ಬಿಸಿ ಬಿಸಿ ಸುದ್ದಿ

ಯುವಕರು ದೇಶಪ್ರೇಮ ಮೈಗೂಡಿಸಿಕೊಂಡು ಸೇವೆ ಮಾಡಿ

ಕಲಬುರಗಿ: ಯುವ ಶಕ್ತಿಯೇ ದೇಶದ ಬೆನ್ನೆಲಬು. ಯುವಕರು ದೇಶಪ್ರೇಮ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ದೇಶಸೇವೆ ಮಾಡಬೇಕು. ಯೋಧರು ಮಳೆ-ಚಳಿ, ಬಿಸಲು, ತನ್ನ ಕುಟುಂಬ, ಬಂಧು-ಬಳಗ ಇವುಗಳನ್ನು ಲೆಕ್ಕಿಸದೆ, ದೇಶದ ರಕ್ಷಣೆಯೇ ಅವರ ಪರಮಗುರಿಯಾಗಿರುತ್ತದೆ. ಅವರಿಗೆ ಸಮಾಜದ ಸಹಕಾರ ಅಗತ್ಯವಾಗಿದೆ ಎಂದು ಮಾಜಿ ಯೋಧ ಕ್ಯಾಪ್ಟನ್ ಶರಣಪ್ಪ ಭೋಗಶೆಟ್ಟಿ ಹೇಳಿದರು.

ನಗರದ ಗೋದುತಾಯಿ ನಗರದಲ್ಲಿರುವ ‘ಅಮರ ಜವಾನ್’ ಸ್ಮಾರಕದ ಬಳಿ ಅಮರ ಜವಾನ ಯೋಧರ ತಂಡ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ‘ವಿ ಮೇಕ್ ಇಟ್ ಪಾಸಿಬಲ್’ ತಂಡವು ಬುಧವಾರ ಸಂಜೆ ಏರ್ಪಡಿಸಿದ್ದ ಪುಲ್ವಾಮಾ ದಾಳಿಯ ಹುತಾತ್ಮ ಯೋಧರಿಗೆ ಶೃದ್ಧಾಂಜಲಿಯ ಐದನೇ ವರ್ಷಾಚರಣೆಯಲ್ಲಿ ಪುಷ್ಪಾರ್ಚನೆ, ದೀಪ ಬೆಳಗಿಸಿ ಭಾವ ನಮನಗಳನ್ನು ಸಲ್ಲಿಸಿ ನಂತರ ಅವರು ಮಾತನಾಡುತ್ತಿದ್ದರು.

ಮಾಜಿ ಯೋಧ ಪ್ರಲ್ಹಾದ ನಳದುರ್ಗಕರ್ ಮಾತನಾಡಿ, ಯೋಧರ ಸೇವೆ ಅನನ್ಯವಾಗಿದೆ. ದೇಶದ ರಕ್ಷಣೆಯಲ್ಲಿ ಯೋಧರ ಕಾರ್ಯಕ್ಕೆ ದೇಶದ ನಾಗರಿಕರ ಪ್ರೋತ್ಸಾಹ ನೀಡವುದು ಅವಶ್ಯಕವಾಗಿದೆ. ದೇಶಕ್ಕೆ ಸೇವೆ ಸಲ್ಲಿಸುವುದಕ್ಕೆ ಯುವಕರು ಸೈನ್ಯಕ್ಕೆ ಸೇರ್ಪಡೆಗೊಳ್ಳಬೇಕು. ಸೈನಿಕರ ರಕ್ತದ ಪ್ರತಿ ಕಣದಲ್ಲಿಯೂ ದೇಶಪ್ರೇಮ ತುಂಬಿರುತ್ತದೆ. ಅಂತಹ ದೇಶಪ್ರೇಮ ಯುವಕರಲ್ಲಿ ಬರಬೇಕಾಗಿದೆ. ಜನ್ಮಭೂಮಿಯ ಋಣ ತೀರಿಸುವ ಕಾರ್ಯ ಎಲ್ಲರೂ ಕೂಡಾ ಮಾಡೋಣ. ಭಾರತ ವಿಶ್ವಗುರುವಾಗಲು ಶ್ರಮಿಸೋಣ. ನಮ್ಮ ಯೋಧರ ಬಲಿದಾನ ಮರೆಯದೆ ಶತ್ರು ರಾಷ್ಟ್ರಗಳಿಂದ ಎಚ್ಚರವಿರೋಣ ಎಂದು ಮಾರ್ಮಿಕವಾಗಿ ನುಡಿದರು.

ಮಾಜಿ ಯೋಧರಾದ ಗೋಪಾಲಕೃಷ್ಣ ಜೋಶಿ ಮತ್ತು ‘ವಿ ಮೇಕ್ ಇಟ್ ಪಾಸಿಬಲ್ ತಂಡ’ದ ಸೌರಭ ಜೇವರ್ಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ‘ವಿ ಮೇಕ್ ಇಟ್ ಪಾಸಿಬಲ್ ತಂಡ’ದವರಿಂದ ನುಡಿನಮನ, ದೇಶಭಕ್ತಿ ಗೀತಗಾಯನ ಜರುಗಿತು. ಅಮರ ಜವಾನ ಸ್ಮಾರಕ ಯೋಧರ ತಂಡದವರಿಗೆ ಕಾರ್ಯಕ್ರಮಗಳು ಮಾಡಲು ಅನಕೂಲವಾಗಲಿ ಎಂಬ ಉದ್ದೇಶದಿಂದ ಬ್ಲೂಟೂತ್ ಹೊಂದಿರುವ ಸೌಂಡ್ ಸಿಸ್ಟಮ್ ಗೌರವಪೂರ್ವಕವಾಗಿ ಉಡುಗೋರೆಯಾಗಿ ನೀಡಿ, ದೇಶಪ್ರೇಮ ಮೆರೆದರು.

ಕಾರ್ಯಕ್ರಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸದಸ್ಯ ಶಿವಯೋಗೆಪ್ಪಾ ಎಸ್.ಬಿರಾದಾರ, ಮಾಜಿ ಯೋಧರಾದ ಮಲ್ಲಿಕಾರ್ಜುನ ಮಡಿವಾಳ, ರಾಜೇಂದ್ರ ಶೀಲವಂತ, ಹಣಮಂತರಾಯ ಗೋಗಾಂವ, ಶಾಂತಮಲ್ಲಪ್ಪ ಪಾಟೀಲ, ಎನ್.ರಾಮಪ್ಪ, ರಾಮು ಪವಾರ, ಪ್ರಮುಖರಾದ ಸಚಿನ್, ನಿರ್ವಾಸ ಪವಾರ, ವಿಠಲರಾವ ಕುಲಕರ್ಣಿ, ನಾಗಣ್ಣ ಪಾಟೀಲ, ಹುಂಚಪ್ಪ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 hour ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 hour ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

3 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

3 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

3 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

3 hours ago