ಶಹಾಬಾದ: ಪ್ರತಿಭಾವಂತರ ತಂಡ ಸೇರಿಕೊಂಡು ” ಕೊಲೆಯಾದವನೆ ಕೊಲೆಗಾರ ” ಚಿತ್ರವನ್ನು ಸದ್ದುಗದ್ದಲವಿದೆ ಪೂರ್ಣಗೊಳಿಸಿದ್ದು ಮಾರ್ಚ 8ರಂದು ಬಿಡುಗಡೆಯಾಗಲಿದೆ. ಪ್ರೇಕ್ಷಕರು ಸಿನಿಮಾ ಚಿತ್ರಮಂದಿರದಲ್ಲಿ ವೀಕ್ಷಿಸಿ ಪೆÇ್ರೀತ್ಸಾಹಿಸಬೇಕೆಂದು ನಿರ್ಮಾಪಕ, ನಿರ್ದೇಶಕ ಮಲ್ಲಿಕಾರ್ಜುನ ಹೀರೆತನದ್ ಹೇಳಿದರು.
ಅವರು ಶನಿವಾರ ನಗರದ ಓಂ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಲಾದ ಕೊಲೆಯಾದವನೆ ಕೊಲೆಗಾರ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ದುಷ್ಚಟಗಳಿಗೆ ಬಲಿಯಾಗಿ,ಅಂತವರನ್ನು ಸ್ನೇಹಿತರನ್ನೇ ಮಾಡಿಕೊಂಡು, ಓದು ಬಿಟ್ಟು, ಜೀವನವನ್ನೇ ಹಾಳು ಮಾಡಿಕೊಂಡು, ಅಪ್ಪ-ಅಮ್ಮನನ್ನು ಕಳೆದುಕೊಂಡು, ಹೇಗಪ್ಪ ಜೀವನ ಮಾಡುವುದು ಎಂಬ ಸ್ಥಿತಿಗೆ ತಲುಪುವುದೇ “ಕೊಲೆಯಾದವನೇ ಕೊಲೆಗಾರ” ಚಿತ್ರದ ತಿರುಳು.ಚಿತ್ರದಲ್ಲಿ ನಾಲ್ಕು ಪಾತ್ರಗಳು ಬರಲಿದ್ದು ಒಂದೊಂದು ವಿಭಿನ್ನ ಕಥೆ ಹೇಳುತ್ತವೆ. ತುಂಬಾ ಕಷ್ಟ ಪಟ್ಟು ಈ ಸಿನಿಮಾ ಮಾಡಿದ್ದೀವಿ. ಹುಟ್ಟಿದ್ದು ಹಾವೇರಿಯಲ್ಲಿ, ಬೆಳೆದಿದ್ದೆಲ್ಲಾ ತುಮಕೂರಿನಲ್ಲಿ ಬಡವರ ಮನೆ ಮಗ ಬೆಂಗಳೂರಿಗೆ ಬಂದಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎಂದು ತೋರಿಸಿದ್ದೀವಿ. ತಂದೆ-ಮಗಳ ಬಾಂಧವ್ಯವೂ ಇದರಲ್ಲಿದೆ ಎಂದು ಸಹಕಾರ ನೀಡಿ ಎಂದರು.
ಓಂ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಬಸವರಾಜ ಮದ್ರಿಕಿ ಮಾತನಾಡಿ,ಉತ್ತರ ಕರ್ನಾಟಕದ ಪ್ರತಿಭೆಗಳು ಹೆಚ್ಚು ಬೆಳಕಿಗೆ ಬರಲಿ ಇಂಥ ಯುವ ನಟ ಮತ್ತು ನಿರ್ದೇಶಕರಿಗೆ ನಾವೆಲ್ಲರೂ ಪೆÇ್ರೀತ್ಸಾಹಿಸಬೇಕೆಂದು ಹೇಳಿದರು.
ನಟ ಸಿದ್ದು ಎನ್ ಆರ್ ಮಾತನಾಡಿ, ನಾಯಕಿ ಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡರೆ ನಾಯಕ ಬಂದು ಕಾಪಾಡ್ತಾನೆ ಎಂಬುದು ತಲೆಯಲ್ಲಿ ಬರುತ್ತೆ. ಆದರೆ ನಮ್ಮ ಸಿನಿಮಾದಲ್ಲಿ ಒಂದೊಂದು ಸೀನ್ ಕೂಡ ಸಸ್ಪೆನ್ಸ್ ಆಗಿದೆ. ಒಂದೊಂದು ಫೆÇೀಟೋ ಕೂಡ ಒಂದೊಂದು ಕಥೆ ಹೇಳುತ್ತದೆ. ದಯವಿಟ್ಟು ಮಾರ್ಚ್ 8 ರಂದು ಸಿನಿಮಾ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿ, ಕಲಬುರಗಿ ಪ್ರತಿಭೆಯನ್ನು ಪೆÇ್ರೀತ್ಸಾಹಿಸಿ ಆಶೀರ್ವದಿಸಬೇಕೆಂದರು.
ಈ ಸಂದರ್ಭದಲ್ಲಿ ವಿಜಯಕುಮಾರ ಕಂಠಿಕರ್,ಬೆಳೆಪ್ಪ ಖಣದಾಳ, ಮಂಜುನಾಥ ದೊಡ್ಮನಿ, ಸುನೀಲ ಪೂಜಾರಿ, ಅಮರ ಕೋರೆ, ಸಂತೋಷ ಪೂಜಾರಿ, ರಮೇಶ ಪೂಜಾರಿ, ಬೀಮಾಶಂಕರ ಹಿರಿಪೂಜಾರಿ, ತೇಜಸ್. ಆರ್.ಇಬ್ರಾಹಿಂಪೂರ್, ಬೀಮಾಶಂಕರ ಕಡಿಹಳ್ಳಿ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…