ಬಿಸಿ ಬಿಸಿ ಸುದ್ದಿ

ಕ್ಷಯ ರೋಗದ ಬಗ್ಗೆ ಭಯ ಬೇಡ ಎಚ್ಚರವಿರಲಿ

ಸುರಪುರ: ಇಲ್ಲಿಯ ನಗರಸಭೆ ಕಾರ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯ ಯಾದಗಿರಿ ಇವರುಗಳ ವತಿಯಿಂದ ನಗರಸಭೆಯ ಪೌರಕಾರ್ಮಿಕರಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಮಾತನಾಡಿ, ವಿಶ್ವದ ಮಾರಣಾಂತಿಕ ಖಾಯಿಲೆಗಳಲ್ಲಿ ಒಂದಾದ ಕ್ಷಯ ರೋಗ (ಟಿ.ಬಿ) ಗುಣಪಡಿಸಲಾದ ರೋಗವಲ್ಲ ಆರಂಬಿಕ ಹಂತದಲ್ಲೆ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದು ರೋಗಮುಕ್ತ ಮಾಡಲು ಸಾದ್ಯ ಆಗಬಹುದು, ಗ್ರಾಮೀಣ ಮತ್ತು ನಗರ ಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕ್ಷಯರೋಗದ ಬಗ್ಗೆ ಎಚ್ಚರವಿರಲಿ ಭಯಬೇಡ , ಕ್ಷಯರೋಗದ ಲಕ್ಷಣಗಳಾದ , ತೂಕದ ಇಳಿಕೆ, ಕಫ್‍ದಲ್ಲಿ ರಕ್ತ ಬರುವದು , ರಾತ್ರಿ ವೇಳೆ ಜ್ಡರ ಬರುವದು , 2 ವಾರಕ್ಕಿಂತ ಹೆಚ್ಚಿನ ಕೆಮ್ಮು , ಇದರ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕಫ್ ಪರೀಕ್ಷೆ ಮಾಡಿಸಿಕೊಳ್ಳಲು ಅರಿವು ಮೂಡಿಸಿದರು.

ತಾಲೂಕ ಚಿಕಿತ್ಸಾ ಮೇಲ್ವೀಚಾರಕರಾದ ಮೇಲ್ವಿಚಾರಕರಾದ ಹಣಮಂತ ಅನವಾರ ಮಾತನಾಡುತ್ತಾ “ಕ್ಷಯರೋಗದ ಬಗ್ಗೆ ಎಚ್ಚರವಿರಲಿ ಭಯಬೇಡ” ಕ್ಷಯರೋಗದ ಬಗ್ಗೆ ತುಂಬಾ ಜಾಗೃತರಾಗಿರಬೇಕು ಮತ್ತು ಪೌರಕಾರ್ಮಿಕರಿಗೆ ಉಚಿತ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಿದರು.

ತಾಲೂಕ ಚಿಕಿತ್ಸಾ ಮೇಲ್ವೀಚಾರಕರಾದ ಮೇಲ್ವಿಚಾರಕರಾದ ರಾಘವೇಂದ್ರ ನಾಯಕ್ ಮಾತನಾಡುತಾ,್ತ ಕ್ಷಯ ರೋಗ ಇರುವ ಮನೆಯಲ್ಲಿ ಬೀಡಿ ,ಸಿಗರೇಟ್, ಸೇದುವವರಿಗೆ ಹಾಗೂ 6 ತಿಂಗಳ ಮುಂಚೆ ಟಿ.ಬಿ ರೋಗ ಇದ್ದ ಮನೆಯಲ್ಲಿ ಈ ರೋಗ ಬರುವ ಸಂಬೌ ಹೆಚ್ಚಾಗಿದೆ. ಆದರಿಂದ ತಾವೂಗಳು ಕಫ್ ಪರೀಕ್ಷೆ ಮಾಡಿಸಿ ಎಂದು ಸಲಹೆ ನೀಡಿದರೂ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಹಣಮಂತ ಯಾದವ ರವರು ವಹಿಸಿದರು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ರಾಜಾ ವೆಂಕಪ್ಪ ನಾಯಕ ತಾಲೂಕ ಆರೋಗ್ಯ ಅಧಿಕಾರಿಗಳು ಸುರಪುರ ರವರು ವಹಿಸಿದರು.

ಅತಿಥಿಗಳಾಗಿ ಡಾ. ಹರ್ಷವರ್ಧನ ದಂತ ವೈದ್ಯರು, ಡಾ. ಮಲ್ಕಮ ಮತ್ತು ಡಾ. ಶಿಲ್ಪಾ ಆರ್.ಬಿ.ಎಸ್.ಕೆ ವೈದ್ಯರು , ಜಯಾ ಕೆ ಪವಾರ್, ಕಾರ್ಯಲಯದ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಎಲ್ಲಾ ಎನ್.ಟಿ.ಇ.ಪಿ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ಕಾರ್ಯಕ್ರಮವನ್ನು ಪ್ರದೀಪ್ ಕೌನ್ಸಲರ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಪ್ರಯೋಗಶಾಲಾ ಮೇಲ್ವಿಚಾರಕರು ಚಿದಾನಂದ ದೊಡ್ಮನಿ, ಶೋಭಾ ಟಿ.ಬಿ.ಎಚ್.ವಿ, ವಿಶಾಲ್ ಶುಸ್ರೂಷಕ , ಗಂಗಮ್ಮ ಮತ್ತು ಮೀನಾಕ್ಷಿ ನೇತ್ರಾಧಿಕಾರಿಗಳು, ನಾಗಮ್ಮ ಶುಶ್ರೂಷಕಿ, ಸುರೇಶ ಖಾದಿ, ಜಯಶ್ರೀ ಆಶಾಮೆಂಟರ್, ಅನಂತಕೃಷ್ಣ ,ಶರಣು ಬಿ.ಪಿ.ಎಮ್, ಬಲಬೀಮ, ಉಮಾಶಂಕರ್ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago