ಕಲಬುರಗಿ: ನಮ್ಮ ದೇಶವು ಸ್ವಾತಂತ್ರ್ಯವಾಗಬೇಕಾದರೆ ನಮ್ಮ ಪೂರ್ವಜನರು ಸಾಕಷ್ಟು ಜನ ತಮ್ಮ ಬಲಿದಾನ ನೀಡಿರುವರು. ಅಂತಹ ವೀರರ ಬಲಿದಾನ ನಿರರ್ಥಕವಾಗಬಾರದು. ದೇಶದ ಗಡಿಗಳನ್ನು ನಮ್ಮ ವೀರ ಸೇನೆಯು ರಕ್ಷಿಸುತ್ತಿದೆ. ಅದರಂತೆ ದೇಶದ ಒಳಗಡೆ ಪ್ರತಿಯೊಬ್ಬ ಪ್ರಜೆಯು ಸೈನಿಕನಾಗಿ ದೇಶದ ಸಾರ್ವಭೌಮತೆ ಕಾಪಾಡಬೇಕು ಅಂದಾಗ ಮಾತ್ರ ನಮ್ಮ ದೇಶ ರಾಮರಾಜ್ಯವಾಗಲು ಸಾಧ್ಯ ಎಂದು ಕರ್ನಲ್ ಪ್ರಲ್ಹಾದ ಕುಲಕರ್ಣಿ (ನಿವೃತ್ತ) ರವರು ಹೇಳಿದರು.
ಇವರು ಶ್ರೀ ಅಂಬಾಭವಾನಿ ಕಲಾ ಮತ್ತು ಸಾಹಿತ್ಯ ಸಂಘದ ವತಿಯಿಂದ ಹಿಂದಿ ಪ್ರಚಾರ ಸಭಾ ಕಲಬುರಗಿಯಲ್ಲಿ ಹಿಂದಿ ಸಾಹಿತ್ಯಕಾರ, ಹಾಗೂ ಸಿನೆಮಾದ ಮಹಾನ ಗೀತರಚನೆಕಾರಲ್ಲಿ ಒಬ್ಬರಾದ ರಾಷ್ಟ್ರಕವಿ ಪ್ರದೀಪರವರ 109ನೇ ಜಯಂತಿ ಪ್ರಯುಕ್ತ ಏರ್ಪಡಿಸಿದ ಬಹುಭಾಷಾ ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಪ್ರತಿಯೊಂದು ಮನೆಯಿಂದ ಓರ್ವ ಸೈನಿಕನಾಗಿ ಹೊರಬಂದಾಗ ಮಾತ್ರ ನಮ್ಮ ದೇಶ ಸುರಕ್ಷಿತವಾಗಿರುತ್ತದೆ. ಆ ಸೈನಿಕರು ದೇಶದ ಗಡಿಗಳಲ್ಲಿದ್ದಾರೆಂದೆ ನಾವು ದೇಶದ ಒಳಗಡೆ ಸುರಕ್ಷಿತವಾಗಿದ್ದೇವೆ ಎಂದು ಹೇಳಿದರು.
ಇನ್ನೋರ್ವ ಅತಿಥಿಯಾಗಿ ಬಂದಂಥ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದಂಥಹ ಭವಾನಿಸಿಂಹ ಠಾಕುರ್ ರವರು ಮಾತನಾಡುತ್ತಾ ದೇಶಕ್ಕಾಗಿ ಕವಿ ಪ್ರದೀಪರು ಸಾಹಿತ್ಯದ ಮೂಲಕ ಓರ್ವ ಸೇನಾನಿಯಾಗಿ ಜನರನ್ನು ದೇಶದ ಆಜಾದಿಗಾಗಿ ಬಡಿದೆಬ್ಬಿಸಿದವರು. ಅಂತಹ ಮಹಾನ ನಾಯಕರ ಜಯಂತಿ ಮಾಡುತ್ತಿರುವದು ಅವರಿಗೆ ನಿಜವಾದ ನಮನ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಅದರಂತೆ ಇನ್ನೋರ್ವ ಅತಿಥಿಯಾಗಿ ಬಂದಂಥ ಕರ್ನಾಟಕ ರಾಜ್ಯ ಮುಖ್ತ ವಿಶ್ವವಿದ್ಯಾಲಯದ ಪ್ರಾದೇಶಿ ನಿರ್ದೇಶಕರಾದಂಥ ಡಾ. ಸಂಗಮೇಶ ಹಿರೇಮಠ ರವರು ಮಾತನಾಡುತ್ತಾ ನಾವು ನಮ್ಮ ಸ್ಥಳದಲ್ಲಿದ್ದೇ ಪ್ರತಿಯೊಬ್ಬರು ಸೈನಿಕರಾಗಬೇಕಾದರೆ ಸಮಯದ ಪರಿಪಾಲನೆ ಮಾಡುವದನ್ನು ಕಲಿಯಬೇಕು. ನಾವು ಏನಾದರೂ ಸಾಧನೆ ಮಾಡಬೇಕಾದರೆ ಮೊದಲು ಸಮಯ ಪ್ರಜ್ಞೆ ಬರಬೇಕು, ಶಿಸ್ತಿನ ಸಿಪಾಯಿಯಾಗಬೇಕು ಅಂದಾಗ ಮಾತ್ರ ದೇಶದ ಬೆಳವಣಿಗೆಗೆ ಕೊಡುಗೆ ನೀಡಲು ಸಾಧ್ಯ ಎಂಬುವದಕ್ಕೆ ಸ್ವತಂತ್ರ ಸೇನಾನಿ ಹಾಗೂ ತಮ್ಮ ತಂದೆಯವರು ಮಾಡಿರುವ ಕಾರ್ಯಗಳನ್ನು ಉದಾಹರಣೆಗಳ ಮೂಲಕ ಹೇಳಿದರು.
ಅದರಂತೆ ಖ್ಯಾತ ಬರಹಗಾರರು ಹಾಗೂ ಸಾಹಿತಿಗಳಾದ ನೂರುದ್ದೀನ ನೂರ್ ಗೌರಿ ಅತಿಥಿಯಾಗಿ ಬಂದಿದ್ದರು. ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಕಾರ್ಯದರ್ಶಿಗಳಾದ ಸುನೀಲ ಚೌಧರಿಯವರು ವಹಿಸಿದ್ದರು.
ಕವಿಗೋಷ್ಠಿಯಲ್ಲಿ ಸುಮಾರು 40 ಕ್ಕಿಂತ ಹೆಚ್ಚು ಕವಿಗಳು ಭಾಗವಹಿಸಿ ದೇಶಭಕ್ತಿಯ ಕುತಿರು ತಮ್ಮದೇ ಆದ ಸ್ವರಚಿತ ಕವನಗಳನ್ನು ವಾಚಿಸಿದರು. ನಿರೂಪಣೆ ಪ್ರಮೀಳಾ ಪಾಟೀಲ ಹಾಗೂ ಕುಮಾರಿ ಭಾಗ್ಯಶ್ರೀ ಮಠಪತಿ ಮಾಡಿದರೆ, ಸ್ವಾಗತ ಮತ್ತು ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ರೇಣುಕಾಚಾರ್ಯ ಸ್ಥಾವರಮಠ ಹೇಳಿದರು. ಅದರಂತೆ ವಂದನಾರ್ಪಣೆಯನ್ನು ರವಿ ಬಿರಾಜದರ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತ್ತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…