ಬಿಸಿ ಬಿಸಿ ಸುದ್ದಿ

ಹೊಸಗನ್ನಡದಲ್ಲಿ ಗಜಲ್ ಪರಂಪರೆ: ಫೆ.11 ರಂದು ವಿಚಾರ ಸಂಕಿರಣ

ಕಲಬುರಗಿ; ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ, ಕಲಬುರಗಿ ಹಾಗೂ ಕರ್ನಾಟಕ ಗಜಲ್ ಅಕಾಡೆಮಿ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ “ಹೊಸಗನ್ನಡ ಸಾಹಿತ್ಯದಲ್ಲಿ ಗಜಲ್ ಪರಂಪರೆ’’ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಫೆಬ್ರವರಿ 11 ರಂದು ನಗರದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಗಜಲ್ ಅಕಾಡೆಮಿ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಫೆ.11 ರಂದು ಬೆಳಿಗ್ಗೆ 10.15 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, 8 ನೆಯ ಮಹಾದಾಸೋಹ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ವಿದ್ಯಾಭಂಡಾರಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ದಿವ್ಯ ಸಾನ್ನಿಧ್ಯ ವಹಿಸುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಮಾತೋಶ್ರೀ ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಗವರ್ನರ್ ಸದಸ್ಯರಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಸಾನಿಧ್ಯ ವಹಿಸುವರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸಮಾರಂಭವನ್ನು ಉದ್ಘಾಟಿಸುವರು. ಹಿರಿಯ ಗಜಲ್‍ಕಾರರಾದ ಶ್ರೀಮತಿ ಪ್ರಭಾವತಿ ದೇಸಾಯಿ ವಿಜಯಪುರ ಮತ್ತು ಕರ್ನಾಟಕ ಗಜಲ್ ಅಕಾಡೆಮಿ ಅಧ್ಯಕ್ಷರಾದ ರಂಗಸ್ವಾಮಿ ಸಿದ್ದಯ್ಯ ಮುಖ್ಯ ಅತಿಥಿಗಳಾಗಿರುವರು. ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸುರೇಶ್ ಕುಮಾರ ನಂದಗಾಂವ ಅಧ್ಯಕ್ಷತೆ ವಹಿಸುವರು.

ನಂತರ ಮೊದಲ ಗೋಷ್ಠಿ ಗಜಲ್‍ಯಾನ ನಡೆಯಲಿದ್ದು. ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಮುಖ್ಯ ಅತಿಥಿಗಳಾಗಿದ್ದು, ಕನ್ನಡದಲ್ಲಿ ಗಜಲ್ ಹೆಜ್ಜೆ ಗುರುತು ಕುರಿತು ಧಾರವಾಡದ ಹಿರಿಯ ಗಜಲ್ ಕವಯಿತ್ರಿ ನಿರ್ಮಲಾ ಶೆಟ್ಟರ್, ಹಾಗೂ ಕಲ್ಯಾಣ ಕರ್ನಾಟಕ ಗಜಲ್ ಸಾಹಿತ್ಯ ಕುರಿತು ಕೊಪ್ಪಳದ ಅಧ್ಯಾಪಕಿ, ಗಜಲ್ ಕವಯಿತ್ರಿ ಅರುಣಾ ನರೇಂದ್ರ ಉಪನ್ಯಾಸ ನೀಡುವರು. ಹಿರಿಯ ಗಜಲ್ ಕವಿಯಿತ್ರಿ ಹೇಮಲತಾ ವಸ್ತ್ರದ, ವಿಜಯಪುರ ಅಧ್ಯಕ್ಷತೆ ವಹಿಸುವರು.

ಎರಡನೇ ಗೋಷ್ಠಿಯಲ್ಲಿ ಗಜಲ್ ಸಂಭ್ರಮದಲ್ಲಿ ಗಜಲಕಾರರಿಂದ ವಾಚನ ನಡೆಯಲಿದೆ. ಹಿರಿಯ ಗಜಲ ಕವಿ ಸಿದ್ಧರಾಮ ಹೊನ್ಕಲ್ ಯಾದಗಿರಿ, ಎಸ್ ಬಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು, ಲೇಖಕರಾದ ಡಾ.ಶ್ರೀಶೈಲ ಬಿರಾದಾರ ಮತ್ತು ಬಳ್ಳಾರಿಯ ಹಿರಿಯ ಗಜಲ ಕವಿ ಅಬ್ದುಲ್ ಹೈ.ತೋರಣಗಲ್ಲು ಮುಖ್ಯ ಅತಿಥಿಗಳಾಗಿರುವರು. ಎಸ್ ಬಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶಿವರಾಜ ಶಾಸ್ತ್ರೀ ಹೇರೂರು ಅಧ್ಯಕ್ಷತೆ ವಹಿಸುವರು.

ಗಜಲ ಗೋಷ್ಠಿಯಲ್ಲಿ ಪ್ರಭುಲಿಂಗ ನೀಲೂರೆ, ಡಾ.ಗೀತಾ ಪಾಟೀಲ, ಪ್ರೇಮಾ ಹೂಗಾರ, ನಂರುಶಿ ಕಡೂರು, ಸುಹೇಚ ಪರಮವಾಡಿ, ರೇಖಾ ವಿ.ಕಂಪ್ಲಿ, ಡಾ.ಮಲ್ಲಿನಾಥ ತಳವಾರ, ಡಾ.ಭಾಗ್ಯವತಿ ಯಾದಗಿರಿ, ಡಿ.ಎಂ.ನದಾಫ್, ಹೆಚ್.ವೈ,ರಾಠೋಡ, ಜ್ಯೋತಿ ಬಿ.ದೇವಣಗಾಂವ, ಗಿರಿಜಾ ಮಾಲಿಪಾಟೀಲ, ರವೀಂದ್ರ ಕತ್ತಿ, ಕಪಿಲದೇವ ಚಕ್ರವರ್ತಿ, ಪಾರ್ವತಿ ಎಸ್.ಬೂದೂರು, ಶರಣಗೌಡ ಪಾಟೀಲ ಜೈನಾಪುರ, ಶಿವಲೀಲಾ ಡೆಂಗಿ, ವೆಂಕಟೇಶ ಎಂ. ಪಾಟೀಲ, ಗೌರಿ ಪಾಟೀಲ, ಗಂಗಾಧರ ಬಡಿಗೇರ, ಚೆನ್ನಬಸವ ಕೋಹಿನೂರ, ಸುವರ್ಣ ರಾಠೋಡ, ನೀಲಾ ಬಿ.ಮಲ್ಲೆ ಯಾದಗಿರಿ ಗಜಲ್ ವಾಚನ ಮಾಡುವರು.

ಸಂಜೆ 4.30 ಕ್ಕೆ ಸಮಾರೋಪ ಸಮಾರಂಭದಲ್ಲಿ ಹಿರಿಯ ಗಜಲಕಾರ ಮಹಾಂತೇಶ್ ನವಲಕಲ್ ಗಜಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಎಸ್ ಬಿ ಕಾಲೇಜಿನ ಕನ್ನಡ ವಿಭಾಗದ ಹಿರಿಯ ಉಪನ್ಯಾಸಕ ಡಾ. ವೆಂಕಣ್ಣ ಡೊಣ್ಣೇಗೌಡರ ಮುಖ್ಯ ಅತಿಥಿಗಳಾಗಿರುವರು. ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸುರೇಶ್ ಕುಮಾರ ನಂದಗಾಂವ ಅಧ್ಯಕ್ಷತೆ ವಹಿಸುವರು ಎಂದು ಕರ್ನಾಟಕ ಗಜಲ್ ಅಕಾಡೆಮಿ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago