ಕಲಬುರಗಿ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ವಾಯು ವಿಹಾರ ಬಳಗಕ್ಕೆ ಆಗಮಿಸಿದ ದೇವಿಂದ್ರಪ್ಪ ಮರತೂರ ಅವರನ್ನು ಸಿದ್ಧರಾಮೇಶ್ವರ ವೃತ್ತ ವಾಯು ವಿಹಾರ ಬಳಗದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಅವರು ಅಧಿಕಾರ ಸಿಗಲು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ಜಿಲ್ಲೆಯ ಸಚಿವರು ಮತ್ತು ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಸಹಾಯ ಸಹಕಾರದಿಂದ ಅಧಿಕಾರ ಸಿಕ್ಕಿದೆ ಎಂದರು.
ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಸುಮಾರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಾದ ದೇವಿಂದ್ರಪ್ಪ ಮರತೂರ ಸಿಕ್ಕಿದ್ದು ಸಂತೋಷವಾಗಿದೆ. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಹಕಾರದಿಂದ ಉನ್ನತ ಮಟ್ಟದ ರಾಜ್ಯ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷರು ಆಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ವೀರಣ್ಣಗೌಡ ಪಾಟೀಲ ಮಲ್ಲಾಬಾದ ನಮ್ಮ ವಾಯು ವಿಹಾರ ಬಳಗ ಸದಸ್ಯರಿಗೆ ಸರ್ಕಾರ ಗುರುತಿಸಿ ಉನ್ನತ ನೀಡಿದೆ ಬಹಳಷ್ಟು ಹೆಮ್ಮೆಯ ವಿಷಯ ಎಂದು ಹೇಳಿದರು.
ವಾಯು ವಿಹಾರ ಬಳಗದವರಾದ ಹಣಮಂತರಾಯಗೌಡ ಉದನೂರ, ಹುಲ್ಲಕಂಠರಾಯ ಎಸ್.ಎಂ. ಅರಳಗೂಂಡಗಿ, ಶಾಂತಪ್ಪ ನಿಂಬಾಳ, ದೇವಿಂದ್ರಪ್ಪ ಕೋಳಕೂರ, ಶಿರೆಡ್ಡಿ, ಗೋಪಾಲ ದೋಡಮನಿ, ನಾನಾಗೌಡ ಕೂಡಿ, ನಾಸಿ ನಾಯಕಲ್, ತುಕಾರಾಮ ಪಾಟೀಲ, ಮಹಾಂತೇಶ ಪಾಟೀಲ, ಶಿವಶಂಕರ ಬಿರಾದಾರ, ಶಿವಶರಣಪ್ಪ ಕೋಬಾಳ, ಮಾರಾಯ, ಮಹಾಂತಗೌಡ, ಶ್ರೀಶೈಲ ಭೂಳೂರಗಿ, ಪ್ರಭು ಗೊಬ್ಬರ, ಶಿವುಕುಮಾರ ಬಿದರಿ, ಶರಣಕುಮಾರ ಬಿಲ್ಲಾಡ, ನಾಗಣ್ಣಗೌಡ, ಚೌದ್ರಿ, ಬಿ.ಎಂ.ಪಾಟೀಲ ಕಲ್ಲೂರ ಇತರರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…