ಬಿಸಿ ಬಿಸಿ ಸುದ್ದಿ

ಕವಿಯಾದವನಿಗೆ ಪ್ರಾಸ ಕಾಡುವುದು ಸಹಜ : ಡಾ. ಟಿ. ಎಮ್.ಭಾಸ್ಕರ

ಕಲಬುರಗಿ: ಕಾವ್ಯದ ಕೆಲವಡೆ ಪ್ರಾಸಗಳು ಹೊಂದಾಣಿಕೆಗೆ ಕಟ್ಟು ಬಿದ್ದು ಅರ್ಥಕ್ಕೆ ಸ್ಪಷ್ಟತೆ ಸಿಗದೇ ಕಾರ್ಯ ಸೊರಗಿದ್ದು ಕಂಡುಬರುತ್ತದೆ. ಕವಿಯಾದವನಿಗೆ ಪ್ರಾಸ ಕಾಡುವುದು ಸಹಜ ಆದರೆ ಕಾವ್ಯ ಬಿತ್ತಗೆ,ರಸಾನುಭವಕ್ಕೆ ಕುಂದು ಬರದಂತೆ ಎಚ್ಚರವಹಿಸುವುದು ಅಷ್ಟೇ ಮುಖ್ಯ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಟಿ.ಎಮ ಭಾಸ್ಕರ್ ಅವರು ನುಡಿದರು.

ನಗರದ ರಂಗಾಯಣ ಸಭಾಂಗಣದಲ್ಲಿ ಬಸವ ಪ್ರಭು ಪ್ರಕಾಶನದ ವತಿಯಿಂದ ಹಮ್ಮಿಕೊಂಡ ಶ್ರೀಮತಿ ಮಲ್ಲಮ್ಮ ಶಿವರಾಜ ಕಾಳಗಿ ಅವರು ವಿರಚಿತ “ಪಾತಾಳ ಗಂಗೆ” ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡುತ್ತಾ ಲೇಖಕಿಯ ತಮ್ಮ ಪ್ರಥಮ ಕವನ ಸಂಕಲನದಲ್ಲಿ ತಡವರಿಸುತ್ತಲೇ ಗಟ್ಟಿ ಹೆಜ್ಜೆಗಳನ್ನಿಡುವ ಪ್ರಯತ್ನ ಮಾಡಿದ್ದರೆ. ಇಲ್ಲಿಯ ಕವನಗಳು ವಿಷಯ ವೈವಿಧ್ಯತೆಯಿಂದ ಕೂಡಿವೆ ಹೆಚ್ಚಿನ ಕವನಗಳು ಸಾಮಾಜಿಕ ಕಳಕಳಿ, ಪ್ರಗತಿಪರ ವಿಚಾರಧಾರೆ, ಮಾನವೀಯ ಮೌಲ್ಯಗಳಿಂದ ಕೂಡಿದ್ದು ಕಂಡುಬರುತ್ತದೆ.

ತಮ್ಮ ಸುತ್ತಮುತ್ತಲು ಕಂಡು ಬರುವ ಪ್ರಸಂಗಗಳಿಗೆ ಮಿಡಿದಿದ್ದು ನಾಡು-ನುಡಿ, ದೇಶ,ಗ್ರಾಮ,ಶಾಲೆ ಸಾಮಾಜಿಕ ಸಮಸ್ಯೆ, ರಾಜಕೀಯ ಧಾರ್ಮಿಕ, ವ್ಯಕ್ತಿತ್ವ ದರ್ಶನ ಹೀಗೆ ಬಿಡಿ ಬಿಡಿ ಭಾವನೆಗಳನ್ನು ಕವಿತೆಯ ರೂಪದಲ್ಲಿ ಹಿಡಿದಿಟ್ಟಿದ್ದಾರೆ. ಯಾವ ಸಂಕೀರ್ಣತೆ ಇಲ್ಲದ ಸರಳವಾಗಿ ತಾವು ಕಂಡು ಇದನ್ನು ಹಣೆಯ ಬಲ್ಲರೆಂಬುದು ಸಂತೋಷದ ವಿಷಯ ಎಂದರು.

ಕೃತಿಯ ಕುರಿತು ಮಾತನಾಡಿದ ಡಾ. ಸುಜಾತಾ ಪಾಟೀಲ್ ಅವರು ಶ್ರೀಮತಿ ಮಲ್ಲಮ್ಮ ಕಾಳಗಿ ಇವರ ಕವಿ ಮನಸ್ಸು ಜಾಗೃತವಾಗಿ ಸಣ್ಣಪುಟ್ಟ ಪ್ರಸಂಗಗಳಿಗೂ ಸ್ಪಂದಿಸಿ ಕಾವ್ಯ ರಚನೆಗೈದಿದ್ದು ಮೆಚತಕ್ಕ ಸಂಗತಿಯಾಗಿದೆ. ಚೇತನ್ ಯೂಥ್ ಫೋರಂ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ದಾಂಪತ್ಯ ಬದುಕಿನೊಂದಿಗೆ ಹೆಜ್ಜೆ ಹಾಕುತ್ತ ಬಾಳ ಸಂಗಾತಿ,ಇಬ್ಬರು ಮಕ್ಕಳೊಂದಿಗೆ ಕವನಗಳ ಸವಿ ಹಂಚುತ್ತಾ ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ.

ಮಹಿಳೆಯಾಗಿ ಮಹಿಳಾ ನೋವು ನಲಿವುಗಳಿಗೆ ಧ್ವನಿಯಾಗಿ ಸಕಾರಾತ್ಮಕ ನೆಲೆಯಲ್ಲಿ ಕವನಗಳನ್ನು ಕಟ್ಟಿದ್ದಾರೆ. ಅಲ್ಲಲ್ಲಿ ನಿರಾಶೆಯ ಎಳೆಗಳು ಬಂದರೂ ಆಧುನಿಕತೆ ಯುಗದಲ್ಲಿ ಮಹಿಳೆಯರಿಗೆ ಏನೆಲ್ಲ ದಕ್ಕಿದೆ ಅದಕ್ಕೆ ಸಮಾಜದ ಪ್ರತಿಕ್ರಿಯೆ ಏನು ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀನಿವಾಸ ಸರಡಗಿಯ ಶ್ರೀ ರೇವಣಸಿದ್ದ ಶಿವಾಚಾರ್ಯರು, ಸಾನಿಧ್ಯವನ್ನು ಮಹಾಗಾoವ್ ಕಳ್ಳಿ ಮಠದ ಶ್ರೀ ವಿರೂಪಾಕ್ಷ ದೇವರು ವಹಿಸಿದ್ದು,ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಏ.ಕೆ ರಾಮೇಶ್ವರ ಉದ್ಘಾಟಿಸಿದರು ಶ್ರೀ ರೇವಣಸಿದ್ಧಪ್ಪ ಕಾಳಗಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆ ಮೇಲೆ ಉಸ್ಮಾನಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಲಿಂಗಣ್ಣ ಗೋನಾಳ, ಲೇಖಕಿ ಶ್ರೀಮತಿ ಮಲ್ಲಮ್ಮ ಶಿವರಾಜ ಕಾಳಗಿ, ಡಾ. ಶರಣಬಸಪ್ಪ ವಡ್ಡನಕೇರಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ವಿಜಯಲಕ್ಷ್ಮಿ ಕೊಸಗಿ,ನೀಲಾoಬಿಕಾ ಮಹಾಗಾoವ್ಕರ್ ,ಬಿ ಎಚ್ ನೀರಗುಡಿ, ಶರಣಗೌಡ ಪಾಟೀಲ ಪಾಳ,ಶಿವಕುಮಾರ ತಡಕಲ್, ಶರಣಬಸಪ್ಪ ವೀರಶೆಟ್ಟಿ, ಜೈಪ್ರಕಾಶ ಓಕಳಿ,ಶ್ರೀಕಾಂತ ಪಾಟೀಲ, ಬಸವರಾಜ ಶಿರಡಿ,ಅಣ್ಣಪ್ಪ ಭದ್ರಶೆಟ್ಟಿ, ಶ್ರೀಮತಿ ಶೈಲಜಾ ಮಠಪತಿ , ಶ್ರೀಮತಿ ಸುರೇಖಾ ಮಠ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು . ಶಿಕ್ಷಕ ಅಂಬರಾಯ ಮಡ್ಡೆ ಕಾರ್ಯಕ್ರಮ ನಿರೂಪಿಸಿದರೆ ಡಾ. ಶರಣಬಸಪ್ಪ ವಡ್ಡನಕೇರಿಯವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳ ನಾಡಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಶಿವರಾಜ್ ಕಾಳಗಿ ಅವರು ತಿಳಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago