ಬಿಸಿ ಬಿಸಿ ಸುದ್ದಿ

ವಾಡಿ ಬಿಜೆಪಿ ಕಚೇರಿಯಲ್ಲಿ ಶ್ರೀ ಸೇವಲಾಲ ಮಹಾರಾಜರ ಜಯಂತಿ ಆಚರಣೆ

ವಾಡಿ; ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸಂತ ಶ್ರೀ ಸೇವಲಾಲ ಮಹಾರಾಜರ 285ನೇ ಜಯಂತಿ ಆಚರಿಸಲಾಯಿತು.
ಸೇವಲಾಲ ಮಹಾರಾಜ ಭಾವಚಿತ್ರಕ್ಕೆ ಮುಖಂಡರಾದ ರಾಮಚಂದ್ರ ರಡ್ಡಿ, ವಿಠಲ ನಾಯಕ ಪೂಜೆ ಸಲ್ಲಿಸಿದರು.

ಈ ವೇಳೆ ಪುರಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ ಮಾತನಾಡಿ ವಿವಿಧ ಕಡೆ ಹರಿದು ಹಂಚಿದ ಸಮಾಜವನ್ನು ಒಗ್ಗೂಡಿಸುವದಕ್ಕಾಗಿ, ಸ್ವಾರ್ಥರಹಿತ ಹೋರಾಟದಿಂದ ತನ್ನ ಸಮುದಾಯದ ಜೊತೆಗೆ ಇತರ ಸಮಾಜದಲ್ಲಿ ಮನುಷ್ಯತ್ವವದ ಗುಣಗಳನ್ನು ಮೇಲೆತ್ತುವ ಕೆಲಸ ಮಾಡಿದವರು ಶ್ರೀ ಸಂತ ಸೇವಲಾಲ ಮಹಾರಾಜರು ಎಂದರು.

ಭಾರತ ದೇಶದ ದಾರ್ಶನಿಕರ, ಚಿಂತಕರ, ತತ್ತ್ವಜ್ಞಾನಿಗಳ ದೇಶ. ತನ್ನ ಸಮಾಜ ಅಧೋಗತಿಯಲ್ಲಿರುವಾಗ ಅದರ ಏಳಿಗೆಗೆ ಪ್ರತಿಯೊಂದು ಸಮುದಾಯದಲ್ಲೂ ಮಹಾಪುರುಷರು ಜನ್ಮ ತಾಳಿದ ಅದೆಷ್ಟೋ ಸಂಗತಿಗಳನ್ನು ನಾವು ಕಾಣುತ್ತೇವೆ. ಸೇವಾಲಾಲರು ಕೂಡ ತನ್ನ ಸಮಾಜವನ್ನು ದಾರ್ಶನಿಕರಾಗಿ, ಸಂತರಾಗಿ, ಚಿಂತಕರಾಗಿ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ,ಇಂದಿನ ಯುವಪೀಳಿಗೆ ಸಂತ ಸೇವಲಾಲರ ಜಯಂತಿ ಆಚರಣೆ ಯೊಂದಿಗೆ ಆದರ್ಶಗಳನ್ನು ಮೈಗೂಡಿಸಿ ಕೊಂಡಾಗ ಮಾತ್ರ ಅವರ ಜನ್ಮದಿನಾಚರಣೆಗೆ ಮತ್ತಷ್ಟು ಅರ್ಥ ಬರುತ್ತದೆ ಎಂದು ಹೇಳಿದರು.

ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಬಂಜಾರ ಸಮುದಾಯಕ್ಕೆ ಹಲವಾರು ವರ್ಷಗಳ ನಮ್ಮ ಪುರಾತನದ ಇತಿಹಾಸವಿದೆ ಸೇವಾಲಾಲರು ಭಕ್ತಿ,ಭಜನೆಯ ಮೂಲಕ ಸಮಾಜದಲ್ಲಿದ್ದ ತೊಡಕುಗಳನ್ನು ನಿವಾರಿಸುವಲ್ಲಿ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ಅವರು ಭೇಟಿ ನೀಡಿದ ಪ್ರದೇಶಗಳು ಇಂದಿಗೂ ಪ್ರಸಿದ್ಧಿ ಪಡೆದಿವೆ. ಪವಾಡ ಪುರುಷರಾಗಿ, ಮಾರ್ಗದರ್ಶಕರಾಗಿ, ಚಿಂತಕರಾಗಿ, ಗುರುವಾಗಿ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.

ಬಂಜಾರ ಸಮುದಾಯವನ್ನು ಆರ್ಥಿಕವಾಗಿ, ಶೈಕ್ಷಣಿಕ, ರಾಜಕೀಯವಾಗಿ ಮೇಲೆತ್ತಿ ಬಂಜಾರ ಸಮಾಜ ಎಲ್ಲಾ ರಂಗಗಳಲ್ಲಿಯೂ ಮುಂದೆ ಬರಬೇಕೆಂಬ ಆಶಾಭಾವ ಮೋದಿ ಹೊಂದಿರುವುದು ನಾವು ಕಾಣುತ್ತಿದ್ದೇವೆ.ಬಂಜಾರ ಸಮಾಜಕ್ಕೆ ಸರ್ಕಾರಿ ಸೌಲಭ್ಯಗಳೊಂದಿಗೆ ಎಲ್ಲಾ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ ನಮ್ಮ ಪ್ರಧಾನಿ ಮೋದಿ ಅವರು ಖುದ್ದಾಗಿ ಬಂದು ಸೇಡಂ‌ ನಲ್ಲಿ ಹಕ್ಕು ಪತ್ರ ವಿತರಿಸಿದರು.ಇದರಿಂದ ಸಮುದಾಯದಗಳ ಬಗ್ಗೆ ನಮ್ಮ ಪ್ರಧಾನಿಯವರ ಕಾಳಜಿ ಎದ್ದು ಕಾಣುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ,ಮುಖಂಡರಾದ ಸಿದ್ದಣ್ಣ ಕಲ್ಲಶೆಟ್ಟಿ,ಶರಣಗೌಡ ಚಾಮನೂರ,ಶಿವಶಂಕರ ಕಾಶೆಟ್ಟಿ,ಬಸವರಾಜ ಕಿರಣಗಿ, ಅಯ್ಯಣ್ಣ ದಂಡೋತಿ, ಚಂದ್ರಶೇಖರ ಬೆಣ್ಣೂರ, ಮಲ್ಲಿಕಾರ್ಜುನ ಸಾತಖೇಡ, ಚನ್ನಯ್ಯ ಸ್ವಾಮಿ,ಪಂಡಿತ ಪವಾರ, ರಮೇಶ ರಾಠೋಡ, ಬನಶಂಕರ ಮುಸ್ತುರ್, ಬಸವರಾಜ ಪಗಡಿಕರ,ಅನುಸುಬಾಯಿ ಪವಾರ, ಯಂಕಮ್ಮ ಗೌಡಗಾಂವ, ಶರಣಮ್ಮ ಯಾದಗಿರಿ, ಉಮಾದೇವಿ ಗೌಳಿ,ದೆವಕ್ಕಿ ಪೂಜಾರಿ ಸೇರಿದಂತೆ ಇತರರು ಇದ್ದರು.

emedialine

Recent Posts

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

56 mins ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

2 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

16 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

16 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

17 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

18 hours ago