ಸಮಾನತೆ ಸಂದೇಶ ಸಾರಿದ ಮಡಿವಾಳ ಮಾಚಿದೇವರು: ಪ್ರೊ. ದಯಾನಂದ ಅಗಸರ

ಕಲಬುರಗಿ: ಬುದ್ಧರ ಮೌಲಿಕ ಚಿಂತನೆಗಳಿಗೆ 12ನೇ ಶತಮಾನದ ವಿಶ್ವಗುರು ಬಸವಣ್ಣನವರು ಹೆಚ್ಚು ಒತ್ತು ನೀಡಿದರು. ಲಿಂಗ, ವರ್ಣ ಮತ್ತು ವೃತ್ತಿ ಬೇದವಿಲ್ಲದೆ ಸಮಾನತೆ ಸಂದೇಶ ಸಾರವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದ ಬಸವಾದಿಶರಣರ ಅಗ್ರಗಣ್ಯ ದಾರ್ಶನಿಕರಲ್ಲಿ ವೀರಶರಣ ಮಡಿವಾಳ ಮಾಚಿದೇವರು ಒಬ್ಬರಾಗಿದ್ದಾರೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ವೀರಶರಣ ಮಡಿವಾಳ ಮಾಚಿದೇವರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಚನ ಕ್ರಾಂತಿಯ ಪ್ರಭಾವ ಮತ್ತು ಬಸವಣ್ಣನವರ ವೈಜ್ಞಾನಿಕ ವಿಚಾರಗಳ ಸೆಳೆತಕ್ಕೆ ಆಕರ್ಷಿತರಾದ ಶರಣರು ದೇಶ ವಿದೇಶಗಳಿಂದ ಬಂದು ಅನುಭವ ಮಂಟಪದಲ್ಲಿ ಸೇರಿ ಸಮಾಜದ ವೈರುಧ್ಯಗಳಿಗೆ ಪರಿಹಾರ ಸೂಚಿಸಿದರು. ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿ ಗ್ರಾಮದ ಮಾಚಿದೇವರು ಬಸವಣ್ಣನವರ ಜೊತೆಗೆ ಬಸವಣ್ಣ ಅವರ ಜೊತೆಗೆ ಉತ್ತಮ ಒಡನಾಟ ಬೆಳೆಸಿಕೊಂಡು ತಮ್ಮ ಕಾಯಕ ನಿಷ್ಠೆ ಮೂಲಕ ಮೆಚ್ಚುಗೆ ಪಡೆದರು ಎಂದರು.

ಮಾಚಿದೇವರ ಕಾಯಕ ಪ್ರಜ್ಞೆ ಮೆಚ್ಚಿದ ಬಸವಣ್ಣನವರು ವೀರಶರಣ, ಗಣಚಾರಿ, ವೀರಗಂಟಿ ಮಾಚಿ ತಂದೆ ಎಂಬ ಹಲವು ಅನ್ವರ್ಥಕ ಹೆಸರುಗಳಿಂದ ಕರೆದಿದ್ದಾರೆ. ಶರಣ ಮಾಚಿದೇವರ ಚಿಂತನೆಗಳು ಪ್ರಖರತೆಯಿಂದ ಕೂಡಿದ್ದು, ನೇರ, ನಿಖರ ಮತ್ತು ನಿಷ್ಠೂರ ವೈಚಾರಿಕ ವಿಚಾರಗಳನ್ನು ಸಮಾಜದ ಏಳಿಗೆಗೆ ನೀಡಿದ್ದಾರೆ. ಇವರ ಜ್ಞಾನ ಚಿಂತನೆಗಳನ್ನು ಅರಿತುಕೊಂಡು ಕಾಯಕದಲ್ಲಿ ತೃಪ್ತಿ ಕಾಣಬೇಕು. ಸಮಕಾಲೀನ ಸಮಸ್ಯೆಗಳಿಗೆ ಶ್ರೀದ್ದೇಶ್ವರ ಸ್ವಾಮಿಗಳ ಅಣತಿಯಂತೆ ‘ಹೇಳುವುದೇನು ಉಳಿದಿಲ್ಲ, ಮಾಡಬೇಕಿರುವುದು ಇನ್ನು ಬಹಳಷ್ಟಿದೆ’ ಎಂಬ ಕಾಯಕ ಪ್ರಜ್ಞೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ಕುಲಸಚಿವ ಡಾ. ಬಿ. ಶರಣಪ್ಪ ಪ್ರಸ್ತಾವಿಕವಾಗಿ ಮಾತನಾಡಿ 12ನೇ ಶತಮಾನದಲ್ಲಿ ಆದಂತಹ ವಿಚಾರ ಕ್ರಾಂತಿ ಒಂದು ಮೈಲಿಗಲ್ಲಾಗಿದೆ. ಆಧ್ಯಾತ್ಮಿಕ ಸಂಸತ್ತು ಕಲ್ಪನೆ ಮೂಲಕ ಅನುಭವ ಮಂಟಪ ಹಾಗೂ ಮಹಾಮನೆಯನ್ನು ಸ್ಥಾಪಿಸಿದರು. ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು, ದೀನ ದಲಿತರ ಬದುಕಿಗೆ ವಚನ ಸಾಹಿತ್ಯದ ಮೂಲಕ ಸುಧಾರಣೆ ಮಾಡಿದ್ದಾರೆ. ಬಸವಣ್ಣ, ಚನ್ನಯ್ಯ, ಚೌಡಯ್ಯ, ಅಕ್ಕಮಹಾದೇವಿ, ಅಲ್ಲಮಪ್ರಭ ಶರಣರ ವಚನ ಸಾರವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ವೀರಶರಣ ಮಾಚಿದೇವ ಶರಣರು ಶ್ರಮಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ವಿತ್ತಾಧಿಕಾರಿ ಪ್ರೊ. ರಾಜನಳ್ಕರ್ ಲಕ್ಷ್ಮಣ, ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಬೈರಪ್ಪ, ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ. ವಿ. ಎಂ. ಜಾಲಿ, ಕಾರ್ಯಕ್ರಮ ಸಂಯೋಜಕ ಪ್ರೊ. ಎನ್.ಜಿ. ಕಣ್ಣೂರು ಉಪಸ್ಥಿತರಿದ್ದರು.

ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ. ಕಣ್ಣೂರು ಅತಿಥಿಗಳನ್ನು ಸ್ವಾಗತಿಸಿದರು. ಪ್ರಕಾಶ ಹದನೂರ್ಕಾರ್ ವಂದಿಸಿದರು.

emedialine

Recent Posts

ಇಂದಿನಿಂದ ಸೂಗೂರ (ಕೆ ) ನವರಾತ್ರಿ ಬ್ರಹ್ಮೋತ್ಸವ

ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ )…

2 hours ago

ಕಾಳಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿವ್ಯ…

3 hours ago

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

16 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

19 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

23 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

24 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420