ಬಿಸಿ ಬಿಸಿ ಸುದ್ದಿ

ರೈತ ಚಳುವಳಿಗಾರರ ಮೇಲೆ ದೌರ್ಜನ್ಯ: ಕಲಬುರಗಿ ಸಂಸದರ ಕಚೇರಿ ಮುಂದೆ ಪ್ರತಿಭಟನೆ

ಕಲಬುರಗಿ:  ಕೇಂದ್ರ ಸರ್ಕಾರ ರೈತರ ಮೇಲೆ ನಡೆಸುತ್ತಿರುವ ನಿರಂತರ ದಾಳಿ, ಹಲ್ಲೆ, ದೌರ್ಜನ್ಯ ಖಂಡಿಸಿ ಕರ್ನಾಟಕದ ತೆರಿಗೆ ಪಾಲನ್ನು ಹಂಚಿಕೆಯಲ್ಲಿ ಮಲತಾಯಿ ಧೋರಣೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಯುವಜನ ಸೇವಾ ಸಂಘದ ಕಾರ್ಯಕರ್ತರು ಶನಿವಾರ ಸಂಸದ ಡಾ. ಉಮೇಶ್ ಜಾಧವ್ ಅವರ ಕಚೇರಿ ಮುಂದೆ ಪ್ರತಿಭಟನಾ ಧರಣಿ ಮಾಡಿದರು.

ಸಂಘದ ಅಧ್ಯಕ್ಷ ಚಂದು ಜಾಧವ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಶಾಂತಪ್ಪ ಪಾಟೀಲ್, ಖಜಾಂಚಿ ಸೋಮಶೇಖರ್ ಸಿಂಗೆ, ಪ್ರಧಾನ ಕಾರ್ಯದರ್ಶಿ ಸುನೀಲ್ ಮಾರುತಿ ಮಾನ್ಪಡೆ, ಉಪಾಧ್ಯಕ್ಷ ಜಲೀಲಸಾಬ್ ಮಡಕಿ, ಸಹ ಕಾರ್ಯದರ್ಶಿಗಳಾದ ಸುರೇಶ್ ಹೊಡಲ್, ಅನೀಲ್ ಕೊಳ್ಳೂರೆ, ಬಂಡಯ್ಯಸ್ವಾಮಿ, ಸಿದ್ದಲಿಂಗ್ ಪಾಳಾ, ಹಣಮಂತ್ ಚವ್ಹಾಣ್, ಸಂಗಮೇಶ್ ಕಲಬುರ್ಗಿ, ಕಿರಣ್ ಬಣಗಾರ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಭಟನಾನಿರತ ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿ, ರೈತ ಸಂಘಟನೆಗಳ ದೆಹಲಿ ಚಲೋ ಮೆರವಣಿಗೆಯನ್ನು ತಡೆಯಲು ಪ್ರಭುತ್ವ ಅಧಿಕಾರದ ವಿಪರೀತ ದುರ್ಬಳಕೆ ಮಾಡಿಕೊಂಡು ರೈತರ ಮೇಲೆ ಮೋದಿ ಸರ್ಕಾರ ನಡೆಸುತ್ತಿರುವ ಲಾಟಿ ಪ್ರಹಾರ, ರಬ್ಬರ ಬುಲೇಟ್, ಅಶ್ರುವಾಯು ಸಿಡಿಸಿ ಮತ್ತು ಸಾಮೂಹಿಕ ಬಂಧನ ಖಂಡನಾರ್ಹ. ರೈತರ ಮೇಲೆ ಅಶ್ರುವಾಯು ಶೆಲಗಳನ್ನು ಎಸೆಯಲು ಡೋಣಗಳನ್ನು ಬಳಸಿ ಪಂಜಾಬ್ ಮತ್ತು ಹರಿಯಾಣ ರೈತರ ಮೇಲೆ ನಡೆಸುತ್ತಿರುವ ವೈಶಾಚಿಕ ದೌರ್ಜನ್ಯ ಕೃತ್ಯವು ಭಯೋತ್ಪಾದಕರಿಗೆ ಭಾರತದಲ್ಲಿ ನುಸುಳುಕೊರರಿಗೆ ನಡೆಸುವಂತೆ ದಾಳಿ ನಡೆಸುತ್ತಿರುವುದು ಅತ್ಯಂತ ಆಘಾತಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತರ ಪ್ರಮುಖ ಬೇಡಿಕೆಯಾದ ಉತ್ಪಾದನಾ ವೆಚ್ಚಕ್ಕೆ ಶೇಕಡಾ 50ರಷ್ಟು ಸೇರಿಸಿದ ಶಾಸನಬದ್ಧ ಕನಿಷ್ಟ ಬೆಂಬಲ ಬೆಲೆ ಒದಗಿಸುವುದು, 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಮತ್ತು ಈಗಿನ ಪ್ರಧಾನಿ ನೀಡಿದ ಭರವಸೆಯಾಗಿದೆ. ಇದಾಗಿ 10 ವರ್ಷಗಳು ಕಳೆದರು ಭರವಸೆ ಜಾರಿಗೆ ಬಂದಿಲ್ಲ. ಅದರ ಜೊತೆಗೆ ಕಳೆದ ವರ್ಷದಲ್ಲಿ ರೈತರು ನಡೆಸಿದ ಬೃಹತ್ ಹೋರಾಟದ ಸಂದರ್ಭದಲ್ಲಿ 700ಕ್ಕೂ ಹೆಚ್ಚು ರೈತರು ವೀರ ಮರಣವನ್ನು ಹೊಂದಿದ್ದಾರೆ.

ಆ ರೈತರ ಕುಟುಂಬಕ್ಕೆ ಪರಿಹಾರ ನೀಡುವುದು ಮತ್ತು ರೈತರ ಮೇಲೆ ಹೂಡಿರುವ ಸಾವಿರಾರು ಕೇಸುಗಳು ವಾಪಸ್ ಪಡೆಯಲು ಒಬ್ಬ ಮಂತ್ರಿಯ ಮಗ ರೈತರ ಮೇಲೆ ಕಾರನ್ನು ಹಾಯಿಸಿ ಕೊಲೆ ಮಾಡಿರುವುದು ವಿರೋದಿಸಿ ಕನಿಷ್ಟ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಮೋದಿ ಸರ್ಕಾರವೆ ಮುಂದೆ ನಿಂತು ದಾಳಿ ನಡೆಸುತ್ತಿರುವುದು ನೋಡಿದರೆ ಅವರು ರೈತ ವಿರೋಧಿಗಳು ಕಾಪೆರ್Çೀರೇಟ್ ಕಂಪೆನಿಯ ಏಜಂಟರು ಎಂದು ಅವರು ಹರಿಹಾಯ್ದರು.

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ದಬ್ಬಾಳಿಕೆ ದೌರ್ಜನ್ಯ ನಿಲ್ಲಿಸಿ ಬೇಡಿಕೆಗಳು ಈಡೇರಿಸಲು ಮುಂದಾಗಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪ್ತಿ ಮೋದಿ ಸರ್ಕಾರದ ವಿರುದ್ದ ರೈತ ಸಂಘಟನೆಗಳು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕರ್ನಾಟಕ ರಾಜ್ಯಕ್ಕೆ ಅನುದಾನದಲ್ಲಿ ತಾರತಮ್ಯ, ಅನ್ಯಾಯ ದೋರಣೆ ಖಂಡನೀಯ. ಕಳೆದ 10 ವರ್ಷಗಳಲ್ಲಿ ಕೇಂದ್ರ ಬಿ.ಜೆ.ಪಿ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಅನುದಾನವನ್ನು ನೀಡದೆ ಮಲತಾಯಿ ದೊರಣೆ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ರಾಜ್ಯಗಳ ತೆರಿಗೆ ವಿಚಾರವಾಗಿ ಮಾತನಾಡಿ ರಾಜ್ಯ ಸರ್ಕಾರವು 15ನೇ ಹಣಕಾಸು ಆಯೋಗಕ್ಕೆ ಸರಿಯಾಗಿ ಮಾಹಿತಿ ನೀಡಿಲ್ಲ, ದಾಖಲೆ ನೀಡಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಕನ್ನಡಿಗರಿಗೆ ಮಾಡಿದ ದ್ರೋಹ ಹಾಗೂ ಹಣಕಾಸು ಆಯೋಗಗಳು ಪರಿವರ್ಧಿಗೆ ಇರದೆ ಇರುವುದರಿಂದ ರಾಜ್ಯಗಳಿಗೆ ಆಗುವ ಅನ್ಯಾಯವನ್ನು ಹಣಕಾಸು ಆಯೋಗ ಹೇಗೆ ಸರಿಪರಿಸಬಲ್ಲದು ಎನ್ನುವ ಕನಿಷ್ಟ ಜ್ಞಾನ ಇಲ್ಲದೆ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ದೂರಿದರು.

14ನೇ ಹಣಕಾಸು ಆಯೋಗ ನಗದು ಹಂಚಿಕೆ ಮಾಡುವಾಗ ಶೇಕಡಾ 4.71ರಿಂದ ಶೇಕಡಾ 3.74ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು 5,495/- ಕೋಟಿ ರೂ.ಗಳ ವಿಶೇಷ ಅನುದಾನ ನೀಡಲು ಶಿಫಾರಸ್ಸು ಮಾಡಲಾಗಿದೆ. ಆದರೆ ಈವರೆಗೆ ಈ ಹಣ ನಿಡದೇ ದ್ರೋಹ ಎಸಗಿದೆ. 15ನೇ ಹಣಕಾಸು ಆಯೋಗದ ನಂತರ ಕಡಿಮೆ ತೆರಿಗೆ ಹಂಚಿಕೆಯಿಂದ ಕರ್ನಾಟಕಕ್ಕೆ ಕಳೆದ 4 ವರ್ಷಗಳಲ್ಲಿ 45 ಸಾವಿರ ಕೋಟಿ ರೂ.ಗಳ ಅನುದಾನ ಕಡಿಮೆಯಾಗಿದ್ದು, ಅಂದಾಜಿನ ಪ್ರಕಾರ ಕಳೆದ 5 ವರ್ಷಗಳಲ್ಲಿ ನಗದು ಹಂಚಿಕೆಯಲ್ಲಿ 62.098 ಕೋಟಿ ರೂ.ಗಳು ಕರ್ನಾಟಕಕ್ಕೆ ಕಡಿಮೆಯಾಗಿದೆ. ಮುಂದುವರೆದು 2020ರಿಂದ 2025ರವರೆಗೆ 15ನೇ ಹಣಕಾಸು ಆಯೋಗದ ಸಹಾಯಧನ ಮತ್ತು ಜಿ.ಎಸ್.ಟಿ ಪರಿಹಾರದ ಹಣ ಸೇರಿದಂತೆ 73.593 ಕೋಟಿ ರೂ.ಗಳು ಬಾಕಿ ಉಳಿದಿದೆ ಎಂದು ಅವರು ಆರೋಪಿಸಿದರು.

ಹಣಕಾಸು ಆಯೋಗ ಶಿಪಾರಸ್ಸಿನಂತೆ ರಾಜ್ಯದಿಂದ ಸಂಗ್ರಹ ಆದ ಸುಮಾರು ನಾಲ್ಕು ಲಕ್ಷ ಕೋಟಿ ರೂ.ಗಳಲ್ಲಿ ನಮ್ಮ ರಾಜ್ಯದ ತೆರಿಗೆ ಪಾಲನ್ನು ಸಕಾಲಕ್ಕೆ ನೀಡದಿರುವುದು. ಹಾಗೂ ವರ್ಷ. ವರ್ಷ ನಮ್ಮ ರಾಜ್ಯದ ಶೇಕಡಾ ತೆರಿಗೆ ಪಾಲನ್ನು ಕಡಿಮೆ ಮಾಡುತ್ತಿರುವುದು. ಒಟ್ಟು ತೆರಿಗೆ ಸಂಗ್ರಹದಲ್ಲಿ ಏರಿಕೆಯಾದರೂ ರಾಜ್ಯದ ತೆರಿಗೆ ಪಾಲಿನಲ್ಲಿ ಇಳಿಕೆಯಾಗಿದ್ದು, ಇದರಿಂದ ಈ ವರ್ಷ ಸುಮಾರು 60 ಸಾವಿರ ಕೋಟಿ ರೂ.ಗಳ ತೆರಿಗೆ ಹಾಲಿನಲ್ಲಿ ನಮಗೆ ವಂಚನೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ 2022-2023ರ ತಮ್ಮ ಬಜೆಟ್‍ನಲ್ಲಿ ವಿವಿಧ ಅನುದಾನ 13.310 ಕೋಟಿ ರೂ.ಗಳು. ಆದಾಗ್ಯೂ, ಬಿಡುಗಡೆ ಮಾಡಿರುವುದು ಕೇವಲ 4.132 ಕೋಟಿ ರೂ.ಗಳು. ಅದರ ಜೊತೆಗೆ 2023-2024ರ ನಮ್ಮ ಬಜೆಟ್‍ನಲ್ಲಿ ವಿವಿಧ ಯೋಜನೆಗಳಿಗೆ ನಿಗದಿಪಡಿಸಿದ ಒಟ್ಟು ಸಹಾಯ ಅನುದಾನ 21.643. ಆದರೆ ಬಿಡುಗಡೆ ಮಾಡಿರುವುದು ಕೇವಲ 222 ಕೋಟಿ ರೂ.ಗಳು ಮಾತ್ರ. ಕಳೆದ 10 ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಗಾತ್ರ 308 ಲಕ್ಷ ಕೋಟಿ. ಅದರಲ್ಲಿ ಕರ್ನಾಟಕಕ್ಕೆ ನೀಡಿದ ಅನುದಾನ ಕೇವಲ 3708.14 ಕೋಟಿ ಮಾತ್ರ 2022-2023, 2023-2024ರಲ್ಲಿ ಕರ್ನಾಟಕ ಬರ ಪರಿಹಾರ ಕೇಳಿದ್ದು ಇಲ್ಲಿಯವರೆಗೆ ಯಾವುದೇ ಅನುದಾನ ನೀಡಿಲ್ಲ.

ರಾಜ್ಯಗಳಿಗೆ ನೀಡಬೇಕಾದ ಅನುದಾನಗಳಲ್ಲಿ ರಾಜಕೀಯ ಕಾರಣಕ್ಕಾಗಿ ರಾಜ್ಯ ರಾಜ್ಯಗಳ ನಡುವೆ ತಾರತಮ್ಯ ಎಸಗುತ್ತಿರುವುದು. ಈ ವರ್ಷ ಕರ್ನಾಟಕ ಶತಮಾನಗಳಲ್ಲೇ ಕಂಡರಿಯದ ಬರಗಾಲ ಅನುಭವಿಸಿದ್ದರೂ, ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಸುಮಾರು ಹದಿನೆಂಟು ಸಾವಿರ ಕೋಟಿ ರೂ.ಗಳು ಬರ ಪರಿಹಾರ ಅನುದಾನಕ್ಕೆ ಕೋರಿಕೆ ಸಲ್ಲಿಸಿದ್ದರೂ ಒಂದು ಪೈಸೆ ಕೂಡ ಒದಗಿಸಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.

ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಒದಗಿಸದೇ ನಿರಂತರವಾಗಿ ಹಣವನ್ನು ಕಡಿತ ಮಾಡುತ್ತಾ, ರಾಜ್ಯ ಸರ್ಕಾರಗಳೇ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಒದಗಿಸುವಂತಹ ಒತ್ತಡ ಸೃಷ್ಟಿಸುತ್ತಿರುವುದು ರಾಜಕೀಯ ಪ್ರೇರಿತ ಮತ್ತು ಏಕ ಸೌಮ್ಯ ಅದಿಪತ್ಯದ ಧೋರಣೆಯಾಗಿದೆ. ಮೋದಿ ಸರ್ಕಾರವು ತನ್ನ ಮಾಧ್ಯಮಗಳ ಮೂಲಕ ದೇಶದ ಸಾಲ ತೀರಿಸಿದ್ದೇವೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ. ಆದರೆ ವಾಸ್ತವದಲ್ಲಿ 1947ರಿಂದ ಭಾರತ ದೇಶ ಜೂನ್ 2014ರವರೆಗೆ 54.90.763. ಹತ್ತು ಕೋಟಿ ರೂ.ಗಳ ಸಾಲ ಇತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ಹತ್ತು ವರ್ಷದಲ್ಲಿ 152.61.122. 12 ಕೋಟಿ ರೂ.ಗಳು ಮಾರ್ಚ್ 2023ರವರೆಗೆ ಸಾಲ ಮಾಡಿದೆ. ಒಟ್ಟು 97.70.359 ಕೋಟಿ ರೂ.ಗಳ ಸಾಲದ ಹೊರೆ ಹಾಕಿದೆ. ಕರ್ನಾಟಕ ರಾಜ್ಯದಲ್ಲಿ ಹತ್ತು ವರ್ಷದಲ್ಲಿ ಒಂದೆ ಒಂದು ಕೈಗಾರಿಕೆಯಾಗಲಿ, ಉದ್ಯಮೆಯಾಗಲಿ ಸ್ಥಾಪನೆ ಮಾಡಿಲ್ಲ. ಆದರೂ ಸಹ ಸರಕಾರದ ಸಾಲದ ಭಾರದಲ್ಲಿ ಇದ್ದೇವೆ ಎಂದು ಅವರು ಆತಂಕ ಹೊರಹಾಕಿದರು.

ಬಿಜೆಪಿ ಕೇಂದ್ರ ಸರ್ಕಾರು ಹತ್ತು ವರ್ಷದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಧಮನ ಮಾಡುವ ರಾಜ್ಯಗಳ ಅಧಿಕಾರಗಳು ಕಸಿದುಕೊಳ್ಳುವ, ಒತ್ತಡ ಹೇರುವ ಪ್ರವೃತ್ತಿಯನ್ನು ಅನುಸರಿಸಿ ಕಾನೂನು ಬದ್ಧ ದಬ್ಬಾಳಿಕೆ ನಡೆಸುತ್ತಿರುವುದು ಹಾಗೂ ಪ್ರಶ್ನಿಸುವವರನ್ನು ದೇಶ ವಿರೋಧಿಗಳೆಂದು ಬಿಂಬಿಸುವುದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಅವರು ಖಂಡಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

15 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago