ವಾಡಿ: ಪಟ್ಟಣದಲ್ಲಿ ಶನಿವಾರ ಜನಧ್ವನಿ ಜಾಗೃತ ಸಮಿತಿಯ ಕಾರ್ಯಕರ್ತರು ರೈಲ್ವೆ ಒಳ ಸೇತುವೆ ಹಾಗೂ ಬಸ್ ನಿಲ್ದಾಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಪ್ರತಿಭಟನಾ ಧರಣಿ ನಡೆಸಿದರು.
ರೈಲು ನಿಲ್ದಾಣ ಮುಂಭಾಗದಲ್ಲಿ ಹೋರಾಟ ಆರಂಭಿಸಿದ ವಿವಿಧ ಬಡಾವಣೆಗಳ ಜನರು, ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೃಹತ್ ಕಾರ್ಖಾನೆ ಇರುವ ವಾಡಿ ನಗರದಲ್ಲಿ ಮೂತ್ರಾಲಯಗಳು ಮತ್ತು ಸುಲಭ ಶೌಚಾಲಯ ವ್ಯವಸ್ಥೆ ಇಲ್ಲ ಎಂದರೆ ಇದೊಂದು ನಾಗರಿಕ ಸಮಾಜವೇ ಎಂದು ಪ್ರಶ್ನಿಸಿದರು.
15ಕ್ಕೂ ಹೆಚ್ಚು ಪ್ರೌಢ ಶಾಲೆಗಳಿರುವ ನಗರಕ್ಕೆ ಒಂದು ಸರ್ಕಾರಿ ಕಾಲೇಜು ಮಂಜೂರು ಮಾಡಿಲ್ಲ. ಓದುಗರಿಗಾಗಿ ಗ್ರಂಥಾಲಯ ಸೌಲಭ್ಯ ಕೊಡದಿರುವುದು ಜನದ್ರೋಹ ಎಂದು ಘೋಷಣೆ ಕೂಗಿದರು.
ಧರಣಿ ಉದ್ದೇಶಿಸಿ ಮಾತನಾಡಿದ ಜನಧ್ವನಿ ಜಾಗೃತ ಸಮಿತಿಯ ಅಧ್ಯಕ್ಷ ವೀರಭದ್ರಪ್ಪಾ ಆರ್.ಕೆ, ಪುರಸಭೆ ಆಡಳಿತ ಕೇಂದ್ರಸ್ಥಾನವಿರುವ ವಾಡಿಯಲ್ಲಿ ಜನರು ಮೂಲಭೂತ ಸೌಕರ್ಯಗಳಿಲ್ಲದೆ ಅನಾಗರಿಕ ಜೀವನ ನಡೆಸುವ ಮೂಲಕ ಕಷ್ಟ ಅನುಭವಿಸುತ್ತಿದ್ದಾರೆ. ರೈಲು ನಿಲ್ದಾಣದಾಚೆಯ ಹನುಮಾನ ನಗರ, ಇಂದ್ರಾ ನಗರ, ವಿಜಯನಗರ ಬಡಾವಣೆಗಳ ಜನರು ಊರೊಳಗೆ ಬರಲು ರಸ್ತೆಯಿಲ್ಲ. ರೈಲು ಹಳಿ ದಾಟಿ ಬರಬೇಕಾದ ದುಸ್ಥಿತಿಯಿದೆ. ಒಳ ಸೇತುವೆ ಸೌಲಭ್ಯ ಒದಗಿಸಬೇಕೆಂಬ ಕನಿಷ್ಟ ಅರಿವು ಮತ್ತು ಕಾಳಜಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗಿಲ್ಲ. ನಗರಕ್ಕೆ ಬರುವ ಜನರಿಗಾಗಿ ಮೂತ್ರಾಲಯ ಮತ್ತು ಸುಲಭ ಶೌಚಾಲಯ ಸೌಕರ್ಯವಿಲ್ಲ. ನಾವು ಕಟ್ಟುವ ತೆರಿಗೆ ಹಣ ಕಳ್ಳರ ಜೇಬು ಸೇರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಶೌಚಾಲಯಕ್ಕಾಗಿ ಹೋರಾಟ ಮಾಡಬೇಕಾಗಿರುವುದು ಆಡಳಿತಾಧಿಕಾರಿಗಳ ಪಾಲಿಗೆ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೌರವಾಧ್ಯಕ್ಷ ವಿ.ಕೆ.ಕೇದಿಲಾಯ ಮಾತನಾಡಿ, ವಾಡಿ ಪಟ್ಟಣದ ಜನರ ಗೋಳು ಯಾರೂ ಕೇಳದಂತಾಗಿದೆ. ಅಭಿವೃದ್ಧಿ ವಿಷಯದಲ್ಲಿ ಮಲತಾಯಿ ಧೋರಣೆ ತಾಳಲಾಗಿದೆ. ಬಹಳ ಬುದ್ದಿವಂತರಿರುವ ವಾಡಿಯಲ್ಲಿ ಮೌನಿಗಳ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಅನ್ಯಾಯಗಳ ವಿರುದ್ಧ ಜನರು ಎಚ್ಚೆತ್ತುಕೊಳ್ಳದ ಕಾರಣ ನರಕ ಪರಸ್ಥಿತಿ ಜೀವಂತವಿದೆ.
ಮೂತ್ರಾಲಯ, ಗ್ರಂಥಾಲಯ, ಕುಡಿಯಲು ಶುದ್ಧ ನೀರು, ರಸ್ತೆ, ಶೌಚಾಲಯ, ಕಾಲೇಜು ಕೊಡಿ ಎಂದು ಹೋರಾಟ ಮಾಡಬೇಕಾ? ಆಡಳಿತಕ್ಕೆ ಇಷ್ಟೂ ಪರಿಜ್ಞಾನ ಬೇಡವೇ? ಎಂದು ಕಿಡಿಕಾರಿದರು. ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ, ವಾಡಿ ಬಂದ್ ಕರೆ ನೀಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜನಧ್ವನಿಯ ಗೌರವ ಸಲಹೆಗಾರ ಜಯದೇವ ಜೋಗಿಕಲಮಠ, ಉಪಾಧ್ಯಕ್ಷ ಸಿದ್ದಯ್ಯಶಾಸ್ತ್ರಿ ನಂದೂರಮಠ, ಮುಖಂಡರಾದ ಮಹಮ್ಮದ್ ಯೂಸುಫ್ ಮುಲ್ಲಾ ಕಮರವಾಡಿ, ರಮೇಶ ಮಾಶಾಳ, ಮಹಾಂತೇಶ ಬಿರಾದಾರ, ಮಹಮ್ಮದ್ ಅಲ್ಲಾಭಕ್ಷ್, ಸಿದ್ದು ಶಳ್ಳಗಿ, ಭೀಮಸಿಂಗ್ ಚೌವ್ಹಾಣ, ರವಿ ಸಿಂಧಗಿ, ದೇವಿಂದ್ರ ದೊಡ್ಡಮನಿ, ಚಂದ್ರು ಕರಣಿಕ, ಅಶೋಕ ಖಾನಕುರ್ತೆ, ಮಹೆಬೂಬ.ಕೆ, ಮಲ್ಲಿಕಾರ್ಜುನ ಅಣ್ಣಿಗೇರಿ, ಶರಣುಕುಮಾರ ದೋಶೆಟ್ಟಿ, ಶ್ರೀಶೈಲ ಪುರಾಣಿಕ, ಕಾಶಿನಾಥ ಶಟಗಾರ, ಪ್ರಕಾಶ ಬುಟ್ಟಲ್, ರಾಜು ಒಡೆಯರಾಜ, ಪದ್ಮರೇಖಾ ಆರ್.ಕೆ, ಲಕ್ಷ್ಮೀ ದೊರೆ, ದೇವಕಿ ದೊರೆ ಲಾಡ್ಲಾಪುರ, ಲಕ್ಷ್ಮೀ ಸುರೇಶ ಕುಲಕರ್ಣಿ, ಬಾಲಮ್ಮಾ, ಈರಣ್ಣ ಯಲಗಟ್ಟಿ, ಗುಂಡುಗೌಡ ಪಾಟೀಲ ಸೇರಿದಂತೆ ವಿವಿಧ ಬಡಾವಣೆಯ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರೈಲ್ವೆ ಅಧಿಕಾರಿಗಳು ಹಾಗೂ ಗ್ರೇಡ್-2 ತಹಶೀಲ್ದಾರ, ಪುರಸಭೆ ಮುಖ್ಯಾಧಿಕಾರಿ ಮನವಿ ಸ್ವೀಕರಿಸಿ ಬೇಡಿಕೆಗಳು ಈಡೇರಿಸುವುದಾಗಿ ಭರವಸೆ ನೀಡಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…