ಬಿಸಿ ಬಿಸಿ ಸುದ್ದಿ

ಮಕ್ಕಳಲ್ಲಿ ಸೃಜನಾತ್ಮಕತೆ ಹಾಗೂ ಕ್ರೀಯಾಶೀಲತೆ ಬೆಳೆಸುವುದೇ ಶಿಕ್ಷಣ ಮೂಲ ಧ್ಯೇಯವಾಗಬೇಕು

ಸುರಪುರ: ಶಿಕ್ಷಣವು ಮಕ್ಕಳಲ್ಲಿ ಕೇವಲ ಜ್ಞಾನ ಬೆಳೆಸುವದಲ್ಲ ಮಕ್ಕಳಲ್ಲಿ ಕಲಿಯಲು ಕುತೂಹಲ, ಸೃಜನಾತ್ಮಕತೆ,ಕ್ರೀಯಾಶೀಲತೆ ಹಾಗೂ ವಿಮರ್ಶಾತ್ಮಕ ಚಿಂತನೆಗಳ ಒಳಗೊಂಡಿರುವ ದೀಪವನ್ನು ಹೊತ್ತಿಸಿ ಮೂಡಿಸುವುದೇ ನಿಜವಾದ ಶಿಕ್ಷಣ ಎಂದು ಯಾದಗಿರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಹೇಳಿದರು.

ತಾಲೂಕಿನ ಕವಡಿಮಟ್ಟಿಯ ಅಕ್ಷರ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ ಶಿಕ್ಷಣ ಎನ್ನುವುದು ಜ್ಞಾನ ಗಳಿಸುವದಲ್ಲ ಉತ್ತಮ ಜಾರಿತ್ರ್ಯ, ಶಿಸ್ತು ಹಾಗೂ ಕರುಣೆ,ಸಹಾನುಭೂತಿ ಮುಂತಾದ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಅವರು ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಗತ್ತಿನ ಸವಾಲುಗಳನ್ನು ತಿಳಿದುಕೊಂಡು ಆ ಸವಾಲುಗಳನ್ನು ಎದುರಿಸಿ ಯಶಸ್ಸು ಗಳಿಸಲು ಮಕ್ಕಳಲ್ಲಿ ಈಗಿನಿಂದಲೇ ಸಿದ್ಧರಾಗಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಅವರು ಜೀವನದಲ್ಲಿ ಗುರಿಯನ್ನು ಇಟ್ಟುಕೊಳ್ಳಬೇಕು ಆ ಗುರಿಯನ್ನು ಸಾಧಿಸಲು ಪರಿಶ್ರಮ ವಹಿಸುವಂತೆ ಹೇಳಿದರು.

ಜೀವನದಲ್ಲಿ ಸಾಧನೆ ಮಾಡಬೇಕಾದರೆ ಆಲೋಚನಾ ಶಕ್ತಿ ಬೆಳೆಸಿಕೊಳ್ಳಬೇಕು ಹಾಗೂ ಆತ್ಮ ವಿಶ್ವಾಸ ತುಂಬಾ ಮುಖ್ಯ ಆಗ ಮಾತ್ರ ಯಶಸ್ಸು ಗಳಿಸಿ ನಿಮ್ಮ ಜೀವನದಲ್ಲಿ ಉಜ್ವಲ ಭವಿಷ್ಯ ಕಾಣಲು ಖಂಡಿತ ಸಾಧ್ಯ ಎಂದು ಹೇಳಿದರು, ಜೀವನದಲ್ಲಿ ಮಕ್ಕಳು ದೊಡ್ಡ ಕನಸು ಇಟ್ಟುಕೊಳ್ಳಬೇಕು ಆ ಕನಸನ್ನು ನನಸಾಗಿಲು ಹಿಂಜರಿಕೆ ಬೇಡ ಕಠಿಣ ಪರಿಶ್ರಮ ತುಂಬಾ ಅಗತ್ಯ ಎಂದ ಅವರು ನಿಮ್ಮ ಜೀವನದ ಕಥೆಯನ್ನು ಬರೆಯುವ ಲೇಖಕರು ನೀವೆ ಆಗಿದ್ದೀರಿ ಜೀವನದ ಕಥೆ ಸುಂದರವಾಗಿರಬೇಕಾದರೆ ಜೀವನದಲ್ಲಿ ಸಾಧಿಸಬೇಕೆಂಬ ಛಲ,ಉದ್ದೇಶ,ಉತ್ಸಾಹ ಹಾಗೂ ಧೈರ್ಯ ಇವೆಲ್ಲವೂ ನಿಮ್ಮಲ್ಲಿ ಇರಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಿಇಓ ಯಲ್ಲಪ್ಪ ಕಾಡ್ಲೂರ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು  ಪಡೆಯಲು ಉತ್ತಮ ಅಂಕಗಳನ್ನು ಪಡೆಯಬೇಕಾದರೆ ನಿರಂತರ ಅಧ್ಯಯನ ಹಾಗೂ ಕಠಿಣ ಪರಿಶ್ರಮ ತುಂಬಾ ಅವಶ್ಯಕ ಶಾಲೆಯಲ್ಲಿ ಶಿಕ್ಷಕರು ಹೇಳುವ ಪಾಠ ಪ್ರವಚನಗಳನ್ನು ಶ್ರದ್ಧೆಯಿಂದ ಕೇಳಿ ಮನನ ಮಾಡಿಕೊಳ್ಳುವಂತೆ ಹೇಳಿದರು.

ಮುಖ್ಯ ಅತಿಥಿಗಳಾಗಿ ಡಿವೈಎಸ್‍ಪಿ ಜಾವೇದ ಇನಾಮದಾರ್, ಪಿಐ ಆನಂಗ ವಾಗ್ಮೋಡೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಖಾದರ ಪಟೇಲ, ಸಿಆರ್‍ಪಿ ನಿಂಗಣ್ಣ ಗೋನಾಲ, ಸಂಸ್ಥೆಯ ಅಧ್ಯಕ್ಷೆ ರವಿತಾ, ಕಾರ್ಯದರ್ಶಿ ಸಂಜನ, ಕೋಶಾಧಿಕಾರಿ ರಾಧಾ, ಸದಸ್ಯರಾದ ರಾಮಲಕ್ಷ್ಮೀ, ಮಹೇಶ ಯಾದವ್, ನರೇನ್, ಚರಣರೆಡ್ಡಿ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಇದ್ದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

2 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

2 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

2 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

2 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

2 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

2 hours ago