ಕಲಬುರಗಿ; ನಗರದಲ್ಲಿರುವ ಸರಕಾರಿ ಪ್ರಾಣಿ ಸಂಗ್ರಾಲಯ ಅಭಿವೃದ್ಧಿಗೊಳಿಸುವಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸಚೀನ್ ಫರಹತಾಬಾದ ನೇತೃತ್ವದಲ್ಲಿ ಅರಣ್ಯ ಭವನದ ಎದುರಗಡೆ ಪ್ರತಿಭಟನೆ ನಡೆಸಿ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಅರಣ್ಯ ಭವನದ ಮುಂದೆ ಪ್ರತಿಭಟನೆ ನಡೆಸಿ ಸರಕಾರಿ ಪ್ರಾಣಿ ಸಂಗ್ರಹಾಲಯವು ಬಹಳ ವರ್ಷಗಳಿಂದ ಪ್ರಾರಂಭವಾಗಿರುತ್ತದೆ. ಆದರೆ ಸದರಿ ಪ್ರಾಣಿ ಸಂಗ್ರಹಾಲಯದಲ್ಲಿ ಸುಮಾರು ವರ್ಷಗಳಿಂದ ಯಾವುದೇ ರೀತಿಯ ಪ್ರಾಣಿಗಳು ಇರದೇ ಕೇವಲ ಬೆರಳಣಿಕೆಯಷ್ಟು ಪ್ರಾಣಿಗಳು ಇವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸಂಗ್ರಾಲಯದಲ್ಲಿ ನವಿಲು, ಮಂಗ, ಹೆಬ್ಬಾವು, ಮೊಸಳಿ ಹಾಗೂ ಮಕ್ಕಳಿಗಾಗಿ ಇರುವ ರೈಲಿನ ಬಂಡಿಯನ್ನು ಸಹಿತ ಬಂದಾಗಿರುತ್ತದೆ. ಮತ್ತು ಯಾವುದೇ ರೀತಿಯ ಆಟ– ಪಾಟಗಳ ಸಾಮಾನುಗಳು ಹಾಗೂ ಹುಲ್ಲಿನ ಗಾರ್ಡಗಳು ಇರುವುದಿಲ್ಲಾ ಹಾಗೂ ಪ್ರಾಣಿ ಸಂಗ್ರಾಹಾಲಯಕ್ಕೆ ಪ್ರತಿಯೊಬ್ಬ ವಯಸ್ಕರಿಗೆ ರೂ.20/- ಹಾಗೂ ನಾಬಾಲಿಕರಿಗೆ ರೂ.10/- ರಂತೆ ಪಡೆದುಕೊಂಡು ಸಾರ್ವಜನಿಕರಿಗೆ ಒಳಗೆ ಬಿಡುತ್ತಿದ್ದಾರೆ. ನಗರದಲ್ಲಿ ಜನಸಂಖ್ಯೆಯು ಬೆಳೆಯುತ್ತಿದ್ದು, ಚಿಕ್ಕ ಬಾಲಕ /ಬಾಲಕಿಯರು, ಹಿರಿಯ ನಾಗರೀಕರು ಮತ್ತು ಹೆಂಗಸರು, ಗಂಡಸರು ಹೆಚ್ಚಾಗಿ ಪ್ರಾಣಿ ಸಂಗ್ರಹಾಲಯಕ್ಕೆ ಆಗಮಿಸಿ ಪ್ರಾಣಿಗಳನ್ನು ನೋಡಲು ಇಚ್ಛಾಶಕ್ತಿಯುಳ್ಳವರು ಪ್ರಾಣಿ ಸಂಗ್ರಹಾಲಯಕ್ಕೆ ಬಂದರೆ ಅಲ್ಲಿ ಪ್ರಾಣಿಗಳು ಇರದೆ ಇರುವುದರಿಂದ ಬೇಸರ ವ್ಯಕ್ತ ಪಡಿಸಿ ಹೋಗುತ್ತಿರುವ ಉದಾಹರಣೆಗಳು ಬಹಳಷ್ಟು ಇರುತ್ತವೆ ಎಂದು ತಿಳಿಸಿದರು.
ಪ್ರಾಣಿ ಸಂಗ್ರಹಾಲಯವು ನಿರ್ಮಾಣವಾಗಬೇಕಾದರೆ 05 ವರ್ಷಗಳು ಬೇಕಾಗುತ್ತದೆ. ಆದ್ದರಿಂದ ಕಲಬುರಗಿ ನಗರದಲ್ಲಿರುವ ಈ ಪ್ರಾಣಿ ಸಂಗ್ರಹಾಲಯದಲ್ಲಿ ಎಲ್ಲಾ ತರಹದ ಪ್ರಾಣಿಗಳನ್ನು ತಂದು ಮತ್ತು ಸುಮಾರು ವರ್ಷಗಳಿಂದ ಚಿಕ್ಕ ಮಕ್ಕಳ ರೈಲು ಬಂಡಿಗಳು ಬಂದಾಗಿದ್ದು. ಇದನ್ನು ಪುನಃ ಪ್ರಾರಂಭ ಮಾಡಿ. ನಗರದಿಂದ ಯಾವುದೇ ಕಾರಣಕ್ಕೂ ಬೇರೆ ಕಡೆ ಪ್ರಾಣಿ ಸಂಗ್ರಹಾಲಯವನ್ನು ಸ್ಥಳಾಂತರಿಸದೆ ಇದುದ್ದರಲ್ಲಿಯೇ ಅಭಿವೃದ್ಧಿಗೊಳಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಇದಕ್ಕೆ ಅಭಿವೃದ್ಧಿಗಾಗಿ ಕೆ.ಕೆ.ಆರ್.ಡಿ.ಬಿ. ಮತ್ತು ದಕ್ಷೀಣ–ಉತ್ತರ ಹಾಗೂ ಗ್ರಾಮೀಣ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಅನುದಾನದಲ್ಲಿ ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೆಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ: ಸುರೇಶ ಹನಗುಡಿ, ಅಕ್ಷಯ, ನವೀನ, ಅಣವೀರ ಪಾಟೀಲ, ಶಂಕರ ಹುಲಸುರ, ಪ್ರವೀಣ ಸಿಂಧೆ, ಅಂಬು ಮಸ್ಕಿ, ಸಾಯಿಕುಮಾರ ಸಿಂಧೆ ಉಪಸ್ಥಿತರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…