ವೀರಶೈವ ಲಿಂಗಾಯತ ಧರ್ಮದ ಸರ್ವಶ್ರೇಷ್ಠ ಮಾರ್ಗವಾಗಿದೆ; ಪ್ರೊ. ಶಿವರಾಜ ಪಾಟೀಲ

ಕಲಬುರಗಿ: ಹುಳು ಮಾನವರೆಂದು ಕರೆಯುತ್ತಾರೆ. ಅದೇ ರೀತಿ ಅವರ ಪ್ರಥಮ ಪುಣ್ಯಸ್ಮರಣೆ ಮಾಡುವ ಮೂಲಕ ಅವರು ಬದುಕಿರುವಾಗ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿ, ಬಸವಾದಿ ಶರಣರ ಸೇವೆಯನ್ನು ಮಾಡುವ ಮೂಲಕ ಜನರ ಸೇವೆ, ಗ್ರಾಮದ ಸೇವೆ, ಮಾಡುವ ಮೂಲಕ ದಿ. ಅಂಡಗಿಯವರು ಜನರ ಮನಸ್ಸಿನಲ್ಲೆ ಶಾಸ್ವತರಾಗಿದ್ದಾರೆ ಹುಟ್ಟು ಸಾವುಗಳನ್ನು ಮೆಟ್ಟಿ ನಿಲ್ಲಿವುದೆ ವೀರಶೈವ ಲಿಂಗಾಯತ ಧರ್ಮದ ಸರ್ವಶ್ರೇಷ್ಠ ಮಾರ್ಗವಾಗಿದೆ ಎಂದು ಪ್ರೊ.ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.

ನಗರದ ವಿದ್ಯಾನಗರದಲ್ಲಿ ದಿ. ಶಿವರಶರಣಪ್ಪ ಅಂಡಗಿ ಸ್ಮರಣಾರ್ಥ ಹಮ್ಮಿಕೊಂಡ ಮಾಸಿಕ ವಚನೋತ್ಸವ ಕಾರ್ಯಕ್ರಮದಲ್ಲಿ ಅನೇಕ ಬಸವಾದಿ ಶರಣರ ವಚನ ವಿಶ್ಲೇಷಣೆ ಮಾಡುವ ಮೂಲಕ  ಉಪನ್ಯಾಸ ನೀಡಿದರು.

ನಮ್ಮನ್ನಗಲಿದ ನಾಲ್ಕು ವರ್ಷದ ನಂತರ ಇಂದು ಕ್ಯಾಲೆಂಡರನಲ್ಲಿ 29 ಫೆಬ್ರವರಿ ಬಂದಿದೆ. ಇದು ನಾಲ್ಕು ವರ್ಷಕ್ಕೊಮ್ಮೆ ಬರುವ ವಿಶೇಷ ದಿನ ಅದಕ್ಕಾಗಿಯೇ ಲಿಪ್ ಇಯರ ಎಂದೆ ಕರೆಯಲ್ಪಡುತ್ತದೆ. ಅವರ ಸ್ಮರಣಾರ್ಥದಂಗವಾಗಿ ಕ್ಯಾಲೆಂಡರನಲ್ಲಿ ಅವರ ಭಾವಚಿತ್ರ ಅಳವಡಿಸುವ ಮೂಲಕ ವರ್ಷದ 365ದಿನ ಸ್ಮರಣೆ ಮಾಡುವುದು ಇದೊಂದು ವಿಶೇಷತೆ ಎಂದು ಅಪ್ಪಾರಾವ ಅಕ್ಕೋಣಿಯವರು ಕಾರ್ಯಕ್ರಮಕ್ಕೆ ಬಂದ ಆಮಂತ್ರಿತರಿಗೆ ಕ್ಯಾಲೆಂಡರ ವಿತರಣೆ ಮಾಡಿ ಮಾತನಾಡಿದರು.

ರೇವಣಸಿದ್ದಪ್ಪ ಮಾಸ್ಟರ್ ಚಿಂಚೋಳಿ ಮಾಸಿಕ ವಚನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ದಿ. ಅಂಡಗಿಯವರು ಈಗಿನ ರಾಜಕಾರಣಿಗಳಂತೆ ಸ್ವಾರ್ಥ ರಾಜಕಾರಣಿಗಳಾಗಿರದೆ ನಿಶ್ವಾರ್ಥ ರಾಜಕಾರಣಗಳಾಗಿದ್ದರು. ಅವರು ಒಬ್ಬ ಪ್ರಾಮಾಣಿಕ ವ್ಯಕ್ತಿ ಆಗಿರದೆ, ಇಡಿ ಟೇಂಗಳಿ ಗ್ರಾಮದ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಒಂದು ದೊಡ್ಡ ಶಕ್ತಿಯಾಗಿದ್ದರು. ರಾಜ್ಯದ ಆಗಿನ ಮುಖ್ಯಮಂತ್ರಿ ದೇವರಾಜ ಅರಸ್ ಗ್ರಾಮಕ್ಕೆ ಕರೆಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯಾವುದೆ ಪಕ್ಷದ ಸಚಿವರಾಗಲಿ, ವಿಧಾನಪರಿಷತ್ತ ಸದಸ್ಯರಾಗಲಿ, ವಿಧಾನಸಭೆ ಸದಸ್ಯರಾಗಲಿ ಗ್ರಾಮಕ್ಕೆ ಬಂದರೆ ಅಂಡಗಿಯವರನ್ನೆ ಭೇಟಿ ಮಾಡುತ್ತಿದ್ದರು. ಅವರು ಟಿ.ಡಿ.ಬಿ. ಹಾಗು ಜಿ. ಪಂ. ಸದಸ್ಯರಾಗಿ ಗ್ರಾಮಕ್ಕೆ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಕುರಿತು ಮೆಲುಕು ಹಾಕಿದರು.

ಅಂಡಗಿ ಪ್ರತಿಷ್ಠಾನ ಟೇಂಗಳಿ ಗೌರವ ಅಧ್ಯಕ್ಷರಾದ ಹೂವಮ್ಮ ಅಂಡಗಿ ಅಧ್ಯಕ್ಷತೆ ವಹಿಸಿದರು. ಕಾರ್ಯಾಧ್ಯಕ್ಷರಾದ ಸಿದ್ರಾಮಪ್ಪ ಅಂಡಗಿ ಹಾಗು ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್‍ನ ಕಾರ್ಯದರ್ಶಿಗಳಾದ ಬಸವರಾಜ ದೂಳಾಗುಂಡಿ ಗೌರವ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕುಮಾರಿ ಅಭಿಶ್ರೀ ವಿಜಯಕುಮಾರ ಅವರಿಂದ ವಚನಾಧಾರಿತ ಭರನಾಟ್ಯ ನಡೆಸಿಕೊಟ್ಟಳು, ರೇಖಾ ಅಂಡಗಿ ಪ್ರಾರ್ಥನೆ ಗೀತೆ ಹಾಡಿದರು. ವಿನೋದಕುಮಾರ ಜೇನೆವರಿ ಸ್ವಾಗತಿಸಿದರು. ಬಸವರಾಜ ದೂಳಗುಂಡಿ ಮತ್ತು ರೇವಣಸಿದ್ದಪ್ಪ ಜೀವಣಗಿ ಓಂಕಾರ ನಡೆಸಿಕೊಟ್ಟರು. ವಿಶ್ವನಾಥ ತೊಟ್ನಳ್ಳಿ ವಂದಿಸಿದರು. ಸಿದ್ರಾಮ ಹಂಚಿನಾಳ ನಿರೂಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ವಿರೇಶ ನಾಗಶೆಟ್ಟಿ, ಅಮಿತ ಜೀವಣ, ಸಂತೋಷ ಪ್ಯಾಟಿ, ಕರಣಕುಮಾರ ಆಂದೋಲಾ, ಸಂಗಮೇಶ ಹೆಬ್ಬಾಳ, ತರುಣಶೇಖರ ಬಿರಾದಾರ, ರಾಜಶೇಖರ ಮರಪಳ್ಳಿ, ಚಂದ್ರಶೇಖರ ಸುಲೇಪೇಠ, ಗುಂಡಪ್ಪ ಪಟ್ಟೇದ, ಭೀಮಾಶಂಕರ ಅಂಕಲಗಿ, ಧರ್ಮರಾಜ ಹೆಬ್ಬಾಳ, ರಾಜೇಂದ್ರ ಮಾಡಬೂಳ, ಶಿವಲಿಂಗಪ್ಪ ಅಷ್ಠಗಿ, ಸಿದ್ದೇಶ ಹೆಬ್ಬಾಳ, ಶ್ರೀವತ್ಸ ಸಂಗೋಳಗಿ, ಅಚಲರಾಜ ಅಂಡಗಿ, ಬಸವರಾಜ ಡೊಣ್ಣೂರ ಹಾಗು ಇತರರು ಉಪಸ್ಥಿತರಿದ್ದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420