ಕಲಬುರಗಿ: ಜೈ ಕನ್ನಡಿಗರ ರಕ್ಷಣಾ ವೇದಿಕೆ ಹಾಗೂ ಮನ್ನೂರು ಆಸ್ಪತ್ರೆ ವತಿಯಿಂದ ಫೆಬ್ರುವರಿ 03 ರಂದು ಸಾಯಂಕಾಲ 5:00 ಗಂಟೆಗೆ ನಗರದ ಅನ್ನಪೂರ್ಣ ಕ್ರಾಸ್‍ನಲ್ಲಿರುವ ಕಲಾಮಂಡಲದಲ್ಲಿ 75ನೇ ಸಂವಿಧಾನ ದಿನಾಚಾರಣೆ ಹಾಗೂ ಭೀಮರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಸಚೀನ ಪರಹತಾಬಾದ ಹೇಳಿದರು.
ಪೂಜ್ಯ ಶ್ರೀ ಗುರುರಾಜೇಂದ್ರ ಶಿವಯೋಗಿಗಳು ಮಹಾಲಕ್ಷ್ಮೀ ಶಕ್ತಿಪೀಠ ಸುಕ್ಷೇತ್ರ ನದಿಸಿನೂರ ಅವರು ಕಾರ್ಯಕ್ರಮದ ದಿವ್ಯಾ ಸಾನಿಧ್ಯ ವಹಿಸುವರು, ಶಾಸಕ ಅಲ್ಲಮಪ್ರಭು ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು, ಪ್ರಗತಿಪರ ವಿಚಾರವಾದಿ ಡಾ. ಅನೀಲ ಟೆಂಗಳಿ ಅವರು ವಿಶೇಷ ಭಾಷಣಕಾರರಾಗಿ ಆಗಮಿಸುವರು, ಮನ್ನೂರು ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರೂಕ್ ಅಹ್ಮದ್ ಮನ್ನೂರ ಅವರು ಅಧ್ಯಕ್ಷತೆ ವಹಿರುವರು, ಮೇಯರ್ ವಿಶಾಲ ಧರ್ಗಿ ಡಾ: ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಪೂಜೆ ಸಲ್ಲಿಸುವರು, ಕೆ.ಪಿ.ಸಿ.ಸಿ. ಸದಸ್ಯ ನೀಲಕಂಠರಾವ ಮೂಲಗೆ ಭೀಮರತ್ನ ಪ್ರಶಸ್ತಿ ಪ್ರಧಾನ ಮಾಡುವರು.
ಸುರೇಶ ಬಡಿಗೇರ, ಅನೀಲ ಡೊಂಗರಗಾಂವ, ಕು. ರೇಣುಕಾ ಪಿ. ಹೋಲ್ಡರ್, ಗೀತಾ ಮುದಗಲ್, ಎಮ್.ಡಿ. ಸಿದ್ದಿಕ್ಕಿ, ಸಂತೋಷ ಹಾದಿಮನಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ದಲಿತ ಹಿರಿಯ ಮುಖಂಡ ಪ್ರಕಾಶ ಮೂಲಭಾರತಿ, ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ದಲಿತ ಯುವ ಮುಖಂಡ ಲಕ್ಷ್ಮಣ ಮೂಲಭಾರತಿ, ಕಾಂಗ್ರೇಸ್ ಎಸ್.ಸಿ. ವಿಭಾಗೀಯ ಉಪಾಧ್ಯಕ್ಷ ವಿಜಯಕುಮಾರ ಕಟ್ಟಿಮನಿ, ಮಾಜಿ ಸಿಂಡಿಕೇಟ್ ಸದಸ್ಯ ಸುನೀಲ ವಂಟಿ, ದಲಿತ ಹಿರಿಯ ಮುಖಂಡ ಎಸ್. ಎಮ್. ಪಟ್ಟಣಕರ್, ನ್ಯಾಯವಾದಿ ರಾಜೇಶ ಶಿವಶರಣಪ್ಪ, ಪಾಳಾದ ಸ.ಪ್ರಾ. ಶಾಲೆಯ ಸಹಶಿಕ್ಷಕಿ ಗೀತಾ ಭರಣಿ ಇವರು ಭೀಮರತ್ನ ಪ್ರಶಸ್ತಿ ಪ್ರಧಾನಕ್ಕೆ ಆಯ್ಕೆಯಾಗಿದ್ದಾರೆ. ಎಂದು ಪರಹತಾಬಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…