ಕಲಬುರಗಿ; ಜಿಲ್ಲೆಯಲ್ಲಿ 4G ಸ್ಯಾಚುರೇಶನ್ ಮೊಬೈಲ್ ಟವರ್‌ಗೆ ಅನುಮೋದನೆಗೆ ಬುಧವಾರ ಸಂಸದ ಡಾ. ಉಮೇಶ್ ಜಾಧವ್ ಅವರು ಕೇಂದ್ರ ರೈಲ್ವೆ ಮತ್ತು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವರಾದ ಅಶ್ವಿನಿ ವೈಷ್ಣವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮನವಿ ಮಾಡಿ, ಶಹಾಬಾದ್ ರೈಲ್ವೆ ನಿಲ್ದಾಣದಲ್ಲಿ ಇನ್ನೆರಡು ರೈಲುಗಳ ನಿಲ್ಲುವಿಕೆಗೆ ಒಪ್ಪಿಗೆ ನೀಡುವುದಕ್ಕೆ ಅಭಿನಂದನೆ ವ್ಯಕ್ತಪಡಿಸಿದರು.
ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕೇವಲ ಎರಡು(2) 4G ಸ್ಯಾಚುರೇಶನ್ ಮೊಬೈಲ್ ಟವರ್ ಅನ್ನು ಅನುಮೋದಿಸಲಾಗಿದೆ ಆದರೆ ಜಿಲ್ಲೆಯಲ್ಲಿ ಸುಮಾರು 36 ಹಳ್ಳಿಗಳಲ್ಲಿ ಯಾವುದೇ ಮೊಬೈಲ್ ಸಿಗ್ನಲ್ ಇಲ್ಲದ ಪ್ರದೇಶವೆಂದು ಗುರುತಿಸಲಾಗಿದೆ. ಈ ಗ್ರಾಮಗಳಿಗೆ 4G ಮೊಬೈಲ್ ಟವರ್, ಸಿಗ್ನಲ್ ಒದಗಿಸುವುದರಿಂದ ಇ-ಆಡಳಿತ, ಮೊಬೈಲ್ ವಾಣಿಜ್ಯ ಸೌಲಭ್ಯಗಳನ್ನು ಬಳಸಲು ಅನುಕೂಲವಾಗುತ್ತದ್ದೆ ಮತ್ತು ಈ ಎಲ್ಲಾ ಗ್ರಾಮಗಳು ಯಾವುದೇ ರೀತಿಯ ಡೇಟಾ ಸಂವಹನಕ್ಕಾಗಿ ತಾಲೂಕಗಳಿಗೆ ಅವಲಂಬಿತವಾಗಿವೆ ಎಂದು ತಿಳಿಸಿದರು.
ಕಲಬುರಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನಲ್ಲಿ 5 ಗ್ರಾಮ, ಸೇಡಂ ತಾಲೂಕಿನ 3 ಗ್ರಾಮಗಳು, ಚಿತ್ತಾಪುರ ತಾಲೂಕಿನ 2 ಗ್ರಾಮಗಳು, ಜೇವರ್ಗಿ ತಾಲೂಕಿನ 5 ಗ್ರಾಮಗಳು, ಕಲ್ಬುರ್ಗಿ ಗ್ರಾಮಾಂತರ ತಾಲೂಕಿನಲ್ಲಿ 9 ಗ್ರಾಮಗಳು ಮತ್ತು ಚಿಂಚೋಳಿ ಆಳಂದ್ ತಾಲೂಕಿನ ತಲಾ 4 ಗ್ರಾಮಗಳಲ್ಲಿ ಮೊಬೈಲ್ ಸಿಗ್ನಲ್ ಇಲ್ಲದಂತಿದೆ ಹಾಗೆಯೇ ಈ ಗ್ರಾಮಗಳಿಗೆ ಮೊಬೈಲ್ ಟವರ್ ಅಳವಡಿಸಲು ಕೋರಿದರು ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವರು ಅತಿ ಶೀಘ್ರದಲ್ಲಿಯೇ ಈ ಗ್ರಾಮಗಳಿಗೆ ಡಿಜಿಟಲಕರಣ ಗೊಳಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರು ಶಹಾಬಾದ್ ರೈಲ್ವೆ ನಿಲ್ದಾಣದಲ್ಲಿ ಬಿಜಾಪುರ್ ಹೈದರಾಬಾದ್ ಎಕ್ಸ್ಪ್ರೆಸ್ (ಗಾಡಿ ಸಂಖ್ಯೆ 17029/17230) ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಭುವನೇಶ್ವರ್ ಕೋಣಾರ್ಕ್ ಎಕ್ಸ್ಪ್ರೆಸ್ (ಗಾಡಿ ಸಂಖ್ಯೆ 11019/11020), ಈ ಎರಡು ರೈಲುಗಳ ನಿಲುವಿಕೆ ರೈಲ್ವೆ ಇಲಾಖೆ ಒಪ್ಪಿದೆ ಎಂದು ಸಂಸದರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಕಲ್ಬುರ್ಗಿ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕರಾದ ವಿಠ್ಠಲ್ ಜಾಧವ್, ಶಹಾಬಾದ್ ತಾಲೂಕಿನ ಬಿ ಬಿ ನಾಯಕ್ ಮತ್ತು ಅಬ್ದುಲ್ ವಹಿದ್ ಮುನೀರ್ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…