ಬಿಸಿ ಬಿಸಿ ಸುದ್ದಿ

ಪುರಾತತ್ವ ಸಂಶೋಧನೆಗಳಲ್ಲಿ ಸುಧಾರಿತ ವಿಧಾನಗಳ ಕುರಿತು 3 ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ

ಕಲಬುರಗಿ: ಐತಿಹಾಸಿಕ ಮತ್ತು ಪುರಾತತ್ವ ಸಂಶೋಧನೆಗಳಲ್ಲಿ ಸುಧಾರಿತ ವಿಧಾನಗಳ ಕುರಿತು ಮೂರು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಸಿಯುಕೆಯಲ್ಲಿ ಆಯೋಜಿಸಲಾಯಿತು.

“ಇತಿಹಾಸ ಬರೆಯಲು ಸುಧಾರಿತ ವಿಧಾನಗಳನ್ನು ಅನುಸರಿಸುವುದು ಬಹಳ ಮಹತ್ವದ್ದಾಗಿದೆ” ಎಂದು ಬೆಂಗಳೂರಿನ ಮಿಥಿಕ್ ಸೊಸೈಟಿಯ ಅಧ್ಯಕ್ಷ ವಿ.ನಾಗರಾಜ್ ಹೇಳಿದರು. ಅವರು ಸಿಯುಕೆಯ ಇತಿಹಾಸ ಮತ್ತು ಪುರಾತತ್ವ ಇಲಾಖೆಯು ಬೆಂಗಳೂರಿನ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ “ಐತಿಹಾಸಿಕ ಮತ್ತು ಪುರಾತತ್ವ ಸಂಶೋಧನೆಗಳಲ್ಲಿ ಸುಧಾರಿತ ವಿಧಾನಗಳ ಕುರಿತು ಮೂರು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅವರು ಮುಂದುವರೆದು ಮಾತನಾಡಿ “ಐತಿಹಾಸಿಕ ಸಂಶೋಧನೆಯಲ್ಲಿ ನಾವು ವಿವಿಧ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಕೂಡಿ ಕೆಲಸಮಾಡಬೇಕು, ಏಕೆಂದರೆ ವೈಜ್ಞಾನಿಕ ಸಂಶೋಧನಾ ವಿಧಾನಗಳನ್ನು ಬಳಸುವ ಮೂಲಕ ಪೂರ್ವಾಗ್ರಹ ರಹಿತವಾದ ನಿಜವಾದ ಇತಿಹಾಸವನ್ನು ಮೌಲ್ಯೀಕರಿಸಲು ಅನುಕೂಲವಾಗುತ್ತದೆ. ಇಂದು ಉನ್ನತ ನ್ಯಾಯಾಲಯಗಳು ವಿವಿಧ ಐತಿಹಾಸಿಕ ಮತ್ತು ಪುರಾತತ್ವ ಸ್ಥಳಗಳ ವ್ಯಾಜ್ಯಗಳನ್ನು ಪರಿಹರಿಸಲು ಐತಿಹಾಸಿಕ ಪುರಾವೆಗಳನ್ನು ಬಳಸುತ್ತಿರುವುದರಿಂದ ಇವುಗಳ ಮಹತ್ವ ಹೆಚ್ಚಾಗಿದೆ” ಎಂದು ಹೇಳಿದರು.

ಸಿಯುಕೆಯ ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು, ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, “ಇತಿಹಾಸದ ಮಹತ್ವ ಮತ್ತು ಸಾಂಸ್ಕøತಿಕ ಮೌಲ್ಯಗಳಲ್ಲಿ ಅದರ ಪ್ರಸ್ತುತತೆಯನ್ನು ನಾವು ವಿದ್ಯಾರ್ಥಿಗಳಿಗೆ ಕಲಿಸಬೇಕಾಗಿದೆ. ವಿದ್ಯಾರ್ಥಿಗಳು ಸಮಸ್ಯೆಗಳನ್ನು ಪರಿಹರಿಸಲು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಳ್ಳವಂತೆ ಮಾಡಬೇಕು ಮತ್ತು ಅವರಿಗೆ ಅವುಗಳ ಅರಿವು ಮೂಡಿಸಬೇಕು” ಎಂದು ಹೇಳಿದರು.

ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ.ಅರ್ಜುನ್ ಆರ್ ಪ್ರಾಸ್ತಾವಿಕವಾಗಿ ಮಾತನಾಡಿ, “ಈ ಕಾರ್ಯಾಗಾರವು ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರದ ಸಂಶೋಧನೆಯಲ್ಲಿನ ವಿವಿಧ ಸಂಶೋಧನಾ ವಿಧಾನಗಳಲ್ಲಿ ಅಂತರ ಮತ್ತು ಸಮಸ್ಯೆಗಳನ್ನು ಗುರುತಿಸುವತ್ತ ಗಮನಹರಿಸುತ್ತದೆ. ಏಕೆಂದರೆ ಅಂತರವನ್ನು ತುಂಬಲು ಸುಧಾರಿತ ಸಂಶೋಧನಾ ವಿಧಾನಗಳ ಅಗತ್ಯವಿದೆ. ಅದಕ್ಕಾಗಿ ಭೌಗೋಳಿಕ-ಪ್ರಾದೇಶಿಕ ಪುರಾತತ್ತ್ವ ಶಾಸ್ತ್ರ, ಭೂ ಪುರಾತತ್ತ್ವ ಶಾಸ್ತ್ರ, ಪ್ಯಾಲಿಯೊ-ಜೆನೆಟಿಕ್ ಅಧ್ಯಯನಗಳು, ಮ್ಯೂಸಿಯಾಲಜಿ ಮತ್ತು ಕ್ಷೇತ್ರ ಪುರಾತತ್ತ್ವ ಶಾಸ್ತ್ರವು ಕಠಿಣ ತನಿಖಾ (ಪರಿಶೋಧನೆ ಮತ್ತು ಉತ್ಖನನಗಳು) ವಿಧಾನಗಳನ್ನು ಬಳಸಲಾಗುತ್ತದೆ.

ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಹಲವಾರು ರೀತಿಯ ಫೆಲೋಶಿಪ್‍ಗಳು, ವಿದ್ಯಾರ್ಥಿವೇತನಗಳು ಮತ್ತು ಲಭ್ಯವಿರುವ ಅನುದಾನಗಳೊಂದಿಗೆ ಸಂಶೋಧನೆಯನ್ನು ಕೈಗೊಳ್ಳಲು ಹೆಚ್ಚಿನ ಅವಕಾಶಗಳಿವೆ. ಆದರೂ, ಸಂಶೋಧನಾ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಸುಧಾರಿತ ವಿಧಾನಗಳನ್ನು ಬಳಸುವಲ್ಲಿ ಮತ್ತು ಗುಣಮಟ್ಟದ ವಿಷಯದಲ್ಲಿ ಸಂಶೋಧನೆ ಇನ್ನೂ ಸುಧಾರಿಸಬೇಕಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಅರ್ಜುನ್, ಆರ್ ಮತ್ತು ಡಾ. ಎಂ.ಎನ್ ಬ್ಯಾರಿ ಅವರು ಸಂಪಾದಿಸಿದ “ಎಂಪರರ್ಸ್, ಸೇಂಟ್ಸ್ ಮತ್ತು ಪೀಪಲ್: ರಿವಿಸಿಟಿಂಗ್ ಡೆಕ್ಕನ್ ಹಿಸ್ಟರಿ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳಾದ ಪೆÇ್ರ.ವಸಂತ್ ಶಿಂಧೆ, ಸಿಎಸ್‍ಐಆರ್ ಭಟ್ನಾಗರ್ ಫೆಲೋ, ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ, ಹೈದರಾಬಾದ್, ಡಾ. ಆರ್. ಚೌಹಾಣ್, ಮಾನವಿಕ ಮತ್ತು ಸಮಾಜ ವಿಜ್ಞಾನಗಳ ವಿಭಾಗ, ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಮೊಲೊ, ಡಾ. ಶಾರದ ಸಿ.ವಿ, ಪುರಾತತ್ವ ವಿಜ್ಞಾನ ಕೇಂದ್ರ, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗಾಂಧಿನಗರ, ಡಾ. ವಿ ಸಿ ಉಪಾಧ್ಯಾಯ, ಬಿಹಾರ ವಸ್ತುಸಂಗ್ರಹಾಲಯ, ಪಾಟ್ನಾ, ಡಾ. ಸೆಲ್ವಕುಮಾರ್ ವಿ, ಕಡಲ ಇತಿಹಾಸ ಮತ್ತು ಸಾಗರ ಪುರಾತತ್ವ ವಿಭಾಗ, ತಮಿಳು ವಿಶ್ವವಿದ್ಯಾಲಯ, ತಂಜಾವೂರು, ಉದಯ್ ಕುಮಾರ್ ಪಿ.ಎಲ್, ಸನ್ಮಾನ್ಯ ನಿರ್ದೇಶಕರು, ದಿ ಮಿಥಿಕ್ ಸೊಸೈಟಿ ಬೆಂಗಳೂರು ಇನ್‍ಸ್ಕ್ರಿಪ್ಷನ್ಸ್ 3ಡಿ ಡಿಜಿಟಲ್ ಕನ್ಸರ್ವೇಶನ್ ಪ್ರಾಜೆಕ್ಟ್, ಬೆಂಗಳೂರು, ಡಾ. ಅಭಿಜಿತ್ ದಾಂಡೇಕರ್, ಎಐಎಚ್‍ಸಿ ಮತ್ತು ಪುರಾತತ್ವ ವಿಭಾಗ, ಡೆಕ್ಕನ್ ಕಾಲೇಜು, ಪುಣೆ, ಡಾ. ಶ್ರೀಕಾಂತ್ ಜಾಧವ್ ಸೋಮಯ್ಯ ವಿಶ್ವವಿದ್ಯಾಲಯ, ಮುಂಬೈ ಮತ್ತು ಡಾ. ಅರುಣಿ, ಎಸ್.ಕೆ. ಉಪನಿರ್ದೇಶಕರು, ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ, ಬೆಂಗಳೂರು ಇವರು ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು. ಭಾರತದ ವಿವಿಧ ಸಂಸ್ಥೆಗಳ ಅಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ.ರವಿ ಖಣಗಿ ಸ್ವಾಗತಿಸಿದರು. ಡಾ.ಅಬ್ದುಲ್ ಮಜೀದ್ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago