ಬಿಸಿ ಬಿಸಿ ಸುದ್ದಿ

ಬ್ಲಾಸಮ್ ಹಬ್ಬ 2024 ಮಕ್ಕಳಿಂದ ವೈಶಿಷ್ಟ ಪೂರ್ಣವಾಗಿ ನೆರವೇರಿತು

ಕನಕಪುರ: ಡಾ ಬಿ.ಶಶಿಧರ್ ರವರ ಬ್ಲಾಸಮ್ ಶಾಲೆಯು ವಿಶಿಷ್ಟವಾದ ಮೂವತ್ತೆರಡನೇ ವರ್ಷದ ಸಾಂಸ್ಕೃತಿಕ ಹಬ್ಬವನ್ನು ಬಹಳ ಸಂಭ್ರಮದಿಂದ ಕನಕಪುರದ ಡಾ.ಬಿ.ಆರ್.ಅಂಬೇಡ್ಕರ್ ಪುರಭವನದಲ್ಲಿ ಆಚರಿಸಲಾಯಿತು. ಸಂಪೂರ್ಣ ಕಾರ್ಯಕ್ರಮವನ್ನು ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳೇ ವಿನೂತನವಾಗಿ ನಡೆಸಿಕೊಟ್ಟರು.

ಶ್ರೀ ಸಿದ್ಧಲಿಂಗೇಶ್ವರ ಎಜುಕೇಷನಲ್ ಟ್ರಸ್ಟ್‌ ಸಂಸ್ಥಾಪಕರಾದ ನಮ್ಮ ತಂದೆ ಡಾ. ಬಿ. ಶಶಿಧರ್ ರವರ ಮಹದಾಸೆಯಂತೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ದೃಷ್ಟಿಯಿಂದ ಹಾಗೂ ಮಕ್ಕಳು ಪುಸ್ತಕ ಪ್ರೇಮಿಗಳಾಗಬೇಕೆಂದು ಮಕ್ಕಳಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ `ಯಂಗ್ ರೀಡರ್ ಅವಾರ್ಡ್’ಗೆ `ಭಾರತದ ಹೆಮ್ಮೆ ಚಂದ್ರಯಾನ-3′ ಮತ್ತು “ಅರಣ್ಯಗಳು ಭಾರತದ ನೈಸರ್ಗಿಕ ಸಂಪನ್ಮೂಲಗಳು” ಎಂಬ ವಿಷಯಗಳ ಬಗ್ಗೆ ಸ್ಪರ್ಧೆಯನ್ನು ಏರ್ಪಡಿಸಿ ಅವರಿಗೆ ಶ್ರೀ ಸಿದ್ಧಲಿಂಗೇಶ್ವರ ಎಜುಕೇಷನಲ್ ಟ್ರಸ್ಟ್ನ  ಛರ‍್ಮೆನ್‌ರಾದ ಡಾ. ಶ್ವೇತಾ ಶಶಿಧರ್ ರವರು 10ನೇ ತರಗತಿ ಭುವನಾ ಮತ್ತು 7ನೇvತರಗತಿಯ ಭೂಮಿಕಾ.ಡಿ ರವರಿಗೆ ಉತ್ತಮ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಿದರು.

ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯುತ್ತಮ ಪ್ರತಿಭೆ ತೋರಿ “ಉತ್ತಮ ಸಾಧಕಿ” ಪ್ರಶಸ್ತಿಗೆ ಭಾಜನರಾದ ನವ್ಯ.ಆರ್ ರವರನ್ನು
ಗುರುತಿಸಿ ಡಾ.ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ವತಿಯಿಂದ ಡಾ. ಶ್ವೇತಾ ಶಶಿಧರ್ ರವರು ಸನ್ಮಾನಿಸಿದರು.

ಹತ್ತನೇ ತರಗತಿಯ ಪ್ರತೀಕ್.ಆರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ನಮ್ಮ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರ ವೃಂದದವರು ಸದಾ ಸಹಕರಿಸುತ್ತಾ ಬಂದಿದ್ದಾರೆ ಎಂದು
ಹೇಳಿದರು.

8ನೇ ತರಗತಿಯ ಸಿಂಚನಾ.ಎಸ್ ಮಾತನಾಡುತ್ತಾ ನಮ್ಮ ಶಾಲೆಯಲ್ಲಿ ಉಚಿತವಾಗಿ ನಡೆಸುವಂತಹ ಭರತನಾಟ್ಯ, ಸಂಗೀತ ಮತ್ತು ಚಿತ್ರಕಲೆ ತರಗತಿಗಳಿಗೆ ಸೇರಲು ಅವಕಾಶ ಮಾಡಿಕೊಟ್ಟಿರುವ ನಮ್ಮ ಪ್ರಾಂಶುಪಾಲರಾದ ಶ್ರೀಮತಿ ಗಂಗಾಂಬಿಕಾ ಹಾಗೂ ಶಿಕ್ಷಕರ ವೃಂದದವರಿಗೆ ಧನ್ಯವಾದವನ್ನು ಅರ್ಪಿಸಿದರು.

ಶಾಲೆಯ ವಾರ್ಷಿಕೋತ್ಸವದ ಅತಿಥಿಯಾಗಿದಂತಹ 7ನೇ ತರಗತಿಯ ಸಮೃದ್ ಹಳೇಪುರರವರು ಮಾತನಾಡಿ ನಮ್ಮ ಶಾಲೆಯಲ್ಲಿ ನಡೆಯುವ ಶಾಲಾ ವಾರ್ಷಿಕೋತ್ಸವ ಮತ್ತು ಎಲ್ಲಾ ರಾಷ್ಟೀಯ ಹಬ್ಬಗಳಿಗೂ ಮಕ್ಕಳನ್ನೇ ಅತಿಥಿಗಳಾಗಿ ಆಯ್ಕೆ ಮಾಡುತ್ತಿರುವುದು ವಿಶಿಷ್ಟವಾಗಿದೆ. ಅಂತರ ಶಾಲಾ ಮಟ್ಟದ ಚೆಸ್, ಗಾಯನ ಸ್ಪರ್ಧೆ, ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ವಿಜ್ಞಾನ ವಸ್ತುಪ್ರದರ್ಶನ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆಯಲು ನಮ್ಮ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರ ವೃಂದದ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು.

ಕಾರ್ಯಕ್ರಮದ ಮತ್ತೊಬ್ಬ ಮುಖ್ಯ ಅತಿಥಿಯಾಗಿದ್ದ 3ನೇ ತರಗತಿಯ ಕುಶಾಲ್ ಶೆಟ್ಟಿ ಎಮ್.ಎಸ್ ರವರು ಮಾತನಾಡಿ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ನನಗೆ ಈ ಅವಕಾಶವನ್ನು ಕಲ್ಪಿಸಿಕೊಟ್ಟ ಶಾಲೆಗೆ ನಾನು ಕೃತಜ್ಞನಾಗಿರುತ್ತೇನೆ ಎಂದು ಹೇಳಿದರು.

2023 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ
ವಿದ್ಯಾರ್ಥಿಗಳನ್ನು ಮತ್ತು ರಾಜ್ಯಪುರಸ್ಕಾರ ಪಡೆದ ವಿದ್ಯಾರ್ಥಿನಿಯರನ್ನು “ಭಾರತ ಸೇನೆಯ
ಪರಮ ವೀರರು” ಎಂಬ ಪುಸ್ತಕ ಮತ್ತು ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.

ಪಿ.ಕೆ.ಜಿ ಯಿಂದ 10ನೇ ತರಗತಿವರೆಗಿನ ಮಕ್ಕಳು ಹಿಂದೂಸ್ಥಾನಿ ಗಾಯನ, ಭರತನಾಟ್ಯ, ನಾಟಕ, ಸೆಮಿಕ್ಲಾಸಿಕ್ ನೃತ್ಯ, ಮೈಮ್, ಕಂಸಾಳೆ ಹಾಗೂ ವಿವಿಧ ನೃತ್ಯಗಳ ಮೂಲಕ ವರ್ಣರಂಜಿತ ಕಾರ್ಯಕ್ರಮಗಳನ್ನು ನೀಡಿ ಪ್ರೇಕ್ಷಕರ ಮನಸೂರೆಗೊಂಡರು.

10ನೇ ತರಗತಿಯ ಕುಸುಮ.ಎನ್ ಎಲ್ಲರನ್ನು ಸ್ವಾಗತಿಸಿದರು. ವೈಭವ್ ಮತ್ತು ಶಾಲಿನಿ ಶಾಲಾ ವರದಿ ಮಂಡಿಸಿದರು. ಭುವನ್.ಕೆ.ಎ ವಂದಿಸಿದರು. ಕಾರ್ಯಕ್ರಮವನ್ನು ಚಿನ್ಮಯಿ, ಹರ್ಷಿತ್, ಕುಶಾಲ್, ಪರಿಣಿತ, ಮೋನಿಷಾ, ಪ್ರವಳಿಕಾ ಹಾಗೂ ವೈಷ್ಣವಿರವರು ನಿರೂಪಿಸಿದರು. ಈ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮಗಳ ಮಧ್ಯದಲ್ಲಿ “ಚಂದ್ರಯಾನ -3” ಉಡಾವಣೆಯ ಬಗ್ಗೆ ಸವಿವರವಾದ ಮಾಹಿತಿಯನ್ನು ತಿಳಿಸಿದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

10 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

10 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

12 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

12 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

12 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

12 hours ago