ಬಿಸಿ ಬಿಸಿ ಸುದ್ದಿ

ನಮ್ಮ ಭಾಗದ ಪ್ರತಿಭೆಗಳು ಚಿತ್ರ ರಂಗದಲ್ಲಿ ಬೆಳೆಯಬೇಕಿದೆ: ರಾಜುಗೌಡ

ಸುರಪುರ: ತಾಲ್ಲೂಕಿನ ಮಾಚಗುಂಡಾಳ ಗ್ರಾಮದ ಹುಚ್ಚ ಪಿಡ್ಡೇಶ್ವರ ದೇವಸ್ಥಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿಭೆಗಳು ತಯಾರಿಸುತ್ತಿರುವ ಚಿ.ಸೌ.ಕನ್ಯಾಕುಮಾರಿ ಚಲನ ಚಿತ್ರದ ಮೂಹೂರ್ತ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಶಾಸಕ ನರಸಿಂಹ ನಾಯಕ(ರಾಜುಗೌಡ) ಉದ್ಘಾಟಿಸಿ ಮಾತನಾಡಿ,ನಮ್ಮ ಉತ್ತರ ಕರ್ನಾಟಕ ಅದರಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಳ್ಳೆಯ ಪ್ರತಿಭಾವಂತರಿದ್ದು,ಅವರಿಗೆ ಚಿತ್ರರಂಗದಲ್ಲಿ ಬೆಳೆಯಲು ಅವಕಾಶದ ಅವಶ್ಯಕತೆಯಿದೆ.ಈಗಾಗಲೇ ಅನೇಕರು ಚಿತ್ರರಂಗದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದು,ಅದರಂತೆ ಇಂದು ನಮ್ಮ ಕ್ಷೇತ್ರದ ಯುವಕರು ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ.ಈಗ ಮೂಹೂರ್ತಗೊಂಡಿರುವ ಚಿ.ಸೌ.ಕನ್ಯಾಕುಮಾರಿ ಚಲನಚಿತ್ರ ಆದಷ್ಟು ಬೇಗ ಶೂಟಿಂಗ್ ಪೂರ್ಣಗೊಳಿಸಿ ಬಿಡುಗಡೆಗೊಂಡು ಯಶಸ್ಸು ಕಾಣಲೆಂದು ಹಾರೈಸಿದರು.

ನಂತರ ಚಿತ್ರದ ಯುವ ನಾಯಕ ನಟ ರಾಘವೇಂದ್ರ ಮಾಚಗುಂಡಾಳ ಮಾತನಾಡಿ,ನಮ್ಮ ಭಾಗದಲ್ಲಿನ ಎಲ್ಲ ಮಿತ್ರರು ಸೇರಿ ಈ ಚಿತ್ರ ಮಾಡಲು ತಯ್ಯಾರಾಗಿದ್ದೆವೆ,ಇದಕ್ಕೆ ನಾಡಿನ ಎಲ್ಲರು ಸಹಕರಿಸುವ ಮೂಲಕ ಚಿತ್ರ ರಂಗಕ್ಕೆ ನಮ್ಮ ಕಿರು ಕಾಣಿಕೆಗೆ ಗೌರವಿಸಬೇಕೆಂದರು. ನಮ್ಮ ಕೆಂಭಾವಿಯ ಲೆಮನ್ ಪರಶುರಾಮ ಅವರು ಚಿತ್ರ ಕತೆ ಬರೆದು ನಿರ್ದೇಶಿಸುತ್ತಿದ್ದು,ನಮ್ಮದೆ ತಾಲ್ಲೂಕಿನ ಚಿತ್ರ ನಟರಾದ ಗಂಗಾಧರ ಗೋಗಿಯವರು ಮತ್ತು ನಾಯಕಿ ನಟಿಯಾಗಿ ಪೂಜಾರವರು ಮತ್ತು ಇನ್ನು ಅನೇಕ ಜನ ಹಿರಿಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ.ಚಿತ್ರದ ಛಾಯಾ ಗ್ರಹಣವನ್ನು ಶ್ರೀರಾಮ ಜಂಬಗಿಯವರು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಇದಕ್ಕು ಮುನ್ನ ತಾಲ್ಲೂಕಿನ ಕೂಡಲಗಿ ಗ್ರಾಮದಲ್ಲಿರುವ ಸದ್ಗುರು ಶಾಂತಾನಂದ ಸರಸ್ವತಿ ಬಾಬಾ ಮಹಾರಾಜರ ಮಠದಲ್ಲಿ ಸಿದ್ದ ಗಣಪತಿ ಮುಂದೆ ಚಿತ್ರದ ಟೈಟಲ್ ಅನಾವರಣ ನಡೆಸಲಾಯಿತು.ನಂತರ ಮಾಚಗುಂಡಾಳದ ಹುಚ್ಚ ಪಿಡ್ಡೇಶ್ವರ ದೇವಸ್ಥಾನದಲ್ಲಿ ಮೂಹೂರ್ತ ನಡೆಸಲಾಯಿತು.

ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದ ಶ್ರೀ ಶಾಂತರುದ್ರಮುನಿ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿದ್ದರು. ನಿಂಗಯ್ಯ ಮುತ್ಯಾ ಬಂಡೆಪ್ಪನಹಳ್ಳಿ ಹಾಗು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ (ತಾತಾ),ಯಲ್ಲಪ್ಪ ಕುರಕುಂದಿ,ದೊಡ್ಡ ದೇಸಾಯಿ ದೇವರಗೋನಾಲ,ಬಲಭಿಮ ನಾಯಕ ಬೈರಿಮರಡಿ, ಭೀಮಣ್ಣ ಬೇವಿನಾಳ, ಶರಣು ನಾಯಕ ಬೈರಿಮರಡಿ,ಚಿತ್ರ ನಿರ್ದೇಶಕ ಲೆಮನ್ ಪರಶುರಾಮ,ನಿರ್ಮಾಪಕ ಎಸ್.ಆರ್. ಪಾಟೀಲ,ಛಾಯಾ ಗ್ರಾಹಕ ಶ್ರೀರಾಮ ಜಂಬಗಿ,ನಟ ಗಂಗಾಧರ ಗೋಗಿ,ನಟಿ ಪೂಜಾ,ಹಾಸ್ಯನಟರಾದ ಮಲ್ಲಣ್ಣ ಬಾಚಿಮಟ್ಟಿ,ಲಾಲು ಶಿವಮೊಗ್ಗ ಸೇರಿದಂತೆ ಅನೇಕರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

4 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

7 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

13 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

13 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

14 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago