ಕಲಬುರಗಿ: ನವ ಕಲ್ಯಾಣ ಕರ್ನಾಟಕ ವಿಡಿಯೋ ಮತ್ತು ಫೋಟೋಗ್ರಾಫೇರ್ ಸಂಘದ ವತಿಯಿಂದ ಹಮ್ಮಿಕೊಂಡ ಸಂವಿಧಾನ ಪೀಠಿಕೆ ಭಾವಚಿತ್ರ ವಿತರಣಾ ಮತ್ತು ಜಾಗ್ರತಿ ಅಭಿಯಾನದ ಅಂಗವಾಗಿ ಇಂದು, ನಗರದಲ್ಲಿ ವಿವಿಧ ಶಾಲೆಗಳಿಗೆ ತೆರಳಿ ನೀಡುವ ಕಾರ್ಯಕ್ರಮ ಪ್ರಯುತ್ತ ಮಾಣಿಕ ಪ್ರಭು ಬಡಾವಣೆಯ ಅಪರಾಜಿತ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಯಲ್ಲಿ ವಿತರಿಸಲಾಯಿತು.
ವೇದಿಕೆ ಮೇಲೆ ಜೈ ಭವಾನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭಂಡಾರಿ ರಾಜಗೋಪಾಲ, ಸಂಘದ ಅಧ್ಯಕ್ಷ ಆನಂದ ನರೋನಾ ಅಧ್ಯಕ್ಷತೆ ವಹಿಸಿದ್ದರು, ನೇಕಾರ ಬಳಗದ ಹಿರಿಯ ಸಾಹಿತಿ ಮತ್ತು ಲೇಖಕರು ಆದ, ಸೂರ್ಯಕಾಂತ ಸೊನ್ನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಸಂಘದ ಕಾರ್ಯದರ್ಶಿಗಳಾದ ರಾಜು ಕೋಷ್ಟಿ ಸ್ವಾಗತಿಸಿದರು.
ಪ್ರಾಸ್ತಾವಿಕವಾಗಿ ಹಿರಿಯ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಮಾತನಾಡಿದರು, ಪೀಠಿಕೆ ಸ್ವೀಕರಿಸಿ ಮಾತನಾಡಿದ ಭಂಡಾರಿ ಯವರು ನಿಮ್ಮ ಸಂಘದ ಕಾರ್ಯ ಸ್ಲಾಘನೀಯ ಎಂದರು.
ನೀವು ನೀಡಿದ ಪೀಠಿಕೆ ಭಾವಚಿತ್ರವನ್ನು ನಮ್ಮ ಶಾಲೆಯಲ್ಲಿಯ ಅವರಣ ದಲ್ಲಿ ಹಾಕಿ ಎಲ್ಲರೂ ಅರಿವು ಮತ್ತು ಜಾಗ್ರತಿ ಮೂಡುವ ಕೆಲಸ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಕೂಡಾ ಮಾಡುವಂತೆ ಸೂಚಿಸುತ್ತದೆ ಎಂದರು.
ಸೊನ್ನದ ಸೂರ್ಯಕಾಂತ ರವರು ಮಾತನಾಡಿ ಇನ್ನೂ ವಿಸ್ತಾರವಾಗಿ ಬರೆಯುವ ಇಚ್ಛೆಯನ್ನು ಅಂಬೇಡ್ಕರ್ ಹೊಂದಿದ್ದರು ಎಂದರು, ನ್ಯಾಯವಾದಿ ಜೇ. ವಿನೋದ ಕುಮಾರ ನಿರೂಪಿಸಿದರು, ಕಾರ್ಯಕ್ರಮ ದಲ್ಲಿ ಡಾ.ಬಸವರಾಜ ಚನ್ನಾ, ಶ್ರೀನಿವಾಸ ಬಲಪೂರ್ ಸಂಸ್ಥೆಯ ಪೋಷಕ ದಯಾನಂದ ಏಕಬೋಟ, ಮ್ಯಾಳಗಿ ಚಂದ್ರಶೇಖರ್ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…