ಒಮ್ಮೆ ಸಿಂಹಕ್ಕೆ ಜೋರಾಗಿ ಹಸಿವೆಯಾಯ್ತು, ಪಕ್ಕದಲ್ಲಿದ್ದ ನರಿಯೊಂದಿಗೆ ಹೇಳಿತು: “ನನಗೇನಾದರು ತಿನ್ನಲು ತಂದು ಕೊಡು, ಇಲ್ಲದಿದ್ದರೆ ನಾನು ನಿನ್ನನ್ನು ಕೊಂದು ತಿನ್ನುತ್ತೇನೆ.” ನರಿ ನೇರ ಒಂದು ಕತ್ತೆಯ ಬಳಿ ಹೋಗಿ ಹೇಳಿತು: “ಸಿಂಹ ನಿನ್ನನ್ನು ರಾಜನನ್ನಾಗಿ ಮಾಡ್ತಾನಂತೆ,ಬಾ ನನ್ನ ಜೊತೆ.” ಕತ್ತೆಯನ್ನು ಕಂಡಾಗ ಸಿಂಹ ಅದರ ಮೇಲೆ ಆಕ್ರಮಿಸಿತು, ಕಿವಿಯನ್ನು ಕಚ್ಚಿ ಕತ್ತರಿಸಿತು, ಆದರೆ ಕತ್ತೆ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಯಿತು.
ಕತ್ತೆ ನರಿಯೊಂದಿಗೆ ಕೇಳಿತು, “ನೀನು ನನಗೆ ಮೋಸ ಮಾಡಿ ಬಿಟ್ಟೆ ಅಲ್ವಾ?…! ” ನರಿ ಹೇಳಿತು: “ಮುಠ್ಠಾಳನಂತೆ ಮಾತಾಡ್ಬೇಡ, ನಿನ್ನ ತಲೆಗೆ ಕಿರೀಟ ತೊಡಿಸಲು ನಿನ್ನ ಕಿವಿಯನ್ನು ಕತ್ತರಿಸಿದ್ದು.”‘ ಕತ್ತೆ ಅದು ಸತ್ಯವಾಗಿರಬಹುದು ಎಂದು ಭಾವಿಸಿ ಮತ್ತೆ ಸಿಂಹದ ಬಳಿ ಹೋಯಿತು… ಸಿಂಹ ಪುನಃ ಕತ್ತೆಯನ್ನು ಆಕ್ರಮಿಸಿ ಕಚ್ಚಿ ಬಾಲವನ್ನು ಕತ್ತರಿಸಿ ಹಾಕಿತು..!, ಕತ್ತೆ ಮತ್ತೊಮ್ಮೆ ಪಾರಾಗಿ ಹೋಗಿ ನರಿಯೊಂದಿಗೆ ಕೇಳಿತು “ನೀನು ನನ್ನಲ್ಲಿ ಸುಳ್ಳು ಹೇಳಿದ್ದಲ್ವಾ?!.
ನರಿ ಹೇಳಿತು: “ಅಯ್ಯೋ ಪೆದ್ದುಮುಂಡೇದು, ನಿನಗೆ ಸಿಂಹಾಸನದಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಬೇಕಾಗಿ ತಾನೇ ನಿನ್ನ ಬಾಲವನ್ನು ಕತ್ತರಿಸಿದ್ದು”… ಕತ್ತೆ ವಾಪಸ್ ಸಿಂಹದ ಬಳಿ ಹೋಗುವಂತೆ ಮನವೊಲಿಸಿತು ನರಿ. ಈಗ ಸಿಂಹ ಕತ್ತೆಯನ್ನು ಹಿಡಿದು ಕೊಂದು ಹಾಕಿತು…! ಸಿಂಹ ನರಿಯೊಂದಿಗೆ ಹೇಳಿತು: “ನೀನು ಒಳ್ಳೆಯ ಕೆಲಸ ಮಾಡಿದೆ, ವೆಲ್ ಡನ್, ಇನ್ನು ಹೋಗಿ ಇದರ ಚರ್ಮ ಸುಲಿದು ತಾ… ನರಿ ಕತ್ತೆಯ ಚರ್ಮ ಸುಲಿದು,,,ಕತ್ತೆಯ ಮೆದುಳನ್ನು ತಿಂದು ಅದರ ಹೃದಯ, ಕರುಳು, ಶ್ವಾಸಕೋಶವನ್ನು ಸಿಂಹದ ಮುಂದೆ ತಂದಿಟ್ಟಿತು.
ಸಿಂಹ ಕೋಪದಿಂದ ಕೇಳಿತು,: “ಇದರ ಮೆದುಳು ಎಲ್ಲಿ…?” ನರಿ ಉತ್ತರಿಸಿತು: “ಅದಕ್ಕೆ ಮೆದುಳು ಎಂಬುದು ಇರಲಿಲ್ಲ ಪ್ರಭು…,ಅದು ಇದ್ದಿದ್ದರೆ ಕಿವಿ ಬಾಲ ಕಚ್ಚಿ ಕತ್ತರಿಸಿದ ನಂತರವೂ ನಿಮ್ಮ ಬಳಿ ವಾಪಸ್ ಬರ್ತಿತ್ತಾ???…!!!
ಗುಣಪಾಠ # 2024- ರಲ್ಲಿ ಮೂರನೇ ಬಾರಿ ಮತ ಚಲಾಯಿಸಲು ಬೂತಿಗೆ ಹೋಗುವ ಮೆದುಳು ಇರುವ ಭಾರತೀಯ ಮತದಾರರನ್ನು ಎಚ್ಚರಿಸಲು ಹಲವು ದಶಕಗಳ ಹಿಂದೆ ಬರೆದ “ಚಂದಾ”ಮಾಮ ಕಥೆ ಇದು…! (ಮಿತ್ರರ ಗೋಡೆಯಿಂದ) #election #status #democracy (ವಾಟ್ಸಪ್ ಕೃಪೆ)
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…