ಕಲಬುರಗಿ: ನಾವಾಡುವ ಮಾತುಗಳು ಬೆಳಕಾಗಬೇಕು. ಬೆಂಕಿಯಾಗಬಾರದು. ಮಾತಿನಿಂದ ಗೆಳೆತನ ಉಂಟಾಗಬೇಕು ಹೊರತು ಹಗೆತನ ಉಂಟಾಗಬಾರದು ಎಂದು ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚನ್ನಾರಡ್ಡಿ ಪಾಟೀಲ ತಿಳಿಸಿದರು.
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಮತ್ತು ಸರ್ವಜ್ಞ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡದ ಶ್ರೇಷ್ಠ ಅನುಭಾವಿ ಕವಿ ಸರ್ವಜ್ಞ ಜಯಂತಿ ಹಾಗೂ ಸಾಮಾಜಿಕ ನ್ಯಾಯ ದಿನ ಆಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರಿಂದ ಮೌಲ್ಯಗಳನ್ನು ಕಲಿಯಬೇಕು. ಸಮಾಜಮುಖಿಯಾಗುವುದರ ಜೊತೆಗೆ ಬದುಕಿನ ಕೌಶಲ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸರ್ವಜ್ಞರ ಬದುಕು ಬರಹ ಕುರಿತು ಮಾತನಾಡಿದ ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಮ್ಮ ಆನುಭಾವಿಕ ತ್ರಿಪದಿಗಳ ಮೂಲಕ ತಿದ್ದಲು ಬಯಸಿದ್ದ ಸರ್ವಜ್ಞ ಕವಿ ಸರ್ವರೊಳಗೊಂದು ನುಡಿ ಕಲಿತು ವಿದ್ಯೆದ ಪರ್ವತವೇ ಆಗಿದ್ದರು ಎಂದು ಅಭಿಪ್ರಾಯಪಟ್ಟರು.
ಸರ್ವಜ್ಞನ ಕಾವ್ಯ ಧೋರಣೆ ಜೀವಪರವಾಗಿದೆ. ಮ್ಯಾಥ್ಯೂ ಅರ್ನಾಲ್ಡ್ ಅವರ ಮಾತಿನಿಂತೆ ಸಾಹಿತ್ಯ ಜೀವನ ವಿಮರ್ಶೆ ಯಾಗಿದೆ. ಅದರಂತೆ ಸರ್ವಜ್ಞನ ವಚನಗಳಲ್ಲಿ ಜೀವನ ವಿಮರ್ಶೆ ಕಾಣಬಹುದಾಗಿದೆ ಎಂದರು. ಯಾವುದೇ ಶಾಲಾ- ಕಾಲೇಜುಗಳ ಮೆಟ್ಟಿಲು ಹತ್ತದೆ, ಹೆತ್ತವರ, ಪೆÇೀಷಕರ ಆಶ್ರಯವಿಲ್ಲದೆ, ದೇಶ ಸಂಚಾರ ಮಾಡಿದ ಸರ್ವಜ್ಞ ನಮ್ಮ ಬದುಕಿಗೆ ಬೇಕಾದ, ಬೆಳಕಾಗಬಲ್ಲ ಬುತ್ತಿಯನ್ನು ಕಟ್ಟಿದ್ದಾರೆ ಎಂದು ಹೇಳಿದರು.
ಪ್ರಾಚಾರ್ಯೆ ವಿನುತಾ ಆರ್., ಉಪ ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ, ಪದವಿ ಕಾಲೇಜು ಪ್ರಾಚಾರ್ಯ ಪ್ರಭುಗೌಡ ಪಾಟೀಲ, ಲಕ್ಷ್ಮೀ ಕುಲಕರ್ಣಿ, ಕಾಂಚನಾ ವೇದಿಕೆಯಲ್ಲಿದ್ದರು. ತ್ರಿವೇಣಿ ನಿರೂಪಿಸಿದರು. ಡಾ. ವಿದ್ಯಾವತಿ ಪಾಟೀಲ ಸ್ವಾಗತಿಸಿದರು. ವೀರಶ್ರೀ ಸಂಗಡಿಗರು ಪ್ರಾರ್ಥನೆಗೀತೆ ಹಾಡಿದರು. ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಸೇರಿದಂತೆ ಅನೇಕರಿದ್ದರು.
ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸಿದ ಕವಿ ಸರ್ವಜ್ಞನ ವಚನಗಳು ಇಂದಿನ ಮಕ್ಕಳು, ಯುವ ಜನಾಂಗ ಹಾಗೂ ಸಮಾಜಕ್ಕೆ ದಾದೀಪವಾಗಿವೆ. 16ನೇ ಶತಮಾನದದಲ್ಲಿ ಬಾಳಿ ಬದುಕಿದ್ದ ಸರ್ವಜ್ಞನ ಮೇಲೆ 12ನೇ ಶತಮಾನದ ವಚನಕಾರರ ಪ್ರಭಾವ ಆಗಿದೆ. -ಚನ್ನಾರಡ್ಡಿ ಪಾಟೀಲ, ಸಂಸ್ಥಾಪಕರು, ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆ, ಕಲಬುರಗಿ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…