ಶಹಾಬಾದ: ಕೋವಿಡ್ ಸಂದರ್ಭದಲ್ಲಿ ಶಹಾಬಾದ ನಿಲ್ದಾಣದಲ್ಲಿ ಕೆಲವು ರೈಲುಗಳು ನಿಲ್ಲುತ್ತಿರಲಿಲ್ಲ.ಇದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆ ತಲೆದೋರಿತ್ತು.ಸಾರ್ವಜನಿಕರ ಹಿತದೃಷ್ಟಿಯಿಂದ ಮೂರು ರೈಲುಗಳನ್ನು ನಿಲ್ಲಿಸಲು ಆದೇಶವಾಗಿದೆ.ಇದರಿಂದ ಸಾರ್ವಜನಿಕರಿಗೆ ಎಲ್ಲಿಲ್ಲದ ಅನುಕೂಲಕರವಾಗಲಿದೆ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.
ಅವರು ರವಿವಾರ ಬೆಳಿಗ್ಗೆ ನಗರದ ರೇಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತವಾಗಿ ರೈಲುಗಳ ನಿಲುಗಡೆ ಚಾಲನೆ ನೀಡಿ ಮಾತನಾಡಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ರೈಲುಗಳು ನಿಲ್ಲದೇ ಇರುವುದರಿಂದ ಜನರಿಗೆ ತೊಂದರೆ ಆಗುತ್ತಿತ್ತು.ಅಲ್ಲದೇ ಇಲ್ಲಿನ ಜನರು ಬಹಳ ಹೋರಾಟ ಮಾಡಿದ್ದರು.ಕೇಂದ್ರ ರೇಲ್ವೆ ಸಚಿವರಿಗೆ ಹಲವಾರಿ ಬಾರಿ ಹೋಗಿ ಮನವಿ ಮಾಡಿದ್ದೆವು.ಇದರ ಫಲವಾಗಿ ರೈಲು ಸಂಖ್ಯೆ: 22157/ 22158 ಮುಂಬೈ ಚೆನ್ನೈ ಎಕ್ಸ್ಪ್ರೆಸ್, ರೈಲು ಸಂಖ್ಯೆ: 17029/17030 ಬಿಜಾಪುರ್ ಹೈದರಾಬಾದ್, ಎಕ್ಸ್ಪ್ರೆಸ್ ರೈಲು ಸಂಖ್ಯೆ: 11019/11020 ಕೋಣಾರ್ಕ ಎಕ್ಸ್ಪ್ರೆಸ್ ನಿಲುಗಡೆಯಾಗಲಿದೆ. ರೈಲು ನಿಲುಗಡೆಯಾಗಬೇಕೆಂಬುದು ಇಲ್ಲಿನ ಜನರ ಬಹು ದಿನಗಳ ಬೇಡಿಕೆ ಈಡೇರಿದೆ ಎಂದರು.
ಈ ಸಂದರ್ಭದಲ್ಲಿ ಶಿವರಾಜ ಇಂಗಿನಶೆಟ್ಟಿ, ಮಹ್ಮದ್ ಉಬೇದುಲ್ಲಾ,ಶಿವಕುಮಾರ ಇಂಗಿನಶೆಟ್ಟಿ, ಕನಕಪ್ಪ ದಂಡಗುಲಕರ್,ಚಂದ್ರಕಾಂತ ಗೊಬ್ಬೂರಕರ್,ಮಹಾದೇವ ಗೊಬ್ಬೂರಕರ್,ಡಾ.ಹಮ್ದ್ ಪಟೇಲ್, ಹಾಷಮ್ ಖಾನ್,ದತ್ತಾ ಫಂಡ್, ದಿನೇಶ ಗೌಳಿ ಇತರರು ಇದ್ದರು.
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…