ಕಲಬುರಗಿ: ಮಾರ್ಚ 11ರಂದು ಪೂಜ್ಯ ಮಾತೋಶ್ರೀ ಅವ್ವಾಜಿಯವರ ಪುಣ್ಯತಿಥಿಯಂದೇ ನನಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ದೊರಕಿದ್ದು ಅವ್ವಾಜಿಯವರ ಆಶೀರ್ವಾದದಿಂದ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ ಅಭಿಪ್ರಾಯ ಪಟ್ಟರು.
ನಗರದ ಪೂಜ್ಯ ಡಾ. ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ವತಿಯಿಂದ ಶುಕ್ರವಾರದ ಇಳಿಸಂಜೆಯಲ್ಲಿ ಏರ್ಪಡಿಸಿದ್ದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು ಈ ಗೌರವ ಡಾಕ್ಟರೇಟ್ ಇಡೀ ಹೆಣ್ಣು ಸಂಕುಲಕ್ಕೆ ಸಲ್ಲಿಸಿದ ಗೌರವವಾಗಿದೆ. ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಸತತ ಪ್ರಯತ್ನದಿಂದ ಹಾಗೂ ತಮ್ಮೆಲ್ಲರ ಸಹಕಾರದಿಂದ ಬೆಳೆದ ಸಂಘದಲ್ಲಿ ಅನ್ನದಾಸೋಹ, ಜ್ಞಾನದಾಸೋಹ ಸೇರಿದಂತೆ ಶರಣರ ಸೇವೆ ಮಾಡುವ ಭಾಗ್ಯ ನನ್ನದಾಗಿದೆ ಎಂದು ಸಂತಸದಿಂದ ನುಡಿದರು.
ಸಂಘದಡಿಯಲ್ಲಿ ನಡೆಯುವ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಾಗೂ ವಿಶ್ವವಿದ್ಯಾಲಯದಲ್ಲಿ ವಿದ್ಯಾಥಿನಿಯರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು ಸ್ತ್ರೀ ಸಬಲೀಕರಣಕ್ಕೆ ಮುನ್ನುಡಿಯಾಗಿದೆ. ನಮ್ಮಲ್ಲಿ ಮಹಿಳೆಯರಿಗೆ ತಾಯಿಯ ಸ್ಥಾನವಿದೆ. ಜ್ಞಾನದಾಸೋಹದಿಂದ ಸರಸ್ವತಿ ನೆಲೆಸಿದ್ದು, ಅನ್ನದಾಸೋಹದಿಂದ ಅನ್ನಪೂರ್ಣೆಶ್ವರಿ ನೆಲೆಗೊಂಡು ನಿಸ್ವಾರ್ಥ ಸೇವೆಯಿಂದ ಕಾಯಕ ಮಾಡುತ್ತಿರುವ ಶರಣ ಸಂಸ್ಥಾನದ ಮೇಲೆ ಮಾತೆ ಲಕ್ಷ್ಮೀಯ ಕೃಪಾಕಟಾಕ್ಷವಿದೆ ಎಂದರು.
ಇದಕ್ಕೂ ಮೊದಲು ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ, 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರ ಜೊತೊಗೂಡಿದ ಕುಮಾರಿ ಭವಾನಿ ಎಸ್ ಅಪ್ಪ, ಕುಮಾರಿ ಶಿವಾನಿ ಎಸ್ ಅಪ್ಪ ಹಾಗೂ ಕುಮಾರಿ ಮಹೇಶ್ವರಿ ಎಸ್ ಅಪ್ಪ ಅವರನ್ನು ವಿಜ್ರಂಭಣೆಯಿಂದ ಹಾಗೂ ಡೊಳ್ಳು ಕುಣಿತದೊಂದಿಗೆ ಬರಮಾಡಿಕೊಳ್ಳಲಾಯಿತು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಹಿನ್ನಲೆಯಲ್ಲಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿ ನಡೆಯುತ್ತಿರುವ ಕಲಬುರಗಿ, ಬೀದರ, ಬಸವಕಲ್ಯಾಣ ಹಾಗೂ ಸುರಪುರದ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ನಿರ್ದೇಶಕರು, ಪ್ರಾಚಾರ್ಯರು ಒಳಗೊಂಡಂತೆ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಭೋದಕ ಹಾಗೂ ಭೋದಕೆತರ ಸಿಬ್ಬಂದಿ ವರ್ಗದವರು ಹಾಗೂ ನಗರದ ಗಣ್ಯರು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು ಸೇರಿದಂತೆ ಸಹಸ್ರಾರು ಭಕ್ತರು ಸನ್ಮಾನಿಸಿ ಗೌರವಿಸಿದರು. ಈ ರೀತಿಯಾಗಿ ಕಿಕ್ಕಿರಿದು ತುಂಬಿದ್ದ ಭವನದಲ್ಲಿ ಅವ್ವಾಜಿಯವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂತು.
ಅಭಿನಂದನಾ ಕಾರ್ಯಕ್ರಮದಲ್ಲಿ ಬೆಳಗುಂಪಿಯ ಬೃಹನ್ಮಠದ, ಪರಮ ಪೂಜ್ಯ ಶ್ರೀ ಷ. ಬ್ರ. ಅಭಿನವ ಪರ್ವತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಉದ್ಘಾಟಕರಾದ ಶರಣಬಸವ ವಿವಿಯ ಉಪಕುಲಪತಿ ಡಾ. ನಿರಂಜನ್ ವಿ ನಿಷ್ಠಿ, ಸಮಕುಲಪತಿ ಪ್ರೊ. ವಿ. ಡಿ. ಮೈತ್ರಿ, ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ, ಶ್ರೀಮತಿ ಶಕುಂತಲಾ ಭೀಮಳ್ಳಿ, ಶ್ರೀಮತಿ ಗೋದುತಾಯಿ ಭೀಮಳ್ಳಿ, ಶ್ರೀ ಶಾಂತಲಾ ನಿಷ್ಠಿ ಸೇರಿದಂತೆ ಎಲ್ಲಾ ನಿಷ್ಠಿ, ದೇಶಮುಖ ಹಾಗೂ ಭೀಮಳ್ಳಿ ಪರಿವಾರದವರು ಸೇರಿದಂತೆ ಇತರ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ನೀಲಾಂಬಿಕಾ ಪೋಲಿಸ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುಮಂಗಲಾ ರೆಡ್ಡಿ ನಿರೂಪಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…