ಕಲಬುರಗಿ: ವೈದ್ಯಕೀಯ, ಇಂಜನಿಯರಿಂಗ್ ಅಷ್ಟೆ ಶಿಕ್ಷಣದ ಮಾರ್ಗವಲ್ಲ ಮೂಲ ವಿಜ್ಞಾನದತ್ತ ವಿದ್ಯಾರ್ಥಿಗಳು ಚಿತ್ತ ಹರಿಸಬೇಕು. ವಿಷಯ ಭಾವುಕರಾಗಿ ಓದುವ ಬದಲು ಭಾಷಾ ಭಾವುಕರಾಗಿ ಓದಬೇಕು. ಕಠಿಣ ಪರಿಶ್ರಮ, ಸಮಯ ಪ್ರಜ್ಞೆ, ಧೃಡ ಸಂಕಲ್ಪ ಇದ್ದರೆ ಮಾತ್ರ ಗುರಿ ತಲುಪಲು ಸಾಧ್ಯ. ಕನಸು ಕಾಣಬೇಕು. ಕಂಡ ಕನಸು ನನಸಾಗಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಜಫ್ರಾಬಾದ್ ಕ್ರಾಸ್‍ನಲ್ಲಿರುವ ಜೆ ಎಸ್ ಸಭಾಗಂಣದಲ್ಲಿ ಆಯೋಜಿಸಿದ್ದ ಸಹಾರಾ ಇಂಗ್ಲಿಷ್ ಮಾಧ್ಯಮ ಶಾಲೆಯ 9ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಇಂದಿನ ದಿನಮಾನಗಳಲ್ಲಿ ಆಂಗ್ಲ ಭಾಷೆ ಅಗತ್ಯವಿದೆ. ಆದರೆ ಮಾತೃಭಾಷೆ ಕಡೆಗಣಿಸಬಾರದು. ಕನ್ನಡ ನಿಜಜೀವನ ಭಾಷೆ, ಇಂಗ್ಲಿಷ್ ಉಪಜೀವನ ಭಾಷೆ ಹಾಗೂ ಸಂಸ್ಕøತ ಉಜ್ಜಿವನ ಭಾಷೆ. ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸೈಯದ್ ಅನ್ವರ್ ಹುಸೇನಿ, ಸಹಾರಾ ಶಿಕ್ಷಣ ಟ್ರಸ್ಟ್‍ನ ಅಧ್ಯಕ್ಷ ಎಂ.ಎ ಸಿದ್ದಿಕಿ, ವಿಜಯಕುಮಾರ್ ಜಮಖಂಡಿ, ಸಾಹೇಬ್ ಅಲಿ, ವಿಜಯಕುಮಾರ ತೆಗಲತಿಪ್ಪಿ, ನೀಲಕಂಠರಾವ ಮೂಲಗೆ, ಸೈಯದ್ ಮಹಮೂದ್ ಪಟೇಲ್, ಹೈದರ್ ಅಲಿ ಬಾಗವಾನ್, ಸೈರಾ ಬಾನು, ಸಾಜಿದ್ ಕಲ್ಯಾಣಿ, ಶೇಖ ಹುಸೇನ್ ಬಾಬಾ, ಅಮೃತ ಪಾಟೀಲ, ಸಚೀನ ಶೀರವಾಳ, ಇಲಿಶ್ ಬಾಬು ಬುಲ್ಡಾ, ವಿಜಯಕುಮಾರ್ ಕಟ್ಟಿಮನಿ, ಬಾಬು ಬೆನ್ನೂರು, ಶಿವನಂದ ಉಪ್ಪಿನ್, ಬಸವರಾಜ್ ಬಿರಾದಾರ ಸೇರಿದಂತೆ ಶಾಲೆಯ ಶಿಕ್ಷಕರು, ಮಕ್ಕಳು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…