ಕಲಬುರಗಿ: ತಾಲ್ಲೂಕಿನ ಪೇಠ-ಫಿರೋಜಾಬಾದ ಭೀಮಾ ನದಿ ತಟದಲ್ಲಿ ಸದ್ಗುರು ಶ್ರೀ ವಿಶ್ವಾರಾಧ್ಯರ 24ನೇ ಜಾತ್ರಾ ಮಹೋತ್ಸವ ಅಂಗವಾಗಿ ಭವ್ಯ ರಥೋತ್ಸವ ನೆರವೇರಿತು. ಭsÀಕ್ತಾದಿಗಳು ಶ್ರದ್ಧಾಭಕ್ತಿಯಿಂದ ಉತ್ತುತ್ತಿ, ಬಾಳೆ ಎಣ್ಣೆ ಎಸೆದು ಭಕ್ತಿ ಸಮರ್ಪಿಸಿದರು.
ಇದಕ್ಕೂ ಮುನ್ನ ಧರ್ಮಸಭೆ ಸಾನ್ನಿಧ್ಯವಹಿಸಿದ್ದ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, ಮನುಕುಲ ಉದ್ಧಾರಕ್ಕೆ ಪರೋಪಕಾರ ಸೇವೆ, ಧರ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮಹಾರಾಷ್ಟ್ರ ರಾಜ್ಯದಲ್ಲಿ ಭೀಮಾಶಂಕರ ಜ್ಯೋರ್ತಿಲಿಂಗದಲ್ಲಿ ಹುಟ್ಟಿದ ಭೀಮಾ ನದಿ ಪಂಡರಪುರಕ್ಕೆ ಬಂದಾಗ ಚಂದ್ರಭಾಗಾ ನದಿ ಎಂದು ಕರೆಯುತ್ತಾರೆ ಎಂದು ತಿಳಿಸಿದರು.
ಶಖಾಪುರದ ಸದ್ಗುರು ವಿಶ್ವಾರಾಧ್ಯ ತಪೋವನಮಠದ ಪೀಠಾಧಿಪತಿ ಡಾ. ಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಕಾಶಿ ಜಗದ್ಗುರುಗಳು ಸಿದ್ದಾಂತ ಶಿಖಾಮಣಿ ಗ್ರಂಥವನ್ನು ರಚಿಸಿ 18 ಭಾಷೆಗಳಲ್ಲಿ ಮುದ್ರಣ ಮಾಡಿಸಿದ್ದಾರೆ. ಪ್ರತಿಯೊಬ್ಬರಿಗೂ ಲಿಂಗಾಷ್ಟಕದ ಪ್ರತಿಗಳನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ತಾಂಬಾಳದ ಶ್ರೀ ವಿಜಯಕುಮಾರ ಸ್ವಾಮೀಜಿ, ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ವೆಂಕಟಬೇನೂರಿನ ಶ್ರೀ ಸಿದ್ಧರೇಣುಕ ಶಿವಾಚಾರ್ಯರು, ಬೆಳಗುಂಪಾದ ಶ್ರೀ ಅಭಿನವ ಪರುತೇಶ್ವರ ಸ್ವಾಮೀಜಿ, ಕುಳೇಕುಮಟಗಿಯ ಶ್ರೀ ಗುರುಸ್ವಾಮಿ ಶರಣರು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ, ರಾಜಶೇಖರ ಸೀರಿ, ಸುರೇಶ ತಿಪ್ಪಶೆಟ್ಟಿ, ನಾಗಣ್ಣ ಪಾಟೀಲ ಸಿಂದಗಿ, ಗ್ರಾಪಂ ಅಧ್ಯಕ್ಷ ರಾಜಶೇಖರ ಹಾಲು, ಅಬ್ದುಲ್ ಲತೀಫ್ ಜಹಾಗೀರದಾರ, ಬಸವಣಪ್ಪ ಎಸ್ ಶಿರೂರ, ಕೇಶವ ಮೋಟಗಿ, ರಾಜೇಂದ್ರ ಕರೇಕಲ್, ಚಂದ್ರಶೇಖರ ಮಹಾಮನಿ, ಶರಣಪ್ಪ ಬೇನಗಿಡ, ಕಲ್ಲಪ್ಪ ಪ್ಯಾಟಿ, ಸಿದ್ದಪ್ಪ ಸಾಹುಕಾರ, ಅರುಣಕುಮಾರ ಶಿರೂರ, ರಹೆಮಾನ ಪಟೇಲ್, ಮಲ್ಲಿಕಾರ್ಜುನ ಧೂಳಬಾ, ಉಮೇಶ ಮಾಮನಿ, ಶರಣಬಸಪ್ಪ ಹಡಪದ, ಅಣವೀರಪ್ಪ ಶಿರೂರ, ಅಶೋಕ ಶಿರೂರ, ವಿಜಯವೀರ ದುಧನಿ, ವಿಶ್ವನಾಥ ಹಿರೇಮಠ, ಮಲ್ಲಿಕಾರ್ಜುನ ಬಡಿಗೇರ, ಮರೆಪ್ಪ ಭಜಂತ್ರಿ, ಚಂದು ಭೋವಿ, ಹಣಮಂತ ಧೂಳಬಾ, ಮಲಕಪ್ಪ ಧೂಳಬಾ, ವಿಶ್ವರಾಧ್ಯ ಅಯ್ಯಣಿ, ಬಸವಲಿಂಗ ಹಾಲು, ಯುನೂಸ್ ಪಟೇಲ್, ರಮೇಶ ಮಾಮನಿ, ಬಾಬು ಪವಾಡಿ, ಸಂಗಪ್ಪ ಅಕ್ಕಿ, ದೊಡ್ಡಪ್ಪ ಹಾಲು ಸೇರಿ ಅನೇಕ ಹಳ್ಳಿಯ ಭಕ್ತಾದಿಗಳು ಭಾಗವಹಿಸಿದ್ದರು.
ಬೆಳಗ್ಗೆ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರನ್ನು ಫಿರೋಜಾಬಾದ ಗ್ರಾಮದಿಂದ ವಿಶ್ವಾರಾಧ್ಯರ ಗದ್ದುಗೆವರೆಗೆ ಕುಂಬ ಕಳಸಗಳೊಂದಿಗೆ ಸಹಸ್ರಾರು ಭಕ್ತ ಸಮೂಹದ ಮಧ್ಯೆ ಸಾರೋಟಿನಲ್ಲಿ ಭವ್ಯ ಮೆರವಣಿಗೆ ನಡೆಯಿತು. ಅಣ್ಣಾರಾಯ ಶೆಳ್ಳಗಿ ತಂಡದವರಿಂದ ಸಂಗೀತ ಸೇವೆ ಜರುಗಿತು.
ಭೀಮಾನದಿ ತಟದಲ್ಲಿ ವಿಶ್ವರಾಧ್ಯ ತಪೋವನ ಮಠವು ತೀರ್ಥಕ್ಷೇತ್ರವಾಗಲು ನಾವೆಲ್ಲರೂ ಕೈಜೋಡಿಸೋಣ. ಇನ್ನು ಭಕ್ತಿ ನೆಲೆಗೊಂಡು ಹೆಮ್ಮರವಾಗಿ ಬೆಳೆಯಲಿ. ಇಲ್ಲಿ ಮೂಲಸೌಕರ್ಯ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಜನರ ಸಹಕಾರ ಅತ್ಯಗತ್ಯ. – ಅರುಣಕುಮಾರ ಪಾಟೀಲ್, ಜಿಪಂ ಮಾಜಿ ಸದಸ್ಯ
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…