ಕಲಬುರಗಿ: ನವದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಮತ್ತು ಲಲಿತ ಕಲಾ ಅಕಾಡೆಮಿ ಎರಡೂ ಸಂಸ್ಕøತಿ ಸಚಿವಾಲಯದ ಸ್ವಾಯತ್ತ ಸಂಸ್ಥೆಗಳು ಜಂಟಿಯಾಗಿ ಭಾನುವಾರ ‘ವಿಕ್ಷಿತ್ ಭಾರತ್ ರಾಯಭಾರಿ ಕಲಾವಿದರ ಕಾರ್ಯಾಗಾರ’ ವನ್ನು ಆಯೋಜಿಸಿದ್ದವು. ಆದರೆ ಹೊಸದಿಲ್ಲಿಯ ಪುರಾಣ ಕ್ವಿಲ್ಲಾದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಘಟಕರ ಅನುಮತಿ ಮೇರೆಗೆ ಕಲಬುರಗಿ ನಗರದ ಕಲಾವಿದರು ಗೂಗಲ್ ಫಾರ್ಮ್ ಮೂಲಕ ಹೆಸರು ನೋಂದಾಯಿಸಿ ಶರಣಬಸವ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ನೇರ ಪ್ರದರ್ಶನ ನೀಡಿದರು.
ರಾಷ್ಟ್ರದ ಕಲಾವಿದರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ನಮೋ ಆಪ್ ಮೂಲಕ ಸಂವಾದ ನಡೆಸಿದರು.
ನಗರದ ಕಲಾವಿದರಾದ ಸುಬ್ಬಯ್ಯ ನೀಲಾ, ರೆಹಮಾನ್ ಪಟೇಲ್, ಮಹಮ್ಮದ್ ಅಯಾಜೋದ್ದಿನ್ ಪಟೇಲ್, ಸೈಯದ್ ಮುಸ್ತಫಾ, ನಿಜಲಿಂಗ್ ಮುಗಳಿ, ಶಾಹೆದ್ ಪಾμÁ, ರಜನಿ ತಳವಾರ, ಭಾಗ್ಯಶ್ರೀ ಇಂಡಿ, ಸುರೇಂದ್ರ ಕುಡಪಣೆ, ಪ್ರನಾಲಿ ಹರ್ಪುಡೆ ಸೇರಿದಂತೆ ಹಲವರು ತಮ್ಮ ಕ್ಯಾನ್ವಾಸ್ ಮೂಲಕ ದೇಶದ ವರ್ತಮಾನ ಮತ್ತು ಭವಿಷ್ಯದ ಅಭಿವೃದ್ಧಿಯ ಬಗ್ಗೆ ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಿದರು.
ಈ ಒಂದು ದಿನದ ಕಾರ್ಯಾಗಾರದಲ್ಲಿ ರಚಿಸಿದ ವರ್ಣಚಿತ್ರಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ದೃಶ್ಯ ಕಲಾ ವಿಭಾಗದಲ್ಲಿ ಪ್ರದರ್ಶಿಸಲಾಯಿತು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…