ಬಿಸಿ ಬಿಸಿ ಸುದ್ದಿ

5 ಟಿಎಂಸಿ ನೀರು ಭೀಮಾ ನದಿಗೆ ಹರಿಸಲು ಡಿಸಿ ಕಚೇರಿ ಎದುರು ಪ್ರತಿಭಟನೆ

ಕಲಬುರಗಿ; ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ನಮ್ಮ ಹಕ್ಕಿನ 5 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸಲು ತಮ್ಮ ಕಾರ್ಯಾಲಯದ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಹಾಗೂ ಮಾನ್ಯ ರಾಜ್ಯದ ರಾಜಪಾಲರಿಗೆ ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಾಜ್ಯದ ಘನವೆತ್ತ ರಾಜ್ಯಪಾಲರು ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಹಲವಾರು ಬಾರಿ ನಮ್ಮ ಕರ್ನಾಟಕ ಸೇನೆ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸದರು ಕೂಡ ಸರಕಾರವು ಯಾವುದೆ ಕ್ರಮ ಕೈಗೊಂಡಿರುವದಿಲ್ಲ.

ದಿನೆ ದಿನೆ ಭೀಮಾ ನದಿಯ ನೀರು ಬರಿದಾಗುತ್ತಿದ್ದು ಜಿಲ್ಲೆಯ ಸುಮಾರು ಜನರು ಭೀಮಾ ನದಿಯನ್ನೆ ಅವಲಂಬಿಸಿರುತ್ತಾರೆ ಅದರಿಂದ ಸಾವಿರಾರು ಏಕರೆ ಜಮೀನುಗಳು ಉಪ ಜೀವನಕ್ಕಾಗಿ ಕಬ್ಬು ಮತ್ತು ಬಾಳೆ ಬೆಳೆಯನ್ನೇ ಅವಲಂಭಿಸಿರುತ್ತಾರೆ, ನೀರು ಹರಿಸದೆ ಇರುವದರಿಂದ ಸಾವಿರಾರು ಜಾನುವಾರುಗಳು ನೀರಿಲ್ಲದೆ ಸಾವನಪ್ಪುತ್ತಿವೆ, ನೀರಿನ ಸಮಸ್ಯೆ ನಮ್ಮ ಕಲಬುರಗಿಯಲ್ಲಿ ದಿನೆ ದಿನೆ ಉಲ್ಬಣ ವಾಗುತ್ತಿದ್ದು, ಕಲಬುರಗಿ ಜನರು ಕುಡಿಯುವ ನೀರಿಗಾಗೆ ಭೀಮಾನದಿಯನ್ನೆ ಅವಲಂಬಿಸಿದ್ದು ಅಲ್ಲದೆ ವಿಷೇಶವಾಗಿ ಅಫಜಲಪೂರ. ಜೇವರ್ಗಿ ತಾಲೂಕಿನ ರೈತರು ನೀರಾವರಿಗಾಗಿ ಭಿಮಾನದಿಯನ್ನೆ ಅವಲಂಬಿಸಿರುತ್ತಾರೆ.

ರಾಜ್ಯ ಪಾಲರಿಗೂ ಮತ್ತು ಮುಖ್ಯ ಮಂತ್ರಿಗಳಿಗೂ ಸದರಿ ವಿಷಯದ ಬಗ್ಗೆ ಮನವಿ ಸಲ್ಲಿಸಿ, ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ನಮ್ಮ ಹಕ್ಕಿನ 5 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸುವಂತೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಗುತ್ತೇದಾರ್, ಜಿಲ್ಲಾ ಸಂಚಾಲಕ ರಾಜು ನಿಂಬಾಳ್ಕರ್, ಗೌರವ ಅಧ್ಯಕ್ಷ ವೆಂಕಟೇಶ ಗುತ್ತೇದಾರ, ರುಕ್ಮಯ ಗುತ್ತೇದಾರ, ಭಾಗ್ಯವಂತ ಗಡ್ಡಿಮನಿ, ಮೌನೇಶ್ ಬೆನಕನಹಳ್ಳಿ, ನಾಗರಾಜ್ ಸನ್ನೂರಕರ, ಮಹಾಂತೇಶ ಸಣಮನಿ, ವಂದನಾ ಅಕ್ಕ, ಚಂದ್ರಕಾಂತ ಗುತ್ತೇದಾರ್, ದೇವು ರಾಜೋಳಿ, ಮೇಲು ಕೂಡದುರ, ದೇವು ಗಮಗಾ ಸೇರಿದಂತೆ ಇತರರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago