ಕಲಬುರಗಿ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಸೇರಿದಂತೆ ಇತರೆಲ್ಲೆಡೆ ತಪಾಸಣಾ ಸಿಬ್ಬಂದಿ ಗಸ್ತು ಚುರುಕುಗೊಂಡಿದ್ದು, ರವಿವಾರ (ಮಾ.17 ರಂದು) ಯಡ್ರಾಮಿ ತಾಲೂಕಿನ ಯಡ್ರಾಮಿ ತಾಲೂಕಿನ ಎಸ್.ಎನ್.ಹಿಪ್ಪರಗಾ ಗ್ರಾಮದ ಬಸ ನಿಲ್ದಾಣ ಹತ್ತಿರ ವಾಹನಗಳ ತಪಾಸಣೆ ಸಂದರ್ಭದಲ್ಲಿ ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 214.560 ಲೀಟರ ಮದ್ಯ ಹಾಗೂ ವಿವಿಧ ಬ್ರಾಂಡುಗಳ 117.360 ಲೀಟರ ಬೀಯರ್ ವಶಕ್ಕೆ ಪಡೆಯಲಾಗಿದೆ.
ಮಂದೇವಾಲ ಗ್ರಾಮದ ಕಡೆಯಿಂದ ಎಸ್.ಎನ್.ಹಿಪ್ಪರಗಾ ಗ್ರಾಮದ ಕಡೆಗೆ ಬರುತ್ತಿದ್ದ ಮಾರುತಿ ಸುಜಕಿ ಈಕೋ ಕಾರ್ ನೊಂದಣಿ ಸಂಖ್ಯೆ ಕೆಎ.21 ಪಿ.4470 ರಲ್ಲಿ ಅಕ್ರಮವಾಗಿ ವಿವಿಧ ಬ್ರಾಂಡುಗಳ 214.560 ಲೀಟರ ಮದ್ಯ ಹಾಗೂ ವಿವಿಧ ಬ್ರಾಂಡುಗಳ 117.360 ಲೀಟರ ಬಿಯರನ್ನು ಹೊಂದಿ ಮಾರಾಟದ ಉದ್ದೇಶಕ್ಕಾಗಿ ಸಾಗಾಣಿಕೆ ಮಾಡುತ್ತಿರುವದನ್ನು ಪತ್ತೆ ಹಚ್ಚಿದ ಸಿ.ಪಿ.ಐ ಕವಿತಾ ನೇತೃತ್ವದ ಅಬಕಾರಿ ತನಿಖಾ ತಂಡವು ಕಾರಿನ ಸಮೇತ ಮದ್ಯವನ್ನು ವಶಕ್ಕೆ ಪಡೆದಿದೆ.
ಪ್ರಕರಣದಲ್ಲಿ ಅಬಕಾರಿ ಕಾಯ್ದೆ 1965 ಕಲಂ 11, 14, ಹಾಗೂ 15ರ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಕಲಂ 32(1) ಕಲಂ 38(ಎ)ರ ಪ್ರಕಾರ ಜಪ್ತಿಯಾದ ಮದ್ಯ ಹಾಗೂ ಬೀರ ಮುದ್ದೇಮಾಲಿನ ಮೌಲ್ಯ 1,54,952 ರೂ. ಹಾಗೂ 3 ಲಕ್ಷ ರೂ. ಮೌಲ್ಯದ ಮಾರುತಿ ಸುಜಕಿ ಈಕೋ ಕಾರ್ ಜಪ್ತಿ ಮಾಡಲಾಗಿದೆ. ಅಕ್ರಮ ಮದ್ಯ ಸಾಗಣೆ ಹಿನ್ನೆಲೆಯಲ್ಲಿ ಕಾರ್ ಚಾಲಕ ಯಡ್ರಾಮಿ ತಾಲೂಕಿನ ರವಿಕುಮಾರ ತಂದೆ ಚಂದ್ರಾಮ ಹುಣಚಾಳ ಇವರ ವಿರುದ್ಧ ಅಬಕಾರಿ ಇಲಾಖೆಯ ಕಲಬುರಗಿ ಉಪ ವಿಭಾಗ ಕಚೇರಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುರೆಸಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…