ಹೈದರಾಬಾದ್ ಕರ್ನಾಟಕ

ನ್ಯಾಯಮೂರ್ತಿ ಕೆ. ಭಕ್ತವತ್ಸಲ ಆಯೋಗದ ಎರಡು ಶಿಫಾರಸ್ಸು ತಿರಸ್ಕಾರಕ್ಕೆ ಕುಂಬಾರ್ ವಿರೋಧ

ಕಲಬುರಗಿ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನ್ಯಾಯಮೂರ್ತಿ ಕೆ. ಭಕ್ತವತ್ಸಲ ಅವರ ನೇತೃತ್ವದ ಆಯೋಗವು ಮಾಡಿರುವ ಐದು ಶಿಫಾರಸ್ಸುಗಳಲ್ಲಿ ಎರಡು ಶಿಫಾರಸ್ಸುಗಳನ್ನು ತಿರಸ್ಕರಿಸಿದ್ದು ಅತೀ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ. ಕೂಡಲೇ ಆಯೋಗದ ವರದಿಯನ್ನು ಯಥಾಸ್ಥಿತಿಯಲ್ಲಿ ಜಾರಿಗೆ ತರಬೇಕು ಎಂದು ಜಿಲ್ಲಾ ಕುಂಬಾರ್ ಸಮಾಜದ ಅಧ್ಯಕ್ಷ ಶಿವಶರಣಪ್ಪ ಕುಂಬಾರ್ ಅವರು ಒತ್ತಾಯಿಸಿದ್ದಾರೆ.

ಶೋಷಿತರ ಸಮಾವೇಶದ ಹೆಸರಿನಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಕೆಲಸ ಆಗುತ್ತಿದೆ. ಹಿಂದುಳಿದ ವರ್ಗಗಳ ಅಣ್ಣ ಎಂದು ಹಿಂದುಳಿದ ವರ್ಗಗಳನ್ನು ಶೋಷಣೆ ಮಾಡುತ್ತಿರುವ ಪ್ರಬಲರು, ಸಣ್ಣ, ಅತಿ ಸಣ್ಣ ಜನಾಂಗಗಳು ಒಂದಾಗದಿದ್ದರೆ, ಸಂಘಟಿತ ಹೋರಾಟ ಮಾಡದಿದ್ದರೆ, ನಮ್ಮ ಮಕ್ಕಳಿಗೆ ನಾವು ವಿಷ ಉಣಿಸಿದಂತೆ. ಏಳಿ ಎದ್ದೇಳಿ, ಎಚ್ಚರಗೊಳ್ಳಿ, ನಮ್ಮೊಂದಿಗಿದ್ದು ನಮ್ಮನ್ನೇ ಶೋಷಣೆ ಮಾಡಿ ಮತ್ತೆ ಮತ್ತೆ ಅಧಿಕಾರ ಪಡೆಯುತ್ತಿರುವ ಕುತಂತ್ರ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳಲ್ಲಿ ಶೇಕಡಾ 80ರಷ್ಟು ಜಾತಿ, ಉಪಜಾತಿಗಳಿಗೆ ಕನಿಷ್ಠ ರಾಜಕೀಯ ಪ್ರಾತಿನಿಧ್ಯವೂ ಸಿಕ್ಕಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕುರಿತಂತೆ ನ್ಯಾ ಕೆ. ಭಕ್ತವತ್ಸಲ ಆಯೋಗವು ಐದು ಶಿಫಾರಸ್ಸುಗಳನ್ನು ಮಾಡಿತ್ತು. ಆ ಐದು ಶಿಪಾರಸ್ಸುಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟವು ಮೂರನ್ನು ಮಾತ್ರ ಒಪ್ಪಿಕೊಂಡು, ಎರಡನ್ನು ತಿರಸ್ಕರಿಸಿದೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅಂಗೀಕರಿಸಿದ ಮೂರು ಶಿಫಾರಸ್ಸುಗಳಿಗಿಂತ ತಿರಸ್ಕøತವಾದ ಎರಡು ಶಿಫಾರಸ್ಸುಗಳೇ ಮಹತ್ವ ಎನಿಸಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರೆಗೆ ಹಿಂದುಳಿದ ವರ್ಗಗಳಿಗೆ ನಿಗದಿ ಮಾಡಲಾಗಿದ್ದ ಮೀಸಲಾತಿಯಲ್ಲಿ ಅಧ್ಯಯನದ ಕೊರತೆಯನ್ನು ಗುರುತಿಸಿ ದೇಶದ ಸರ್ವೋಚ್ಛ ನ್ಯಾಯಾಲಯ ತಕಾರಾರು ತೆಗದಿತ್ತು. ಆ ಕಾರಣಕ್ಕಾಗಿಯೇ ನ್ಯಾ. ಕೆ. ಭಕ್ತವತ್ಸಲ ಅವರ ನೇತೃತ್ವದ ಆಯೋಗ ರಚಿಸಲಾಗಿತ್ತು. ಆಯೋಗ 1985 ರಿಂದ ಕರ್ನಾಟಕದಲ್ಲಿ ನೆಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಎಲ್ಲ ಮಗ್ಗಲುಗಳನ್ನು ಪರಿಶೀಲಿಸಿ ಐದು ಶಿಫಾರಸ್ಸುಗಳನ್ನು ಮಾಡಿತ್ತು ಎಂದು ಅವರು ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡಿದರೂ ಒಟ್ಟಾರೆ ಮೀಸಲಾತಿ ಶೇಕಡಾ 50 ಮೀರದಂತೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಮುಂದುವರಿಸಿಕೊಂಡು ಹೋಗಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮಹಾಪೌರ, ಉಪ ಮಹಾಪೌರ ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿಡಬೇಕು. ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ಶಾಖೆಗಳನ್ನು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಅಧೀನಕ್ಕೆ ಒಳಪಡಿಸಬೇಕು ಎಂಬ ಮೂರು ಶಿಫಾರಸ್ಸುಗಳನ್ನು ರಾಜ್ಯ ಸಚಿವ ಸಂಪುಟವು ಅಂಗೀಕರಿಸಿತ್ತು ಎಂದು ಅವರು ವಿವರಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಮೀಸಲಾತಿಯಲ್ಲಿ ಈಗಿರುವ ಹಿಂದುಳಿದ ವರ್ಗ ಅ ಮತ್ತು ಬ ಎಂಬ ಎರಡು ಗುಂಪುಗಳ ಬದಲಾಗಿ ನಾಲ್ಕು ಗುಂಪುಗಳಾಗಿ ವಿಂಗಡಿಸಬೇಕು. ಮತ್ತು ಬಿಬಿಎಂಪಿಯ ಮೇಯರ್, ಉಪಮೇಯರಗಳಿಗೆ ಇರುವ 30 ತಿಂಗಳ ಅಧಿಕಾರ ಅವಧಿಯ ಮಾದರಿಯನ್ನು ಉಳಿದ ನಗರಪಾಲಿಕೆಗಳಿಗೂ ವಿಸ್ತರಿಸಬೇಕು ಎಂಬ ಎರಡು ಶಿಫಾರಸ್ಸುಗಳನ್ನು ಸಚಿವ ಸಂಪುಟ ತಿರಸ್ಕರಿಸಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ಧರಾಮಯ್ಯನವರ ನೇತೃತ್ವದ ಸಚಿವ ಸಂಪುಟ ಒಳ ವರ್ಗೀಕರಣದ ಆಶಯದ ಶಿಫಾರಸ್ಸನ್ನೇ ತಿರಸ್ಕರಿಸಿರುವುದು ಗಂಭೀರ ಚರ್ಚೆಗೆ ಕಾರಣವಾಗಬೇಕು. ಹಾಗೆ ನೋಡಿದರೆ ಹಿಂದುಳಿದ ವರ್ಗಗಳ ಮೂಲ ಮೀಸಲಾತಿಯಲ್ಲಿ ಪ್ರವರ್ಗ1, 2ಎ, 2ಬಿ, 3ಎ, 3ಬಿ ಹೀಗೆ ಐದು ಗುಂಪುಗಳ ವರ್ಗೀಕರಣವಿದೆ. ಆದಾಗ್ಯೂ, ಇದು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಮಾಡುವಾಗ ಹಿಂದುಳಿದ ವರ್ಗ ಅ ಮತ್ತು ಬ ಎಂದು ಎರಡು ಗುಂಪುಗಳಾಗಿ ಮಾತ್ರ ವಿಂಗಡಿಸಲಾಗಿತ್ತು.

ಪ್ರವರ್ಗ1, 2ಎ ಮತ್ತು 2ಬಿಯನ್ನು ಒಳಗೊಂಡ ಹಿಂದುಳಿದ ವರ್ಗ ಅ ಗುಂಪಿಗೆ ಶೇಕಡಾ 26.4 ನಿಗದಿಪಡಿಸಲಾಗಿತ್ತು. ಪ್ರಬಲ ಭೂಒಡೆತನ ಜಾತಿಗಳಿರುವ 3ಎ ಮತ್ತು 3ಬಿಯನ್ನು ಹಿಂದುಳಿದ ವರ್ಗ ಬ ಎಂದು ಗುರುತಿಸಿ ಶೇಕಡಾ 6.6ರ ಮೀಸಲಾತಿಯನ್ನು ನಿಗದಿಪಡಿಸಲಾಗಿತ್ತು. ಈ ಸೂತ್ರವನ್ನು ಜೆ.ಹೆಚ್. ಪಟೇಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ನೇಮಿಸಿದ್ದ ಸಿದ್ಧರಾಮಯ್ಯನವರ ನೇತೃತ್ವದ ಸಮಿತಿ ರಚಿಸಿತ್ತು. ಆದಾಗ್ಯೂ, ಈ ಸೂತ್ರ ಹಿಂದುಳಿದ ವರ್ಗಗಳೊಳಗೆ ಅಧಿಕಾರ ಹಂಚಿಕೆಯ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸಫಲವಾಗಿಲ್ಲ ಎಂಬ ಅಂಶವನ್ನು ನ್ಯಾ ಭಕ್ತವತ್ಸಲ ಆಯೋಗ ಗುರುತಿಸಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆ ಹಿಂದುಳಿದ ವರ್ಗಗಳಲ್ಲಿ 802 ಜಾತಿ, ಉಪಜಾತಿಗಳಿವೆ. ಆದರೆ ಗ್ರಾಮ ಪಂಚಾಯ್ತಿಯ ಸದಸ್ಯತ್ವದ ಕನಿಷ್ಠ ರಾಜಕೀಯ ಪ್ರಾತಿನಿಧ್ಯ ಸಿಕ್ಕಿರುವುದು ಕೇವಲ 156 ಜಾತಿ, ಉಪಜಾತಿಗಳಿಗೆ ಮಾತ್ರ. ಅಂದರೆ ಹಿಂದುಳಿದ ವರ್ಗಗಳಲ್ಲಿ ಶೇಕಡಾ 80ರಷ್ಟು ಜಾತಿ, ಉಪಜಾತಿಗಳು ರಾಜಕೀಯ ಪ್ರಾತಿನಿಧ್ಯದಿಂದ ದೂರವೇ ಉಳಿದಿವೆ. ಅದರಲ್ಲಿ ನೂರಾರು ಅಲೆಮಾರಿ, ಅಲೆ ಅರೆಮಾರಿ ಜಾತಿಗಳು, ಅನೇಕ ಸಣ್ಣ ಪುಟ್ಟ ಕಾಯಕ ಸಮುದಾಯಗಳಿವೆ. ಈ ವಂಚಿತ ಸಮುದಾಯಗಳಿಗೆ ಕನಿಷ್ಠ ರಾಜಕೀಯ ಪ್ರಾತಿನಿಧ್ಯದ ನ್ಯಾಯ ಸಿಗಬೇಕಾದರೆ ಈಗಿರುವ ಎರಡು ಗುಂಪುಗಳ ಬದಲು ನಾಲ್ಕು ಗುಂಪುಗಳಾಗಿ ವಿಂಗಡಿಸಬೇಕು ಎನ್ನುವುದು ನ್ಯಾ. ಭಕ್ತವತ್ಸಲ ಆಯೋಗದ ಶಿಫಾರಸ್ಸು. ಪ್ರವರ್ಗ1 ಮತ್ತು 2ಎ ಈ ಎರಡನ್ನು ಪ್ರತ್ಯೇಕ ಗುಂಪುಗಳಾಗಿ ಪರಿಗಣಿಸಿ ತಲಾ ಶೇಕಡಾ 9.9ರ ಮೀಸಲಾತಿ ಕೊಡಬೇಕು. ಉಳಿದಂತೆ 2ಬಿ, 3ಎ, 3ಬಿಯನ್ನು ಎರಡು ಗುಂಪಾಗಿ ವರ್ಗೀಕರಿಸಿ ತಲಾ ಶೇಕಡಾ 6.6ರ ಮೀಸಲಾತಿ ನಿಗದಿಪಡಿಸಬೇಕೆಂದು ನ್ಯಾ ಭಕ್ತವತ್ಸಲ ಆಯೋಗ ಹೇಳಿತ್ತು. ಆದರೆ ಈ ಶಿಫಾರಸ್ಸನ್ನು ಸಿದ್ಧಾರಾಮಯ್ಯ ಸರ್ಕಾರ ಸಾರಾಸUಟಾಗಿ ತಿರಸ್ಕರಿಸಿರುವುದು ಸಾಮಾಜಿಕ ನ್ಯಾಯದ ಕುರಿತಾದ ಬದ್ಧತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ 2ಎನಲ್ಲಿರವ ಮಡಿವಾಳ್, ಸವಿತಾ, ಕುಂಬಾರ್, ವಿಶ್ವಕರ್ಮ, ದರ್ಜಿ ಇತ್ಯಾದಿ ಕಾಯಕ ಸಮುದಾಯಗಳನ್ನು ಪ್ರತ್ಯೇಕಿಸಿ ಮತ್ತೊಂದು ಗುಂಪು ರಚಿಸಿದ್ದರೆ ಸಾಮಾಜಿಕ ನ್ಯಾಯ ಅಂಚಿನ ಜನಕ್ಕೂ ಹೋಗುವ ಅವಕಾಶವಿತ್ತು. ಆದರೆ ರಾಜ್ಯ ಸರ್ಕಾರದ ಈಗಿನ ನಿರ್ಧಾರ ಹಿಂದುಳಿದ ವರ್ಗಗಳ ಒಳಗೆ ಕೆಲವೇ ಪ್ರಬಲ ಜಾತಿಗಳ ಏಕಸ್ವಾಮ್ಯವನ್ನು ಪೆÇೀಷಿಸಿಕೊಂಡು ಹೋಗಲು ಬದ್ಧವಾದಂತಿದೆ. ಹಾಗೆಯೇ ಸರ್ವೋಚ್ಛ ನ್ಯಾಯಾಲಯವು ಎತ್ತಿದ ತಕರಾರಿಗೆ ಸಂಬಂಧಿಸದ ಶಿಫಾರಸ್ಸನ್ನೇ ರಾಜ್ಯ ಸರ್ಕಾರ ಕೈಬಿಟ್ಟಿರುವುದು ಗಂಭೀರ ಲೋಪವಾಗಿದೆ. ಇತ್ತ ಒಳಮೀಸಲಾತಿ ಬೇಕೆನ್ನುವ ಪರಿಶಿಷ್ಟ ಜಾತಿಗಳವರೂ ಸರ್ಕಾರದ ನಿರ್ಧಾರದಲ್ಲಿನ ಒಳ ಸಂದೇಶವನ್ನು ಅರ್ಥಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago