ಶಹಾಬಾದ: ನಗರಸಭೆಯ ಸಭಾಂಗಣದಲ್ಲಿ ಶುಕ್ರವಾರ 2024-25ನೇ ಸಾಲಿನ ಬಜೆಟ್ ಪೂರ್ವ ಸಾರ್ವಜನಿಕ ಸಲಹೆ ಸೂಚನಾ ಸಭೆಯು ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯು ಪ್ರಾರಂಭದಲ್ಲಿ 2024-25ನೇ ಸಾಲಿನ 10800ರೂ. ಉಳಿತಾಯ ಬಜೆಟ್ ಮಂಡಿಸಿದರು. ನಂತರ ನಗರದ ನೆಹರು ವೃತ್ತ, ಶ್ರೀರಾಮ ವೃತ್ತ, ಬಸವೇಶ್ವರ ವೃತ್ತ, ಹೊನಗುಂಟಾ ಕ್ರಾಸ್ ಸೇರಿದಂತೆ ಅನೇಕ ವೃತ್ತಗಳಲ್ಲಿ ಮೂತ್ರಾಲಯ ಹಾಗೂ ಶೌಚಾಲಯಗಳ ನಿರ್ಮಾಣ ಮಾಡಬೇಕೆಂದು ಸಭೆಗೆ ಆಗಮಿಸಿದ ಎಲ್ಲಾ ಜನರು ಧ್ವನಿಗೂಡಿಸಿದರು.ಮಧುಮೇಹ ರೋಗಿಗಳಿಗೆ ಹಾಗೂ ಮಹಿಳೆಯರಿಗೆ ಮೂತ್ರಾಲಯವಿಲ್ಲದೇ ಸಾಕಷ್ಟು ತೊಂದರೆಪಡುತ್ತಿದ್ದಾರೆ.ಕೂಡಲೇ ಇದನ್ನು ಗಣನೆಗೆ ತೆಗದುಕೊಳ್ಳಬೇಕೆಂದು ಒಕ್ಕೊರಲದಿಂದ ಒತ್ತಾಯಿಸಿದರು.
ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಹಾಗೂ ಮುಖಂಡ ಅರುಣ ಪಟ್ಟಣಕರ್ ಮಾತನಾಡಿ, ನಗರಸಭೆಯಲ್ಲಿ ಖಾತಾ ಪಡೆಯಲು ಸಾರ್ವಜನಿಕರು ಸಾಕಷ್ಟು ತೊಂದರೆಪಡುತ್ತಿದ್ದಾರೆ.ಅಲ್ಲದೇ ಅಧಿಕಾರಿ ವರ್ಗದವರು ಖಾತಾ ನೀಡಲು ಅನೇಕ ಕಾಗದ ಪತ್ರಗಳನ್ನು ಕೇಳಿ ಸತಾಯಿಸುತ್ತಿದ್ದಾರೆ.ಅದಕ್ಕೆ ಸರಳಿಕರಣಗೊಳಿಸಿ, ಬೇಗನೆ ಖಾತಾ ನೀಡಬೇಕೆಂದು ಹೇಳಿದರಲ್ಲದೇ,ನಗರದ ಹಳೆ ಲೆಔಟ್‍ಗಳಲ್ಲಿ ವಾಸ ಮಾಡುವ ಜನರಿಗೆ ಖಾತಾ ಕೊಡುತ್ತಿಲ್ಲ ಏಕೆ ಎಂದು ಪ್ರಶ್ನೆ ಮಾಡಿದರು.
ಅದಕ್ಕೆ ಪೌರಾಯುಕ್ತೆ ಪಂಕಜಾ ರಾವೂರ ಮಾತನಾಡಿ, ನಗರದ ಕೆಲವೊಂದು ಲೆಔಟ್‍ಗಳು ನಗರಾಭಿವೃದ್ಧಿ ಪ್ರಾಧೀಕಾರದ ಪರವಾನಗಿ ಪಡೆಯದೇ ಮನೆಗಳನ್ನು ಕಟ್ಟಿದ್ದಾರೆ.ಆದ್ದರಿಂದ ಖಾತಾ ನೀಡಲು ಕಾನೂನು ತೊಡಕುಗಳಿವೆ ಎಂದರು.ಈ ಹಿಂದಿನ ಅಧಿಕಾರಿಗಳು ಖಾತಾ ನೀಡಿದ್ದಾರೆ.ಅಲ್ಲದೇ ನಗರಸಭೆಯ ನೊಂದಣಿ ಪುಸ್ತಕದಲ್ಲಿ ನೊಂದಣಿಯಾಗಿದೆ ಮುಖಂಡರು ಹೇಳಿದರು. ಈ ಹಿಂದಿನ ಅಧಿಕಾರಿಗಳು ಮಾಡಿರಬಹುದು.ಆದರೆ ಪರವಾನಗಿ ಇಲ್ಲದೇ ಹೋದರೆ ಖಾತಾ ನೀಡಲು ಸಾಧ್ಯವಿಲ್ಲ ಎಂದರು.
ಯಾವುದೇ ಕಾನೂನು ತೊಡಕನ್ನು ನಿವಾರಿಸಲು ಮಾರ್ಗಗಳನ್ನು ಹುಡುಕಿ.ಅಲ್ಲದೇ ಸಾಧ್ಯವಾದರೆ ನಗರಸಭೆಯಲ್ಲಿ ಠರಾವು ಮಾಡಿ, ಎಲ್ಲಾ ಸದಸ್ಯರು, ನಗರದ ಮುಖಂಡರ ನಿಯೋಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹತ್ತಿರ ಹೋಗಿ ಪರಿಹಾರ ಕಂಡುಕೊಳ್ಳೋಣ ಎಂದರು.ಆದಷ್ಟು ಇಲ್ಲಿನ ಬಡ ಜನರಿಗೆ ಖಾತಾ ನೀಡಬೇಕೆಂದು ಮುಖಂಡರು ತಿಳಿಸಿದರು.
ಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಮಾತನಾಡಿ, ಆನ್‍ಲೈನ್ ಖಾತಾ ಕೊಡುವಾಗ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡಿರುತ್ತೀರಿ.ಆದರೆ ಮೊತ್ತೊಮ್ಮ ಖಾತಾ ತೆಗೆದುಕೊಳ್ಳುವಾಗ ತೆರಿಗೆ ಕಟ್ಟಿರುವ ರಶೀದಿ ನೋಡಿ ಖಾತಾ ನೀಡಬೇಕು.ಆದರೆ ಮತ್ತೇ ಎಲ್ಲಾ ದಾಖಲೆಗಳನ್ನು ಕೇಳಿ ಸತ್ತಾಯಿಸುತ್ತಿರುವುದು ಸರಿಯಲ್ಲ.ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದರು. ಅಲ್ಲದೇ ಬಹುತೇಖ ಜನರು ಯಾವುದೇ ಹೊಸ ಲೆಔಟ್ ಮಾಡುವಾಗ ಅದರ ಅಭಿವೃದ್ಧಿಪಡಿಸುವುದು ಅವರದೇ ಹೊಣೆ.
ಗಾರ್ಡನ್, ಬೀದಿ ದೀಪ, ಚರಂಡಿ ವ್ಯವಸ್ಥೆ ಇವೆಲ್ಲವನ್ನು ಅಭಿವೃದ್ಧಿಗೊಳಿಸದ ನಂತರವೇ ನಗರಸಭೆಯ ಸುಪರ್ದಿಗೆ ತೆಗೆದುಕೊಳ್ಳಿ.ಅಲ್ಲದೇ ಪರವಾನಗಿ ಪಡೆಯದೇ ಇರುವ ಹಳೆಯ ಲೆಔಟ್‍ನ ಅಕ್ರಮ ಮನೆ ಕಟ್ಟಿದರೇ ಮನೆಗಳಿಗೆ ದಂಡ ವಿಧಿಸಿ ಖಾತಾ ನೀಡಿ ಹಾಗೂ ಕೊಳಚೆ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ಜನರು ವಾಸಿಸುತ್ತಿದ್ದಾರೆ.ಅವರು ಬಡ ಹಾಗೂ ಅನಕ್ಷರಸ್ಥ ಜನರು.ಅವರ ಹತ್ತಿರ ಯಾವುದೇ ಕಾಗದಗಳಿಲ್ಲ.ಅಂತಹ ಬಡ ಜನರಿಗೆ ಖಾತಾ ನೀಡುವತ್ತ ಕ್ರಮಕೈಗೊಳ್ಳಿ ಎಂದರು.ಅದಕ್ಕೆ ಪೌರಾಯುಕ್ತೆ ಎಲ್ಲಾ ತಮ್ಮ ಸಲಹೆ, ಸೂಚನೆಗಳನ್ನು ತೆಗೆದುಕೊಂಡು ಮುಂದಿನ ಯೋಜನೆ ಕೈಗೊಳ್ಳುತ್ತೆವೆ ಎಂದರು.
ಮುಖಂಡರಾದ ಅಬ್ದುಲ ಗನಿ ಸಾಬೀರ,ಕನಕಪ್ಪ ದಂಡಗುಲಕರ್,ಡಿ.ಡಿ. ಓಣಿ, ಕಾಶಿನಾಥ ಜೋಗಿ, ತಿಪ್ಪಣ್ಣ ನಾಟೀಕಾರ,ನಾಗೇಂದ್ರ ಕರಣಿಕ್, ಸಾಬೇರಾ ಬೇಗಂ,ಪಾರ್ವತಿ ಪವಾರ, ಮಲ್ಲಿಕಾರ್ಜುನ ವಾಲಿ, ಬಾಕ್ರೋದ್ದೀನ,ಕೃಷ್ಣಪ್ಪ ಕರಣಿಕ,ಸಿದ್ರಾಮ ಕುಸಾಳೆ,ಶರಣಗೌಡ ಪಾಟೀಲ, ನಿಂಗಣ್ಣ ಪೂಜಾರಿ,ಶಿವರಾಜ ಕೋರೆ, ರಾಜೇಶ ಯನಗುಂಟಿ,ಕಿರಣ ಚಹ್ವಾಣ, ಮಹ್ಮದ ಮಸ್ತಾನ, ಶಿವು ನಾಟೀಕಾರ, ಗೋವಾ ಬಾಬು, ಸುಭಾಷ ಸಾಕರೆ,ಬಸವರಾಜ ಮಯೂರ, ಮಹಾದೇವ ತರನಳ್ಳಿ, ಮೋಹನ ಹಳ್ಳಿ, ಸ್ನೇಹಲ್ ಜಾಯಿ, ಎಇಇ ಶರಣು ಪೂಜಾರಿ, ವ್ಯವಸ್ಥಾಪಕ ಶರಣಗೌಡ ಪಾಟೀಲ, ನಾರಾಯಣರಡ್ಡಿ, ಸಾಬಣ್ಣ ಸುಂಗಲಕರ, ರಘುನಾಥ ನರಸಾಳೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…