ಕಲಬುರಗಿ: ಮಸಜಿದ್ ಎ ದಾಹೆ ಹಲಿಮಾ ಕಮಿಟಿ ಹಾಗೂ ಯುನಿಕಾರ್ನ್ ಆಸ್ಪತ್ರೆಯ ಸಹಯೋಗದಲ್ಲಿ ಭಾನುವಾರ ಇಲ್ಲಿನ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯಲ್ಲಿ 160 ಜನರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ವಿವಿಧ ಬಡಾವಣೆಗಳಲ್ಲಿ 5ಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಿ 1000ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಮಾಡಿರುವ ಯುನಿಕಾರ್ನ್ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಹಿರಿಯ ವೈದ್ಯರಾದ ಡಾ. ಅಬ್ದುಲ್ ಖಾದರ್ ಜಿಲಾನಿ ಮತ್ತು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸೋನಿಯಾ ಗಾಂಧಿ ಕಾಲೋನಿಯ ಯುವ ಮುಖಂಡರಾದ ಮೊಹಮ್ಮದ್ ಅಮೇರ್ ಬಾಗಬಾನ್ ಎನ್.ಎಸ್.ಬಿ ಅವರ ನೇತೃತ್ವದಲ್ಲಿ ಮಸಜಿದ್ ಕಮಿಟಿಯ ಅಧ್ಯಕ್ಷರಾದ ಶಬ್ಬಿರ್ ಬೈ, ಉಪಾಧ್ಯಕ್ಷ ಬಾಬಾ ಬೈ, ಇಫ್ತೆಖಾರ್ ಅಹ್ಮದ್, ಎಂ.ಡಿ ಎಕ್ಬಾಲ್ ಬೈ, ಮೌಲಾನಾ ಮೋಹಿಜ್ ಹಾಫಿಸಾಬ್, ಮೊಹಮ್ಮದ್ ಮಕ್ಬುಲ್ ಅನ್ಸಾರಿ, ನಬಿಲಾಲ್ ಬಾಗಬಾನ್, ಫೆರೋಜ್ ಸನ್ಮಾನಿಸಿ ಗೌರವಿಸಿದರು.
ಶಿಬಿರದಲ್ಲಿ ಸ್ತ್ರೀ ರೋಗ, ಇ.ಎನ್.ಟಿ, ಹೃದ್ರೋಗ, ಫಿಸಿಯೋಥೆರಪಿ, ನೇತ್ರ ತಪಾಸಣೆ, ನರಶಸ್ತ್ರ ಚಿಕಿತ್ಸೆ, ಬಿಪಿ, ಶುಗರ್ ತಪಾಸಣೆ, ಜನರಲ್ ಚಿಕಿತ್ಸೆ ಸೇರಿದಂತೆ ಇತರೆ ಆರೋಗ್ಯ ಸಂಬಂಧಿಸಿದ ತಪಾಸಣೆ ನಡೆಸಿ ಸ್ಥಳದಲ್ಲೇ ಆಸ್ಪತ್ರೆ ವತಿಯಿಂದ ಅಗತ್ಯ ಔಷಧಿಗಳು ಉಚಿತ ವಿತರಿಸಲಾಯಿತು.
ಡಾ.ಸೈಯದ್ ಅದಿಬಾ ತಸನೀಮ್, ಡಾ. ಫೈಸಲ್, ಡಾ. ಸಾನಿಯಾ ಮಿರ್ಜಾ, ಶೇಖ್ ಜಾವೀದ್, ಹಿರಿಯ ಸ್ಟಾಫ್ ನರ್ಸ್ ಶೇಖ್ ಅಬ್ದುಲ್ ರಜಾಕ್, ಸೈಯದ್ ಅಥರ್ ಉರ್ ರಹೇಮಾನ್, ಸೈಯದ್ ಇಮ್ರಾನ್, ಸಾನಿಯ ಫಾತೀಮಾ ಅವರು ಈ ಸಂದರ್ಭದಲ್ಲಿ ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…