಔಷಧಯಾಗಿದೆ ಎಂದು ತಿಳಿಸಿದರು.

ಈ ಅಂಬೇಡ್ಕರ್ ಅರಿವು ಪುಸ್ತಕದಲ್ಲಿ ಅನೇಕ ದಾರ್ಶನಿಕರ ಕಿರು ಪರಿಚಯವಿದೆ, ಬಸವಣ್ಣ, ಬೀಮಬಾಯಿ, ಗೌತಮ ಬುದ್ಧ, ಅಕ್ಷರ ಮಾತೆ ಸಾವಿತ್ರಬಾಯಿ ಫುಲೆ ಸೇರಿ ಸಾಕಷ್ಟು ಮಾಹಿತಿ ಇದರಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟಿಯುಸಿಐ ಜಿಲ್ಲಾಧ್ಯಕ್ಷ ಜಿ.ಅಮರೇಶ, ಆರ್‌ಸಿಎಫ್ ಉಪಾಧ್ಯಕ್ಷ ಆದಿ ನಗನೂರು, ಕೆಎಸ್‌ಆರ್‌ಡಿಪಿಆರ್‌ ಎಸ್ಸಿ ಎಸ್ಟಿಯ ರಾಜ್ಯ ಖಜಾಂಚಿ ಚಂದ್ರಕಾಂತ ನೇರಳೆ, ಕೃತಿ ಕತೃ ಮಲ್ಕುಂಡಿ ಮಹದೇವಸ್ವಾಮಿ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago