ಬಿಸಿ ಬಿಸಿ ಸುದ್ದಿ

ವೇದಗಳ ಪೂರ್ವ 5000 ವರ್ಷಗಳ ಹಿಂದೆಯ ವಿಶ್ವಕರ್ಮ ಸಂಸ್ಕøತಿ ಇತ್ತು

ಕಲಬುರಗಿ: ವಿಶ್ವದಲ್ಲಿ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಮತ್ತು ಪ್ರಗತಿಗೆ ವಿಶ್ವಕರ್ಮರ ಕೊಡುಗೆ ಅಪಾರವಿದೆ. ವಿಶ್ವಕರ್ಮರೆಂದೆರೆವಸ್ತುಜ್ಞಾನ, ವಿಷಯಜ್ಞಾನ ಮತ್ತು ಉಪಕರಣ ಜ್ಞಾನವನ್ನು ಬಲ್ಲವರಾಗಿದ್ದರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ವೀರೇಶ ಬಡಿಗೇರ ಹೇಳಿದರು.

ಅವರು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಮಯ ಪ್ರಕಾಶನ ಕಮಲಾಪುರ, ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರು ಮತ್ತು ಸಂಶೋಧಕರ ವೇದಿಕೆ ಕಮಲಾಪೂರ, ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಶಿರಸಂಗಿ, ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ ಕಲಬುರಗಿ ಇವರ ಸಹಯೋಗದಲ್ಲಿ ನಡೆದ “ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರು ಮತ್ತು ಸಂಶೋಧಕರ ರಾಜ್ಯ ಮಟ್ಟದ 5ನೇ ಸಮಾವೇಶದ ಆಶಯ ನುಡಿ ಹೇಳಿ ಮಾತನಾಡಿದರು.

ವೇzಗಳ ಪೂರ್ವ 5000 ವರ್ಷಗಳ ಹಿಂದೆಯ ವಿಶ್ವಕರ್ಮ ಸಂಸ್ಕøತಿ ಇತ್ತು ಎಂದು ಡಾ.ಕೆ.ಎಸ್.ಕುಮಾರಸ್ವಾಮಿ ತಮ್ಮ ಸೈಂದವ ಸಂಸ್ಕøತಿ ಮತ್ತು ರಾಕ್ಷಸರು ಎನ್ನುವ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಕರ್ಮಮಾರ್ಗದ ಮೂಲಕ ಪ್ರಯೋಗಶೀಲರಾಗಿ ಏಕವಸ್ತುವನ್ನು ಬಹುವಾಗಿ, ಬಹುವಸ್ತುವನ್ನು ಏಕವಸ್ತುವಾಗಿ ಪರಿವರ್ತಿಸುವ ಶಕ್ತಿ ವಿಶ್ವಕರ್ಮರಲ್ಲಿದೆ. ಜೊತೆಗೆ ಅಪಾರವಾದ ಸಾಹಿತ್ಯ, ಸಾಹಿತಿಗಳು ವಿಶ್ವಕರ್ಮ ಸಮಾಜದಲ್ಲಿ ಆಗಿಹೋಗಿದ್ದಾರೆ, ಸಾವಿರಾರು ಪುಟಗಳ ಸಾಹಿತ್ಯ ಪ್ರಕಟವಾಗದೇ ಉಳಿದಿದೆ ಇವೆಲ್ಲವೂ ಇಂದು ಬೆಳಕು ಕಾಣಬೇಕಾಗಿದೆ ಎಂದು ಹೇಳಿದರು.

ಕಲಬುರಗಿಯ ಶರಣಬಸವೆಶ್ವರ ಸಂಸ್ಥಾನದ ಪರಮ ಪೂಜ್ಯ ಶ್ರೀ ಲಿಂಗರಾಜಪ್ಪ ಅಪ್ಪಾಜಿ ಅವರು ಕಲಬುರಗಿ ನಗರದಲ್ಲಿ ನಡೆದ “ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರು ಮತ್ತು ಸಂಶೋಧಕರ ರಾಜ್ಯ ಮಟ್ಟದ 5ನೇ ಸಮಾವೇಶವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನಲ್ಲಿಯೇ ವಿಶ್ವಕರ್ಮ ಸಾಹಿತ್ಯ, ಕಲೆ, ಸಂಸ್ಕøತಿ ಶ್ರೀಮಂತವಾಗಿದೆ ಎಂದು ಹೇಳಿದರು.

ಹಿರಿಯ ಸಾಹಿತಿಗಳಾದ ನರಸಿಂಗರಾವ ಹೇಮನೂರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ವಕರ್ಮರಲ್ಲಿ ಪ್ರಾಚೀನ ಕಾಲದಿಂದಲೂ ಸಂಶೋಧನಾತ್ಮಕವಾದ ಮನೋಭಾವವಿದೆ. ತ್ರಿವಳಿ ಸಂಸ್ಥೆಗಳು ಕೋರಾನಾ ಕಾಲಘಟ್ಟದಲ್ಲಿ ಸಮಾಜವನ್ನು ಸಾಮಾಜಿಕವಾಗಿ ಸಂಘಟಿಸಲು ಅಂತರಜಾಲದ ಮೂಲಕ ಉಪನ್ಯಾಸ ಸರಣಿಗಳನ್ನು ಹಾಗೂ ಸಮಾವೇಶಗಳನ್ನು ಆಯೋಜಿಸುತ್ತಾ ಬಂದಿದೆ. ಐದನೆಯ ಸಮಾವೇಶದ ಅವಕಾಶ ನಮ್ಮ ಕಲಬುರಗಿ ಜಿಲ್ಲೆಯ ವಿಶ್ವಕರ್ಮ ಸಮಾಜಕ್ಕೆ ಒದಗಿ ಬಂದಿರುವುದು ಸಂತಸದ ವಿಷಯವಾಗಿದೆ ಎಂದರು.

ಸಮಾವೇಶದ ಮುಖ್ಯ ಅತಿಥಿಗಳಾಗಿ ಐ.ಎ.ಎಸ್ ಮತ್ತು ಕೆ.ಎ.ಎಸ್ ತರುಬೇತಿದಾರರಾದ ಪಿ.ಜಿ.ಅನಿತಾಲಕ್ಷ್ಮೀ ಆಚಾರ್ಯ ಅವರು ಮಾತನಾಡಿ ಪಂಚಕಸಬುಗಳನ್ನು ಹೊಂದಿರುವ ವಿಶ್ವಕರ್ಮ ಸಮುದಾಯವು ಶೈಕ್ಷಣಿಕ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಂಘಟಿತರಾಗಬೇಕು. ಸರ್ಕಾರದ ಸೌಲಭ್ಯಗಳ ಸದುಪಯೋಗವನ್ನು ಪಡೆಯುವ ಹಕ್ಕು ನಮ್ಮದಾಗಬೇಕು ಎಂದರು.

ವಿಶ್ವಕರ್ಮ ಏಕದಂಡಿಗಿ ಮಠದ ಪೂಜ್ಯರಾದ ಶ್ರೀ ಸುರೇಂದ್ರ ಮಹಾಸ್ವಾಮಿಗಳು, ಅಫಜಲಪೂರ ಮೂರುಝಾವಧೀಶ್ವರ ಮಠದ ಪೂಜ್ಯರಾದ ಶ್ರೀ ಪ್ರಣವ ನಿರಂಜನ ಮಹಾಸ್ವಾಮಿಗಳು, ಸುಲೇಪೇಠದ ಏಕದಂಡಿಗಿ ಮಠದ ಪೂಜ್ಯ ದೊಡ್ಡೆಂದ್ರ ಮಹಾಸ್ವಾಮಿಗಳು, ಗದ್ದಗಿಮಠದ ಪೂಜ್ಯ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳು ಶಹಪೂರ ಏಕದಂಡಿಗಿ ಮಠದ ಪೂಜ್ಯ ಅಜ್ಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿಶ್ವಕರ್ಮರು ಧಾರ್ಮಿಕ, ಸಾಂಸ್ಕøತಿಕ ಮತ್ತು ಸಾಮಾಜಿಕವಾಗಿ ಸಭಲರಾಗಬೇಕು ಎಂದರು.

ಸಮಾವೇಶದಲ್ಲಿ ಅಮೃತ ವಿಶ್ವಕರ್ಮ, ಸಮಾವೇಶದ ನಿರ್ದೇಶಕರಾದ ಸಾಹತಿಗಳಾದ ಮನು ಪತ್ತಾರ, ಜನಾರ್ಧನ ಹೇಮನೂರ, ಅರವಿಂದ ಪೋದ್ಥಾರ,ವೀರಭದ್ರಪ್ಪ ಟೆಂಗಳಿ,ವಿಶ್ವರಾಜ ಸೋನಾರ, ಬಸವರಾಜ ಬೋರಗಿ, ದತ್ತಾತ್ರಯ ವಿಶ್ವಕರ್ಮ, ಸುನೀಲ್ ದಿಕ್ಕಸಂಗಿ, ಪ್ರಾಣೇಶ, ಡಾ.ಲಕ್ಷ್ಮೀಕಾಂತ ಪಂಚಾಲ, ಸಂಗಮೇಶ ಬಡಿಗೇರ, ಚಂದ್ರಶೇಖರ ಕಾಳನ್ನವರ ಹಾಗೂ ಹಿರಿಯ ಸಾಹಿತಿಗಳು, ಉಪಸ್ಥಿತರಿದ್ದರು.

ಅರವಿಂದ ಪೋದ್ಥಾರ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತು ಹೇಳಿದರು. ವೀರಭದ್ರಪ್ಪ ತೆಂಗಳಿ ಸೇಡಂ ಅವರು ವಂದನಾರ್ಪಣೆ ಮಾಡಿದರು. ಹಿರಿಯ ಸಾಹಿತಿಗಳಾದ ದತ್ತಾತ್ರೇಯ ವಿಶ್ವಕರ್ಮ ನಿರೂಪಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ ಕಲಬುರಗಿ ಜಿಲ್ಲೆಯ ವಿಶ್ವಕರ್ಮರ ಕಲಾ ಮತ್ತು ಸಾಂಸ್ಕøತಿಕ ಪರಂಪರೆ, ವಿಶ್ವಕರ್ಮ ಅನುಭಾವಿ ಸಂತ ಪರಂಪರೆ, ವಿಶ್ವಬ್ರಾಹ್ಮಣ ಮಠ-ಪೀಠ ಪರಂಪರೆ, ಗ್ರಾಮೀಣ ವಿಶ್ವಕರ್ಮರ ಸ್ಥಿತಿಗತಿ, ಸಾಮಾಜಿಕ ಸುಧಾರಣೆಯಲ್ಲಿ ಸಂಘ-ಸಂಸ್ಥೆಗಳ ಪಾತ್ರ, ವಿಶ್ವಕರ್ಮರ ಧಾರ್ಮಿಕ ಸಾಮಾಜಿಕ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಗೋಷ್ಠಿಗಳ ಜರಗಿದವು. ಕೊನೆಯಲ್ಲಿ ಸಮಾಜದ ಹಿರಿಯರನ್ನು, ದಾನಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago