ಕಲಬುರಗಿ: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಶ್ರೀ ವಿಶ್ವಗುರು ಬಸವಣ್ಣನವರನ್ನು ಸಾಮಾಜಿಕ ,ಆರ್ಥಿಕ , ರಾಜಕೀಯ, ಹಾಗೂ ಮಹಿಳೆಯರಲ್ಲಿ ಸಮಾನತೆ ಕೊಟ್ಟು ಲಿಂಗಾಯತ ಧರ್ಮವನ್ನು ಸ್ಥಾಪಿಸಿದಂತಹ ಅಪ್ಪ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕನಾಗಿ ಘೋಷಿಸಿದ್ದು ಕರ್ನಾಟಕದ ಹಾಗೂ ಇಡೀ ವಿಶ್ವದ ಮಾನವ ಕುಲಕ್ಕೆ ನಮ್ಮೆಲ್ಲರಿಗೂ ಈ ಘೋಷಣೆಯಿಂದ ಹೆಮ್ಮೆ ಪಡುವಂತೆ ಮಾಡಿರುವ ಹಿನ್ನೆಲೆಯಲ್ಲಿ ಗುರುವಾರ ಸಾಂಕೇತಿಕವಾಗಿ ನಗರದ ಶ್ರೀ ಬಸವೇಶ್ವರ ಪುತ್ತಳಿಯ ಆವರಣದಲ್ಲಿ ಶ್ರೀ ಬಸವಣ್ಣನವರಿಗೆ ಪುಷ್ಪ ಮಾಲಾರ್ಪಣೆ ಮಾಡಿ ಎಲ್ಲರೂಗು ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ವೇಳೆ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ ಮಾಹಾಗವ್ಕರ್, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲೆಯ ಉಪಾಧ್ಯಕ್ಷ ಅಶೋಕ್ ಗೂಳಿ, ಮಹಾ ಪ್ರಧಾನ ಕಾರ್ಯದರ್ಶಿಗಳಾದ ಆರ್.ಜಿ.ಶೆಟ್ಗರ್, ಹನುಮಂತರಾವ್ ಪಾಟೀಲ್ ಕುಸ್ನೂರ್, ಹಿರಿಯ ಸಾಹಿತಿಗಳು ಪೆÇ್ರಫೆಸರ್ ಆರ್ ಕೆ ಹುಡುಗಿ, ರಾಜಶೇಖರ್ ಪಾಟೀಲ್, ಸಂಜಯಕುಮಾರ್ ಬಡದಾಳ, ಹನುಮಂತರಾವ್ ಪಾಟೀಲ್, ಶಿವಶರಣಪ್ಪ ದೇಗಾವ್, ಗುರುಬಸಪ್ಪ ಪಾಟೀಲ್, ನಿಂಬೆಣ್ಣಪ್ಪ ಕೊರ್ವಾರ್, ಅಯ್ಯಣ್ಣ ನಂದಿ, ಅಯ್ಯನಗೌಡ ಪಾಟೀಲ್, ರವೀಂದ್ರ ಶಾಬಾದಿ, ಬಸವರಾಜ್ ದುಳಗುಂಡಿ, ಶಿವಕುಮಾರ್ ಬಿದರಿ, ರವಿಕುಮಾರ್ ಹರಗಿ, ಧನರಾಜ್ ತಾಂಬ್ಳೆ, ರಮೇಶ್ ದುತ್ತರಗಿ, ಶ್ರೀಮತಿ ನಳಿನಿ ಮಾಗವ್ಕರ್, ಬಸ್ಸಮ್ಮ ಕಿರಣ್ಗಿ, ಸಿದ್ದರಾಮಪ್ಪ ಲದ್ದೆ, ಇನ್ನಿತರೆ ಗಣ್ಯರು ಪಾಲ್ಗೊಂಡು ಸಿಹಿ ಹಂಚುವ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಧನ್ಯವಾದಗಳು ತಿಳಿಸಿದ್ದಾರೆ.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…