ಹೈದರಾಬಾದ್ ಕರ್ನಾಟಕ

50 ಲಕ್ಷ ರೂ.ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ

ಕಲಬುರಗಿ; ದಕ್ಷಿಣ ಮತಕ್ಷೇತ್ರದ ಕೋಟನೂರ ಡಿ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ಆವರಣದ ಕಂಪೌಂಡ್ ಮತ್ತು ಅಂಬೇಡ್ಕರ್ ಭವನದ ಅಂದಾಜು ಮೊತ್ತ 50 ಲಕ್ಷ ರೂಪಾಯಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ನೆರವೇರಿಸಿದರು.

ನಂತರ ಅವರು ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯದ ಬಂಧುಗಳ ಪರವಾಗಿ ಮತ್ತು ದಕ್ಷಿಣ ಮತಕ್ಷೇತ್ರದ ಎಲ್ಲಾ ಜನತೆಯ ಸೇವಕನಾಗಿ ಕೆಲಸ ಮಾಡಲು ನಾನು ಶಾಸಕನಾಗಿ ಬಂದಿದ್ದೇನೆ ನಿಮ್ಮೆಲ್ಲರ ಬೇಡಿಕೆಗಳನ್ನು ನನ್ನ ಐದ ವರ್ಷ ಅಧಿಕಾರ ಅವಧಿಯನ್ನು ಸಂಪೂರ್ಣಗೊಳಿಸುವ ಸಂಪೂರ್ಣ ಪ್ರಯತ್ನ ಮಾಡುತ್ತೇನೆ ನಾನು ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಂತೆ ಸುಮಾರು 50 ಲಕ್ಷ ರೂಪಾಯಿ ಅನುದಾನವನ್ನು ನೀಡಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುತ್ತೇನೆ ಅದರಂತೆ ಇನ್ನುಳಿದ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಕಾಂಗ್ರೆಸ್ ಮುಖಂಡ ದಿನೇಶ್ ದೊಡ್ಡಮನಿ ಮಾತನಾಡಿ ನಮ್ಮ ಶಾಸಕರು ನುಡಿದಂತೆ ನಡೆದಿದ್ದಾರೆ ನಾನು ಆಯ್ಕೆಯಾದ ಮೊದಲನೇ ಬಜೆಟ್ ನಲ್ಲಿ ಡಾ. ಬಿಆರ್ ಅಂಬೇಡ್ಕರ್ ಆವರಣದ ಕಾಂಪೌಂಡ್ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ನುಡಿದಿರುತ್ತಾರೆ,ಅದರಂತೆ 50 ಲಕ್ಷ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸುವ ಮೂಲಕ ಇಂದು ನಮ್ಮ ಆಸೆಯನ್ನು ಎತ್ತು ಹಿಡಿದಿದ್ದಾರೆ ಅವರಿಗೆ ನನ್ನ ಸಮಾಜದ ವತಿಯಿಂದ ಮತ್ತು ಗ್ರಾಮದ ವತಿಯಿಂದ ಕೃತಜ್ಞತೆ ಗಳನ್ನು ಸಲ್ಲಿಸುತ್ತೇನೆ ಎಂದರು.

ಇದೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಪಂಚಾಯತ್ ಅಧ್ಯಕ್ಷ ಚಂದ್ರಕಾಂತ್ ಪೂಜಾರಿ,ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಶ್ವೇತಾ ದಿನೇಶ ದೊಡ್ಡಮನಿ,ಉಪಾಧ್ಯಕ್ಷರಾದ ಕುಪೆಂದ್ರ ನಾಗನಳ್ಳಿ,ಸದಸ್ಯರಾದ ಶ್ರೀನಿವಾಸ ದೊಡ್ಡಮನಿ, ಶಿವರಾಜ ಜಾನಿ,ಸಂತೋಷ್ ಮೇಲ್ಮನಿ,ಲಕ್ಕಪ್ಪ ಪೂಜಾರಿ,ಸಲೀಮಸಾಬ್, ಶಿವಪುತ್ರ ಮಾಲಿಪಾಟೀಲ್, ಭೀಮಾಶಂಕರ್ ನಾಗನಳ್ಳಿ, ಸೂರ್ಯಕಾಂತ್ ಕಣ್ಣಿ, ರಾಚಾಯ್ಯಸ್ವಾಮಿ ಹಿರೇಮಠ, ಮಹದೇವಪ್ಪ ಪೂಜಾರಿ, ಬಾಬು ಹಾಡಗಿಲ್, ಕಲ್ಯಾಣಪ್ಪ ಹಂಗರಗಿ, ಶರಣಪ್ಪ ಪರ್ತಾಬಾದ್, ಪ್ರದೀಪ್ ಚಿಂಚನಸೂರ್, ಭೀಮಾಶಂಕರ ಶಿಂದೆ ಸೇರಿದಂತೆ ಮಹಿಳೆಯರು, ಯುವಕರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago