ಕಲಬುರಗಿ: ಹುಳು ಮಾನವರೆಂದು ಕರೆಯುತ್ತಾರೆ. ಅದೇ ರೀತಿ ಅವರ ಪ್ರಥಮ ಪುಣ್ಯಸ್ಮರಣೆ ಮಾಡುವ ಮೂಲಕ ಅವರು ಬದುಕಿರುವಾಗ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿ, ಬಸವಾದಿ ಶರಣರ ಸೇವೆಯನ್ನು ಮಾಡುವ ಮೂಲಕ ಜನರ ಸೇವೆ, ಗ್ರಾಮದ ಸೇವೆ, ಮಾಡುವ ಮೂಲಕ ದಿ. ಅಂಡಗಿಯವರು ಜನರ ಮನಸ್ಸಿನಲ್ಲೆ ಶಾಸ್ವತರಾಗಿದ್ದಾರೆ ಹುಟ್ಟು ಸಾವುಗಳನ್ನು ಮೆಟ್ಟಿ ನಿಲ್ಲಿವುದೆ ವೀರಶೈವ ಲಿಂಗಾಯತ ಧರ್ಮದ ಸರ್ವಶ್ರೇಷ್ಠ ಮಾರ್ಗವಾಗಿದೆ ಎಂದು ಪ್ರೊ.ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.
ನಗರದ ವಿದ್ಯಾನಗರದಲ್ಲಿ ದಿ. ಶಿವರಶರಣಪ್ಪ ಅಂಡಗಿ ಸ್ಮರಣಾರ್ಥ ಹಮ್ಮಿಕೊಂಡ ಮಾಸಿಕ ವಚನೋತ್ಸವ ಕಾರ್ಯಕ್ರಮದಲ್ಲಿ ಅನೇಕ ಬಸವಾದಿ ಶರಣರ ವಚನ ವಿಶ್ಲೇಷಣೆ ಮಾಡುವ ಮೂಲಕ ಉಪನ್ಯಾಸ ನೀಡಿದರು.
ನಮ್ಮನ್ನಗಲಿದ ನಾಲ್ಕು ವರ್ಷದ ನಂತರ ಇಂದು ಕ್ಯಾಲೆಂಡರನಲ್ಲಿ 29 ಫೆಬ್ರವರಿ ಬಂದಿದೆ. ಇದು ನಾಲ್ಕು ವರ್ಷಕ್ಕೊಮ್ಮೆ ಬರುವ ವಿಶೇಷ ದಿನ ಅದಕ್ಕಾಗಿಯೇ ಲಿಪ್ ಇಯರ ಎಂದೆ ಕರೆಯಲ್ಪಡುತ್ತದೆ. ಅವರ ಸ್ಮರಣಾರ್ಥದಂಗವಾಗಿ ಕ್ಯಾಲೆಂಡರನಲ್ಲಿ ಅವರ ಭಾವಚಿತ್ರ ಅಳವಡಿಸುವ ಮೂಲಕ ವರ್ಷದ 365ದಿನ ಸ್ಮರಣೆ ಮಾಡುವುದು ಇದೊಂದು ವಿಶೇಷತೆ ಎಂದು ಅಪ್ಪಾರಾವ ಅಕ್ಕೋಣಿಯವರು ಕಾರ್ಯಕ್ರಮಕ್ಕೆ ಬಂದ ಆಮಂತ್ರಿತರಿಗೆ ಕ್ಯಾಲೆಂಡರ ವಿತರಣೆ ಮಾಡಿ ಮಾತನಾಡಿದರು.
ರೇವಣಸಿದ್ದಪ್ಪ ಮಾಸ್ಟರ್ ಚಿಂಚೋಳಿ ಮಾಸಿಕ ವಚನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ದಿ. ಅಂಡಗಿಯವರು ಈಗಿನ ರಾಜಕಾರಣಿಗಳಂತೆ ಸ್ವಾರ್ಥ ರಾಜಕಾರಣಿಗಳಾಗಿರದೆ ನಿಶ್ವಾರ್ಥ ರಾಜಕಾರಣಗಳಾಗಿದ್ದರು. ಅವರು ಒಬ್ಬ ಪ್ರಾಮಾಣಿಕ ವ್ಯಕ್ತಿ ಆಗಿರದೆ, ಇಡಿ ಟೇಂಗಳಿ ಗ್ರಾಮದ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಒಂದು ದೊಡ್ಡ ಶಕ್ತಿಯಾಗಿದ್ದರು. ರಾಜ್ಯದ ಆಗಿನ ಮುಖ್ಯಮಂತ್ರಿ ದೇವರಾಜ ಅರಸ್ ಗ್ರಾಮಕ್ಕೆ ಕರೆಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯಾವುದೆ ಪಕ್ಷದ ಸಚಿವರಾಗಲಿ, ವಿಧಾನಪರಿಷತ್ತ ಸದಸ್ಯರಾಗಲಿ, ವಿಧಾನಸಭೆ ಸದಸ್ಯರಾಗಲಿ ಗ್ರಾಮಕ್ಕೆ ಬಂದರೆ ಅಂಡಗಿಯವರನ್ನೆ ಭೇಟಿ ಮಾಡುತ್ತಿದ್ದರು. ಅವರು ಟಿ.ಡಿ.ಬಿ. ಹಾಗು ಜಿ. ಪಂ. ಸದಸ್ಯರಾಗಿ ಗ್ರಾಮಕ್ಕೆ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಕುರಿತು ಮೆಲುಕು ಹಾಕಿದರು.
ಅಂಡಗಿ ಪ್ರತಿಷ್ಠಾನ ಟೇಂಗಳಿ ಗೌರವ ಅಧ್ಯಕ್ಷರಾದ ಹೂವಮ್ಮ ಅಂಡಗಿ ಅಧ್ಯಕ್ಷತೆ ವಹಿಸಿದರು. ಕಾರ್ಯಾಧ್ಯಕ್ಷರಾದ ಸಿದ್ರಾಮಪ್ಪ ಅಂಡಗಿ ಹಾಗು ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್‍ನ ಕಾರ್ಯದರ್ಶಿಗಳಾದ ಬಸವರಾಜ ದೂಳಾಗುಂಡಿ ಗೌರವ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕುಮಾರಿ ಅಭಿಶ್ರೀ ವಿಜಯಕುಮಾರ ಅವರಿಂದ ವಚನಾಧಾರಿತ ಭರನಾಟ್ಯ ನಡೆಸಿಕೊಟ್ಟಳು, ರೇಖಾ ಅಂಡಗಿ ಪ್ರಾರ್ಥನೆ ಗೀತೆ ಹಾಡಿದರು. ವಿನೋದಕುಮಾರ ಜೇನೆವರಿ ಸ್ವಾಗತಿಸಿದರು. ಬಸವರಾಜ ದೂಳಗುಂಡಿ ಮತ್ತು ರೇವಣಸಿದ್ದಪ್ಪ ಜೀವಣಗಿ ಓಂಕಾರ ನಡೆಸಿಕೊಟ್ಟರು. ವಿಶ್ವನಾಥ ತೊಟ್ನಳ್ಳಿ ವಂದಿಸಿದರು. ಸಿದ್ರಾಮ ಹಂಚಿನಾಳ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ವಿರೇಶ ನಾಗಶೆಟ್ಟಿ, ಅಮಿತ ಜೀವಣ, ಸಂತೋಷ ಪ್ಯಾಟಿ, ಕರಣಕುಮಾರ ಆಂದೋಲಾ, ಸಂಗಮೇಶ ಹೆಬ್ಬಾಳ, ತರುಣಶೇಖರ ಬಿರಾದಾರ, ರಾಜಶೇಖರ ಮರಪಳ್ಳಿ, ಚಂದ್ರಶೇಖರ ಸುಲೇಪೇಠ, ಗುಂಡಪ್ಪ ಪಟ್ಟೇದ, ಭೀಮಾಶಂಕರ ಅಂಕಲಗಿ, ಧರ್ಮರಾಜ ಹೆಬ್ಬಾಳ, ರಾಜೇಂದ್ರ ಮಾಡಬೂಳ, ಶಿವಲಿಂಗಪ್ಪ ಅಷ್ಠಗಿ, ಸಿದ್ದೇಶ ಹೆಬ್ಬಾಳ, ಶ್ರೀವತ್ಸ ಸಂಗೋಳಗಿ, ಅಚಲರಾಜ ಅಂಡಗಿ, ಬಸವರಾಜ ಡೊಣ್ಣೂರ ಹಾಗು ಇತರರು ಉಪಸ್ಥಿತರಿದ್ದರು.