ಬಿಸಿ ಬಿಸಿ ಸುದ್ದಿ

ಭಾರತೀಯರಿಗೆ ಸಂವಿಧಾನವೇ ಪವಿತ್ರ ಗ್ರಂಥ

ಶಹಾಬಾದ: ದೇಶದಲ್ಲಿ ಆಯಾ ಧರ್ಮದವರಿಗೆ ಅವರಿಗೆ ಆದ ಧರ್ಮಗ್ರಂಥವಿದ್ದರೇ, ಭಾರತೀಯರಿಗೆ ಸಂವಿಧಾನವೇ ಪವಿತ್ರ ಗ್ರಂಥ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.
ಅವರು ಬುಧವಾರ ನಗರಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಸ್ಥಭ್ಧ ಚಿತ್ರ ವಾಹನಕ್ಕೆ ಅದ್ದೂರಿ ಸ್ವಾಗತ ಕೋರಿ, ನಂತರ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಣ್ಣನ್ನು ಯಾವುದೇ ಸ್ವಾಂತ್ರ್ಯ ನೀಡದೇ ಅವಳನ್ನು ಭೋಗದ ವಸ್ತುವಾಗಿ, ದಾಸಿಯಾಗಿ, ಮಕ್ಕಳು ಹಡೆಯುವ ಯಂತ್ರವಾಗಿ ಕಾಣುತ್ತಿದ್ದರು.ಆದರೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸ್ತ್ರೀಯರಿಗೆ ಸಮಾನತೆ ನೀಡುವ ನಿಟ್ಟಿನಲ್ಲಿ ಸಂವಿಧಾನದಲ್ಲಿ ಕಾನೂನುನನ್ನು ತಂದರು.ಅದರಿಂದಲೇ ಇಂದಿರಾಗಾಂಧಿ 17 ವರ್ಷ ಪ್ರಧಾನಿಯಾಗಿದ್ದು, ದ್ರೌಪಧಿ ಮುರ್ಮು ರಾಷ್ಟ್ರತಿಯಾಗಿದ್ದು ಸಂವಿಧಾನದಿಂದ.

ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ.ಅಲ್ಲದೇ ಇಂದು ರಾಮಮಂದಿರ ನಿರ್ಮಾಣವಾಗಬೇಕಾದರೆ ಅದು ಕೋರ್ಟ ಆದೇಶದ ಮೂಲಕ.ಅದು ಕೂಡ ಸಂವಿಧಾನದಿಂದಲೇ ಎಂಬುದನ್ನು ಯಾರು ಮರೆಯಬಾರದು.ಆದರೆ ಇಂದಿಗೂ ಕೆಲವರು ಸಂವಿಧಾನವನ್ನು ಒಪ್ಪಲು ತಯ್ಯಾರಿಲ್ಲ.ಸಂವಿಧಾನದ ಎಲ್ಲಾ ಸವಲತ್ತು ಪಡೆದುಕೊಂಡು ಸಂವಿಧಾನ ಕೇವಲ ಒಂದು ಜಾತಿಗೆ ಸಿಮೀತವಾಗಿದೆ ಎನ್ನುವ ಕೆಟ್ಟ ಮನಸ್ಸುಗಳು ಇಂದಿಗೂ ಸಮಾಜದಲ್ಲಿ ಕಾಣುತ್ತೆವೆ.ಒಂದು ವೇಳೆ ಮೇಲ್ಜಾತಿಯ ವ್ಯಕ್ತಿ ಸಂವಿಧಾನವನ್ನು ರಚಿಸಿದ್ದರೇ ಅವರನ್ನು ದೇವರೆಂದು ಪೂಜಿಸುತ್ತಿದ್ದರು.

ಅಸ್ಪøಶ್ಯ ಎಂಬ ಕಾರಣಕ್ಕೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸಿಮೀತ ಮಾಡುವುದು ಸರಿಯಲ್ಲ.ಅಂಬೇಡ್ಕರ್ ಯಾವುದೇ ಜಾತಿ, ಧರ್ಮ ಅಂಟಿಕೊಳ್ಳದೇ, ಭಾರತೀಯ ನಾಗರಿಕರಿಗೆ ಸಂವಿಧಾನ ರಚಿಸುವ ಮೂಲಕ ವಿಶ್ವದಲ್ಲಿಯೇ ಅತ್ಯಂತ ವಿಶಿಷ್ಟವಾದ ಸಂವಿಧಾನ ಎಂದು ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಎಂದರು.

ತಾಪಂ ಇಓ ಮಲ್ಲಿನಾಥ ರಾವೂರ ಮಾತನಾಡಿ, ಸ್ವಾತಂತ್ರ್ಯದ ನಂತರ ನಮ್ಮ ದೇಶದ ಆಡಳಿತ ಯಂತ್ರ ಹೇಗೆ ನಡೆಯಬೇಕು ಎನ್ನುವ ಸಮಗ್ರ ಗುಚ್ಚವೇ ಸಂವಿಧಾನ.ಇಂದು ಎಲ್ಲರೂ ಆನಂದದಿಂದ, ಸಂತೋಷವಾಗಿ ನಾವು ಬದುಕು ನಡೆಸುತ್ತಿದ್ದೆವೆ ಎಂದರೇ ಅದು ಸಂವಿಧಾನದಿಂದಲೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಹಸೀಲ್ದಾರ ಜಗದೀಶ.ಎಸ್.ಚೌರ್ ಮಾತನಾಡಿ,ನಮ್ಮ ದೇಶವೂ ಸಂವಿಧಾನದ ಆಶಯದ ಮೇಲೆ ನಡೆಯುತ್ತಿದೆ.ಸಂವಿಧಾನದ ಮಹತ್ವ ಮತ್ತು ಮೌಲ್ಯವನ್ನು ಪ್ರತಿಯೊಬ್ಬರೂ ಅರಿವನ್ನು ಹೊಂದಬೇಕು.ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರೂ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.

ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ, ದಸಂಸ ಮುಖಂಡರಾದ ಕೃಷ್ಣಪ್ಪ ಕರಣಿಕ್, ಬಸವರಾಜ ಮಯೂರ,ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ನಗರಸಭೆಯ ಸದಸ್ಯರಾದ ನಾಗರಾಜ ಕರಣಿಕ್,ಸಾಬೇರಾಬೇಗಂ, ಸಿಡಿಪಿಓ ವಿಜಯಲಕ್ಷ್ಮಿ ಹೇರೂರ್, ಸಮಾಜ ಕಲ್ಯಾಣ ಇಲಾಖೆಯ ರವಿಕುಮಾರ ಮುತ್ತಗಿ, ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ, ಹಣಮಂತರಾವ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಇದೇ ಸಂದರ್ಭದಲ್ಲಿ ನಗರದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಅದ್ದೂರಿ ಮೆರವಣಿಗೆ ನಡೆಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago