ಕಮಲಾಪುರ, ಜ.31- ತಾಲ್ಲೂಕಿನ ಕಲ್ಕೂಡ್ ಗ್ರಾಮದ ರೈತ ಮಾಣಿಕಪ್ಪ ತಂದೆ ಗುರುಲಿಂಗಪ್ಪ ಕೋಟಿ ಅವರಿಗೆ ಸೇರಿದ ಸುಮಾರು 1,15000ರೂ.ಗಳ ಮೌಲ್ಯದ ಪಂಪ್‍ಸೆಟ್ ಮತ್ತು ಕೇಬಲ್ ವೈರ್‍ಗಳನ್ನು ಕಳೆದ 19ರಂದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಐವರು ಆರೋಪಿಗಳನ್ನು ಬಂಧಿಸಿ, ಅವರಿಂದ ಕಳ್ಳತನದ ಮುದ್ದೆ ಮಾಲನ್ನು ಹಾಗೂ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಹುಮ್ನಾಬಾದ್ ಪಟ್ಟಣದ ನಿವಾಸಿಗಳಾದ ಕುಂಬಾರ್ ಗಲ್ಲಿಯ ಸತೀಶ್ ತಂದೆ ಸಾಯಬಣ್ಣ ಪಂಚಾಳ್, ಗುರುನಾಥ್ ತಂದೆ ಬಾಬುರಾವ್ ಪಂಚಾಳ್, ಜನತಾನಗರದ ವೀರೇಶ್ ತಂದೆ ಜಗನ್ನಾಥ್ ಪದ್ಮನೂರ್, ಮಹೇಶ್ ತಂದೆ ಲಕ್ಷ್ಮಣ್ ವಡೆಕಾರ್, ಅವಿನಾಶ್ ತಂದೆ ಬಸವರಾಜ್ ಹಿರಗಜ್ಜಿ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಪಂಪ್‍ಸೆಟ್ ಹಾಗೂ ವೈರ್‍ಗಳು ಹಾಗೂ ಕೃತ್ಯಕ್ಕೆ ಬಳಸಲಾದ ಟಂಟಂ ವಾಹನ, ಪಾನಾಗಳು, ಕಟಿಂಗ್ ಪ್ಲೇಯರ್ ಸೇರಿ ಒಟ್ಟು 1,15000ರೂ.ಗಳ ಮೌಲ್ಯದ್ದನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಶ್ರೀನಿಧಿ, ಯು. ನಾಗೇಶ್ ಐತಾಳ್, ಗ್ರಾಮೀಣ ಉಪ ವಿಭಾಗದ ಪೋಲಿಸ್ ಉಪಾಧೀಕ್ಷಕ ಉಮೇಶ್ ಚಿಕ್ಕಮಠ್ ಅವರ ನೇತೃತ್ವದಲ್ಲಿ ಪಿಎಸ್‍ಐಗಳಾದ ಸಂಗೀತಾ ಎಸ್., ಶಿವಶಂಕರ್ ಸುಬೇದಾರ್, ಎಎಸ್‍ಐ ರಮೇಶ್ ಮುರುಡ್, ಸಿಬ್ಬಂದಿಗಳಾದ ರಾಜೇಂದ್ರಕುಮಾರ್ ರೆಡ್ಡಿ, ಗುರುನಾಥರೆಡ್ಡಿ, ರಾಮಚಂದ್ರ, ಸೈಯದ್ ಶಕೀಲ್ ಅಲಿ, ರಮೇಶ್, ರಾಜಶೇಖರ್, ಹುಸೇನ್ ಭಾಷಾ, ಸಂತೋಷ್, ಕೈಲಾಶ್, ಮನೋಜ್, ಬಲರಾಮ್ ಮುಂತಾದವರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದರು. ಕಾರ್ಯಾಚರಣೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…