ಬಿಸಿ ಬಿಸಿ ಸುದ್ದಿ

1857 ಸಿಪಾಯಿ ದಂಗೆ ಅಲ್ಲ ಮನಕುಲದ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ನಡೆದ ದಂಗೆ

ಸುರಪುರ: ಭಾರತದ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಂದಿ ನೆಣವನ್ನು ಗನ್‍ಗಳಿಗೆ ಸವರಿದ್ದರು ಅದಕ್ಕಾಗಿ ಅದನ್ನು ಸಿಪಾಯಿ ದಂಗೆ ಎಂದು ಕರೆದರು ಎಂದು ಇತಿಹಾಸಕಾರರು ಬರೆದಿದ್ದಾರೆ,ಆದರೆ ಇದು ಮನುಕುಲದ ಸಾಮಾಜಿಕ ಸ್ವಾಸ್ಥ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ದಂಗೆ ಎದ್ದರು ಎಂದು ಯಾರು ಹೇಳಿಲ್ಲ, ಇದು ನಾವು ಕಂಡುಕೊಂಡ ಚರಿತ್ರೆಗಳು ನಮ್ಮನ್ನ ಮೋಸಗೊಳಿಸಿದ ಕ್ರಮ ಎಂದು ಹೇಳಲು ಇಷ್ಟಪಡುವುದಾಗಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಡೀನ್ ಮತ್ತು ಚಿಂತಕ ಡಾ.ಚಲುವರಾಜು ಹೇಳಿದರು.

ಸುರಪುರ ಇತಿಹಾಸ ಸಂಶೋಧನ ಕೇಂದ್ರ ಭೀ.ಗುಡಿ ಹಾಗೂ ಓಕುಳಿ ಪ್ರಕಾಶ ಸುರಪುರ ಇವರುಗಳು ಸಂಯುಕ್ತಾಶ್ರಯದಲ್ಲಿ ನಗರದ ಹೊಸ ದರಬಾರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುರಪುರ ವಿಜಯೋತ್ಸವ-1857 ಉದ್ಘಾಟಿಸಿ ಅವರು ಮಾತನಾಡಿ,ಸಿಪಾಯಿ ದಂಗೆ ಹೆಸರಲ್ಲಿ ಚರಿತ್ರೆಯ ಮೋಸಗೊಳಿಸುವುದನ್ನು ಮುಂದೆ ನಡೆಯಲ್ಲ ಎನ್ನುವುದನ್ನು ಇಂದು ಈ ಕಾರ್ಯಕ್ರಮದ ಮೂಲಕ ಎಚ್ಚರಿಸಿದ್ದಾರೆ ಎಂದರು.ಸುರಪುರ ಅರಸು ಮನೆತನವು ತನ್ನ ದೇಶಿಯ ಸ್ವಾತಂತ್ರ್ಯ ಹೋರಾಟವನ್ನು, ಸಮುದಾಯ ಮತ್ತು ಸಾಂಸ್ಕøತಿಕಗಳ ಅಸ್ತಿತ್ವವನ್ನು ಗಟ್ಟಿಗೊಳಿಸಲು ಬೇರು ಬಿಟ್ಟ ಬಹು ದೊಡ್ಡ ಅರಸು ಮನೆತನವಾಗಿದೆ ಎಂದರು.

ದೇಶಿಯ ಆಡಳಿತ ವಿಚಾರ, ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ತಮ್ಮ ಸುತ್ತಲಿನ ಸಮುದಾಯಗಳನ್ನು ಅರ್ಥ ಮಾಡಿಕೊಂಡು ಆಡಳಿತ ನಡೆಸಿದ ರಾಜಮನೆತನ. ಸಮುದಾಯ, ಸಮಾಜ, ಪ್ರಾದೇಶಿಕತೆಗೆ ಧಕ್ಕೆ ಬಂದಾಗ ತಾನೇ ನಿಂತು ಹೋರಾಡಿದ ಬಿಚ್ಚುಗತ್ತಿಯ ವೀರರ ಸಂಸ್ಥಾನ ಇದಾಗಿತ್ತು. ಸಮುದಾಯದಲ್ಲಿ ಸ್ವಾಭಿಮಾನದ ಪ್ರತೀಕವಾಗಿರುವುದು ಸುರಪುರ ಅರಸರ ಮನೆತನ ಎಂಬುದು ಎಂದೂ ಮರೆಯಲಾಗದು ಎಂದರು.

ಸುರಪುರ ರಾಜ ಮನೆತನ ಪ್ರಜಾಮುಖಿಯಾಗಿತ್ತು. ವಿಜಯನಗರದ ಅರಸರ ಇತಿಹಾಸ ಪುಸ್ತಕದಲ್ಲಿ ಸ್ಥಾನ ಪಡೆದರೆ,ಸುರಪುರ ಅರಸರ ಇತಿಹಾಸ ಪುಸ್ತಕದಲ್ಲಿ ಅಲ್ಲ ಮನಸ್ಸಿನಲ್ಲಿ. ಮನಸ್ಸಿನೊಳಗೆ ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡವರು ಸುರಪುರ ಸಂಪತ್ತಿಗಿಂತ ಹೆಚ್ಚಾಗಿ ಮಾನವ ಸಂಪನ್ಮೂಲ ಹೊಂದಿದ್ದ ಪ್ರದೇಶವಾಗಿತ್ತು, ಧರ್ಮ ಸಮನ್ವಯದ ಕೇಂದ್ರವಾಗಿತ್ತು ಎಂದರು.

1857ರ ಜಯದ ಸಂಕೇತವಾಗಿ ಸುರಪುರ ವಿಜಯೋತ್ಸವ ಆಚರಿಸಲಾಗುತ್ತದೆ. ಕಳೆದ 21 ವಷಗಳಿಂದ ನಿರಂತವಾಗಿ ಈ ಕೆಲಸ ಮಾಡುತ್ತಿರುವುದು ಪ್ರಶಂಸನೀಯ. ಸುರಪುರದ ಚರಿತ್ರೆ ನಾನಾ ರೂಪದಲ್ಲಿ ನಾಡಿನಾದ್ಯಂತ ಇದೆ ಅದನ್ನು ಹುಡುಕುವ ಪ್ರಯತ್ನ ಮಾಡಬೇಕು. ಈ ಚರಿತ್ರೆ ಕರ್ನಾಟಕಕ್ಕೆ ಮಾತ್ರ ಸಿಮೀತವಾಗಿಲ್ಲ. ಆಂಧ್ರ, ತಮಿಳುನಾಡನ್ನು ಅವರಿಸಿದೆ. ಚರಿತ್ರೆ ಇನ್ನಷ್ಟು ವಿಸ್ತøತವಾಗಬೇಕು. ಜನಮಾನಸದಲ್ಲಿ ಇರುವ ಆಯಾಮ ಹೊರತೆಗೆಯಬೇಕು. ದೆಹಲಿಯ ಮಾರ್ಗವೊಂದಕ್ಕೆ ಸುರಪುರ ಮಾರ್ಗ ಎಂದು ಹೆಸರಿಡಬೇಕು. ರಾಜ್ಯಾದ್ಯಂತ ಸಂಶೋಧನಾ ಅಭಿಯಾನ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಕøತ ಪ್ರಾಧ್ಯಾಪಕ ಡಾ.ಲಕ್ಷ್ಮೀಕಾಂತ ಮೋಹರೀರ್ ಉಪನ್ಯಾಸ ನೀಡಿ, ಸುರಪುರ ಅರಸರು ಜನಸ್ಪಂದನೆಯಾಗಿದ್ದರು. ಕಲೆ. ಸಾಹಿತ್ಯ, ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಸಂಸ್ಕøತ ಮತ್ತು ಕನ್ನಡ ಭಾಷಾ ಕವಿಗಳಿಗೆ ಆಶ್ರಯ ನೀಡಿದ್ದರು. ಸಂಸ್ಕøತ ಸಾಹಿತ್ಯಕ್ಕೂ ಸಹ ಅವರ ಕೊಡುಗೆ ವರ್ಣಿಸಲು ಸಾಧ್ಯವಿಲ್ಲ. ಸಂಸ್ಥಾನ ಮತ್ತು ಸಂಸ್ಕøತ ಪಂಡಿತರ ಬಗ್ಗೆ ದೇಶದ 22 ವಿಶ್ವ ವಿದ್ಯಾಲಯಗಳಲ್ಲಿ ಮಾಹಿತಿ ಸಿಗುತ್ತದೆ.

ಇತಿಹಾಸಕಾರ ಭಾಸ್ಕರರಾವ್ ಮುಡಬೂಳ ಮಾತನಾಡಿ, 1857 ಈ ದೇಶದ ಸ್ವಾತಂತ್ರ್ಯದ ಭದ್ರ ಬುನಾದಿ. ಸುರಪುರ ಸಂಸ್ಥಾನದ ಮಹಾ ಸೇನಾನಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಸ್ವಾತಂತ್ರ್ಯ ಹೋರಾಟಕ್ಕೆ ರಾಷ್ಟ್ರೀಯ ಕಲ್ಪನೆ ಕೊಟ್ಟರು. ದೇಶದಿಂದ ಬ್ರಿಟಿಷರನ್ನು ಹೊರಹಾಕಲು ನಿರ್ಧರಿಸಿ ದಕ್ಷಿಣ ಮತ್ತು ಉತ್ತರ ಭಾರತದ ರಾಜರನ್ನು ಸಂಪರ್ಕಿಸಿದ್ದರು. ಸ್ವಾತಂತ್ರ ಸಂಗ್ರಾಮದಲ್ಲಿ ಅವರ ಪಾತ್ರ ಅನನ್ಯವಾಗಿದೆ ಎಂದರು.

ಹಾಸ್ಯ ಕಲಾವಿದ ಬಸವರಾಜ ಮಾಮನಿ ಮಾತನಾಡಿ, ಇಲ್ಲಿಯ ಇತಿಹಾಸ ಅದ್ಬುತ, ಪ್ರಸಿದ್ಧ ತಾಣಗಳು, ಜಿಲ್ಲೆಯ 11 ಕೋಟೆಗಳು ಕಣ್ಮನ ಸೆಳೆಯುತ್ತವೆ, ಇದರ ಮೇಲೆ ಬೆಳಕು ಚೆಲ್ಲಿದಾಗ ನಮ್ಮ ಪ್ರದೇಶ ಬೆಳೆಕಿಗೆ ಬರಲು ಸಾಧ್ಯ. ಇಲ್ಲಿ ಹುಟ್ಟಿದ್ದು ನಮ್ಮ ಭಾಗ್ಯ ಮತ್ತು ಹೆಮ್ಮೆ ಎನ್ನಿಸುತ್ತದೆ. ನಮ್ಮ ಇತಿಹಾಸ ಮಕ್ಕಳಿಗೆ ತಿಳಿಸಿಕೊಡುವ ಕೆಲಸವಾಗಬೇಕು. 21 ವರ್ಷಗಳಿಂದ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿ ಬೆಳಕಿಗೆ ತರುವ ಕೆಲಸ ಮಾಡಲಾಗುತ್ತಿರುವು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

ಅರಸು ಮನೆತನದ ಡಾ.ರಾಜಾ ಕೃಷ್ಣಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಟಿಎಚ್‍ಒ ಡಾ.ಆರ್.ವಿ.ಎನ್ ವೇದಿಕೆಯಲ್ಲಿದ್ದರು. ಪಿಐ ಕೃಷ್ಣಾ ಸುಬೇದಾರ್ ನಿರ್ಣಯ ಮಂಡಿಸಿದರು. ಪತ್ರಕರ್ತ ಆನಂದ ಸೌದಿ, ಹಿರಿಯ ನ್ಯಾಯವಾದಿ ಜೆ.ಅಗಸ್ಟಿನ್, ಸಮಾಜ ಸೇವಕರಾದ ಬಸವರಾಜ ಜಮದ್ರಖಾನಿ, ಮಾನಪ್ಪ ಹಡಪದ, ರಾಜಕುಮಾರ ಸುಬೇದಾರ್‍ಗೆ ಸನ್ಮಾನಿಸಲಾಯಿತು. ರಾಜಗೋಪಾಲ ವಿಭೂತಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಹರಿ ಆದೋನಿ ಪ್ರಾರ್ಥಿಸಿದರು.ರಾಜಕುಮಾರ ದೊರೆ ಸ್ವಾಗತಿಸಿದರು. ಅಮರೇಶ ಚಿಲ್ಲಾಳ ರುಕ್ಮಾಪುರ ನಿರೂಪಿಸಿದರು. ಮರೆಪ್ಪ ನಾಯಕ ಗುಡ್ಡಾಕಾಯಿ ವಂದಿಸಿದರು.

ವಿಜಯೋತ್ಸವದ ನಿರ್ಣಯಗಳು; ಹಂಪಿ ಉತ್ಸವ ಮಾದರಿಯಲ್ಲಿ ಸುರಪುರ ವಿಜಯೋತ್ಸವ ಆಚರಿಸಬೇಕು. ಸುರಪುರ ಇತಿಹಾಸದ ಸಮಗ್ರ ಮಾಹಿತಿ ಒಳಗೊಂಡ ಸಂಪುಟಗಳನ್ನು ಸರಕಾರ ಅಥವಾ ವಿಶ್ವ ವಿದ್ಯಾನಿಲಯಗಳಿಂದ ಪ್ರಕಟಿಸಬೇಕು. ವಿಮಾನ ನಿಲ್ದಾಣಕ್ಕೆ ಕ್ರಾಂತಿ ವೀರ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ನಿಲ್ದಾಣವೆಂದು ನಾಮಕರಣಗೊಳಿಸಬೇಕು. ಶಾಲೆ, ಕಾಲೇಜು, ಉದ್ಯಾನ ವನ, ರಸ್ತೆ ಮತ್ತು ಸ್ಮಾರಕಗಳಿಗೆ ಸುರಪುರ ಸಂಸ್ಥಾನಿಕರ ಹೆಸರಿಡಬೇಕು. ಸುರಪುರ ಹಳೆ ಅರಮನೆಯನ್ನು ವಸ್ತುಸಂಗ್ರಾಲಯವಾಗಿ ರೂಪಿಸಬೇಕು. ಐತಿಹಾಸಿಕ ಸ್ಮಾರಕಗಳನ್ನು ಕಾಪಾಡಬೇಕು ಎಂಬ ನಿರ್ಣಯವನ್ನು ವಿಜಯೋತ್ಸವದಲ್ಲಿ ಕೈಗೊಳ್ಳಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago