ಕಲಬುರಗಿ: ಬೋವಿ ವಡ್ಡರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಗುಂಡಪ್ಪ ಸಾಂಳಕಿ ಅವರು ಆಯ್ಕೆಯಾದರು. ನಗರದ ಹಿಂದಿ ಪ್ರಚಾರ ಸಭಾದಲ್ಲಿ ಭಾನುವಾರ ಕೋರ್ ಕಮಿಟಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕುಸ್ತಿ, ಲಿಂಗಣ್ಣ ದೇವಳಕರ್ ನೇತೃತ್ವದಲ್ಲಿ ನಡೆದ ಸಮಾಜದ ಸಭೆಯಲ್ಲಿ ಆಯ್ಕೆ ನಡೆಯಿತು. ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಚುನಾವಣೆಯಲ್ಲಿ ಸಂಜು ಮಂಜುಳ್ಕರ್, ರವಿಚಂದ್ರ ಗುತ್ತೇದಾರ್, ರಾಘು ಲಷ್ಕರಿ, ಶ್ರೀಕೃಷ್ಣ ಕುಶಾಳಕರ್, ಅವರು ಸ್ಪರ್ಧಿಸಿದರು. 14 ಮತಗಳನ್ನು ಪಡೆದ ಗುಂಡಪ್ಪ ಸಾಂಳಕಿ ಜಯಶಾಲಿಯಾದರು. ಹತ್ತಿರದ ಸ್ಪರ್ಧಿ ಸಂಜು ಮಂಜುಳ್ಕರ್ 12 ಮತಗಳನ್ನು ಪಡೆದರು.
ರವಿ ಗುತ್ತೇದಾರ್ ಜೇವಗಿ91 ಮತ ರಾಘವೇಂದ್ರ ಲಸ್ಕರಿ 1 ಮತ ಶ್ರೀ ಕೃಷ್ಣ ಕುಶಲಕರ್ ಶೂನ್ಯ ಮತ ಪಡೆದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಗುಂಡಪ್ಪ ಸಾಂಳಕಿ, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಮೂಲಕ ಸಮಾಜದ ಮುಖಂಡರ ಸಹಕಾರ ಹಾಗೂ ಒಮ್ಮತದ ಅಭಿಪ್ರಾಯದೊಂದಿಗೆ ಸಂಘವನ್ನು ಮುನ್ನಡೆಸುವ ಕೆಲಸ ಮಾಡಲಾಗುವುದು. ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜದ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದರು.
ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮಾತನಾಡಿದರು ಸಮಾಜದ ಸಮಾಜ ಮುಖ್ಯವಾದ ಕಾರ್ಯಕ್ರಮಗಳು ಮಾಡುವುದು ಶ್ರೀ ಸಿದ್ದರಾಮೇಶ್ವರ ಮಹಾರಾಜರ ಆಶೀರ್ವಾದದೊಂದಿಗೆ ಸಮಾಜದ ಬೆಳವಣಿಗೆಯಲ್ಲಿ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಿ ಎಲ್ಲರೂ ಶ್ರಮ ಪಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು.
ಸಭೆಯಲ್ಲಿ ಸಮಾಜದ ಮುಖಂಡರಾದ ಮನೋಜ್ ಎಸ್ ಜಾಧವ, ಶಂಕರ ದೇವದುರ್ಗ, ಸುಭಾಷ್ ಚೌಧರಿ,ರಾಜು ಮೇಸ್ತ್ರಿ, ಜಿ.ಶಿವಶಂಕರ್, ರಾಜು ಗುತ್ತೇದಾರ್ ಆಂದೋಲ, ಶಿವಶಂಕರ್ ಬೋವಿ, ಶ್ರೀಕೃಷ್ಣ ಕುಶಾಳಕರ್, ವಿಠಲ್ ನಲೋಗಿ, ಡಾ. ಮಲ್ಲಿಕಾರ್ಜುನ್ ದೊಡ್ಮನಿ, ರವಿ ಹಾಗರಗಿ, ಸುರೇಶ ಕುಶಾಳಕರ್, ಭೀಮಣ್ಣ ಕರದಳ್ಳಿ ಚಿತ್ತಾಪುರ, ಭೀಮನ ದೋರನಹಳ್ಳಿ ಉಪಸ್ಥಿತಿ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…