ಸ್ವಾತಂತ್ರ್ಯ ಪೂರ್ವದಲ್ಲಿಯೇ ಹೆಣ್ಣು ಮಕ್ಕಳಿಗಾಗಿ ಶರಣ ಸಂಸ್ಥೆಯಿಂದ ಶಾಲೆ ಆರಂಭಿಸಿದ್ದು ಶ್ಲಾಘನೀಯ

ಕಲಬುರಗಿ: ಉಹೆಗೂ ನಿಲುಕಲಾರದ ವಿಷಯವೆಂದರೆ, ಸ್ವಾತಂತ್ರ್ಯ ಪೂರ್ವದ 1934ನೇ ಇಸವಿಯಲ್ಲಿ ಶರಣ ಸಂಸ್ಥಾನದಿಂದ ಹೆಣ್ಣು ಮಕ್ಕಳಿಗಾಗಿಯೇ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪನವರು ಶಾಲೆ ಆರಂಭಿಸಿದ್ದು. ಸುದ್ದಿ ಸಂಸ್ಥೆಗಳೆ ಇರದ ಕಾಲದಲ್ಲಿ ಪೂಜ್ಯ ಅಪ್ಪಾಜಿಯವರು ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಶ್ರಮ ಪಟ್ಟಿರುವುದು ಹೆಮ್ಮೆಯ ವಿಷಯ ಎಂದು ಬೆಂಗಳೂರಿನ ಇಸ್ರೋದ ವಿಜ್ಞಾನಿ ಶ್ರೀಮತಿ ನಂದಿನಿ ಹರಿನಾಥ ಅಭಿಪ್ರಾಯ ಪಟ್ಟರು.

ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶನಿವಾರದಂದು ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ-2024ಯಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಸ್ರೋದ ಚಂದ್ರಯಾನ ಉಡಾವಣೆಯಲ್ಲಿ ಪುರುಷರ ಜೊತೆ ಹೆಣ್ಣು ಮಕ್ಕಳು ಕೂಡ 24ಗಂಟೆ ಕೆಲಸ ಮಾಡಿದ್ದಾರೆ. ಮಹಿಳೆ ಮಾತ್ರ ಸಾಂಸ್ಕøತಿಕವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಹಾಗೂ ಇಂದಿನ ದಿನ ಕಾಲಕ್ಕೆ ತಕ್ಕಂತೆ ಮಹಿಳೆ ತನ್ನನ್ನು ತಾನು ಅಪ್‍ಡೇಟ್ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿಯೇ ಪ್ರತಿಶತ 45% ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದು, ನಮ್ಮ ಶರಣಬಸವ ವಿಶ್ವವಿದ್ಯಾಲಯದಲ್ಲಿ ಪ್ರತಿಶತ 65% ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆಂದರೆ ಇದು ಸಾಧ್ಯವಾಗಿದ್ದು ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ದೂರದೃಷ್ಠಿಯ ಪರಿಣಾಮ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿದ ಶ್ರೇಯ ಪೂಜ್ಯ ಅಪ್ಪಾಜಿಯವರಿಗೆ ಸಲ್ಲುತ್ತದೆ ಈ ಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ಅಪ್ಪಾಜಿಯವರು ಕೆಜಿ ಇಂದ ಪಿಜಿವರಗೆ ಶಿಕ್ಷಣ ಆರಂಭಿಸಿದ್ದು, ಅವರ ಕನಸಿನಂತೆ ವಿಶ್ವವಿದ್ಯಾಲಯ ಕೂಡ ಸ್ಥಾಪನೆ ಮಾಡಿ ಶೈಕ್ಷಣಿಕ ಹಬ್ ಆಗಿ ಪರಿವರ್ತಿಸಿದ್ದಾರೆ ಎಂದು ಹೇಳಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ, ಶರಣಬಸವೇಶ್ವರ ವಿದ್ಯಾವರ್ಧಕ ಚೇರಪರ್ಸನ್ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿಯವರು, ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀಮತಿ ಶಕುಂತಲಾ ಪಾಟೀಲ ಜವಳಿ ಹಾಗೂ ಶ್ರೀಮತಿ ಲೀಲಾವತಿ ಪಾಟೀಲ ಜವಳಿಯವರಿಗೆ “ಸ್ತ್ರೀ ರತ್ನ ಪ್ರಶಸ್ತಿ”, ಶ್ರೀಮತಿ ಲಕ್ಷ್ಮೀ ಶಿವಶರಣಪ್ಪ ಅಡಕಿ ಹಾಗೂ ಶ್ರೀಮತಿ ಶಾಂತೇಶ್ವರಿ ಎಸ್ ಶಾಂತಗಿರಿ ವಾಗೆಯವರಿಗೆ “ಸ್ತ್ರೀ ಶಕ್ತಿ ಪ್ರಶಸ್ತಿ”, ಗೀತಾ ಪಾಟೀಲ ಅವರಿಗೆ “ವೀರ ಮಹಿಳೆ ಪ್ರಶಸ್ತಿ”, ಡಾ. ವಿಜಯಲಕ್ಷ್ಮೀ ಧುಮಾಲೆಯವರಿಗೆ “ಕಾಯಕ ರತ್ನ ಪ್ರಶಸ್ತಿ”, ಡಾ. ಕಲಶೆಟ್ಟಿ ಸ್ವಾತಿ ಮಲ್ಲಿನಾಥ ಅವರಿಗೆ “ವುಮೆನ್ ಇನ್ ಎಕ್ಸೆಲೆನ್ಸ್ ಅವಾರ್ಡ-2024” ನೀಡಿ ಗೌರವಿಸಿದರು. ನವದೆಹಲಿಯಲ್ಲಿ ನಡೆದ 75ನೇ ಗಣರಾಜ್ಯೋತ್ಸವದ ಎನ್‍ಸಿಸಿ ಪರೆಡ್‍ನಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ಕುಮಾರಿ ದರ್ಶನಾ ಡಿ. ಭಾಸಗಿ ಅವರಿಗೆ ವಿಶೇಷವಾಗಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಹಾಗೂ ಐಇಐನ ಡಾ. ಶ್ರೀಧರ ಪಾಂಡೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಒಂದು ವಾರಗಳ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶೃತಿ ಹಾಗೂ ಪ್ರೊ. ಅಭಿಲಾಷಾ ನಿರೂಪಿಸಿದರೇ ಡಾ. ಶಿವಗಂಗಾ ಪಾಟೀಲ ವಂದಿಸಿದರು. ಸಮಕುಲಪತಿ ಪ್ರೊ. ವಿ. ಡಿ. ಮೈತ್ರಿ, ಐಇಐನ ಶ್ರೀ ಸೀತಾರಾಮ ಮಣ್ಣೂರ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

6 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

9 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

14 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

14 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

16 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420